ETV Bharat / entertainment

ಅಮೆರಿಕಾ ಅಮೆರಿಕಾ ಸಿನಿಮಾಗೆ 25 ವರ್ಷ.. ಈ ಚಿತ್ರದ ಕಷ್ಟ-ಸುಖಗಳ ಬಿಚ್ಚಿಟ್ಟ ನಟ, ನಿದೇಶಕರು

ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲನ್ನು ಸೃಷ್ಟಿಸಿದ ಅಮೆರಿಕಾ ಅಮೆರಿಕಾ ಸಿನಿಮಾ ಬಿಡುಗಡೆಯಾಗಿ 25 ವರ್ಷ ಕಳೆದಿದ್ದು, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟರಾದ ರಮೇಶ್ ಅರವಿಂದ್, ಅಕ್ಷಯ್ ಆನಂದ್, ನಟಿ ಹೇಮಾ‌ ಪಂಚಮುಖಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

sandalwood-movie-america-america-celebrates-25-years
ಅಮೆರಿಕಾ ಅಮೆರಿಕಾ ಸಿನಿಮಾಗೆ 25 ವರ್ಷ.. ಈ ಚಿತ್ರದ ಕಷ್ಟ ಸುಖಗಳ ಬಗ್ಗೆ ನಟರು, ನಿದೇಶಕರು ಹೇಳಿದ್ದೇನು?
author img

By

Published : Apr 13, 2022, 7:54 AM IST

ಅಮೆರಿಕಾ ಅಮೆರಿಕಾ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮೈಲಿಗಲ್ಲು ಸಾಧಿಸಿರೋ ಸಿನಿಮಾ. ಈ ಚಿತ್ರ ಬಿಡುಗಡೆಯಾಗಿ ಬರೋಬ್ಬರಿ 25 ವರ್ಷಗಳನ್ನು ಪೂರೈಸಿದೆ. ಡೈರೆಕ್ಟರ್​ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದ ಹಾಗೂ ರಮೇಶ್ ಅರವಿಂದ್, ಅಕ್ಷಯ್ ಆನಂದ್, ಹೇಮಾ ಪಂಚಮುಖಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ ತ್ರಿಕೋನ ಪ್ರೇಮ ಕಥೆಯ ಜೊತೆಗೆ ಭಾರತ ಹಾಗು ಅಮೆರಿಕಾ ಸಂಸ್ಕೃತಿಯನ್ನ ಎತ್ತಿ ಹಿಡಿದ ಎವರ್ ಗ್ರೀನ್ ಸಿನಿಮಾ ಇದು. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್​ ಅವರ ಬತ್ತಳಿಕೆಯಿಂದ ಬಂದ ಅಮೆರಿಕಾ ಅಮೆರಿಕಾ ಸಿನಿಮಾ ಬಿಡುಗಡೆ ಆಗಿ ಬರೋಬ್ಬರಿ 25 ವರ್ಷ ಕಳೆದಿದೆ. ಕಾಲು ಶತಮಾನ ಕಳೆದರೂ ಇಂದಿಗೂ ಕೋಟ್ಯಂತರ ಸಿನಿಮಾ ಪ್ರಿಯರ ಅಚ್ಚುಮೆಚ್ಚಿನ ಚಿತ್ರವಾಗಿದೆ.

1997ರಲ್ಲಿ ರಿಲೀಸ್ ಆಗಿದ್ದ ಅಮೆರಿಕಾ ಅಮೆರಿಕಾ ಸಿನಿಮಾ, ಆ ಕಾಲದಲ್ಲಿ ನಿರ್ಮಾಪಕ ನಂದಕುಮಾರ್ ಬರೋಬ್ಬರಿ 70 ರಿಂದ 75 ಲಕ್ಷ ರೂಪಾಯಿಯಲ್ಲಿ ನಿರ್ಮಾಣ ಮಾಡಿದ್ದರು. ಆ ಕಾಲದಲ್ಲಿ 5 ಕೋಟಿಗೂ ಹೆಚ್ಚು ಕಲೆಕ್ಷನ್‌ ಮಾಡಿ, ಹಲವು ಚಿತ್ರಮಂದಿರಗಳಲ್ಲಿ ಒಂದು ವರ್ಷಗಳ ಕಾಲ ಪ್ರದರ್ಶನ ಕಂಡಿತ್ತು. ಅಮೆರಿಕದಲ್ಲಿ ರಿಲೀಸ್ ಆದ ಮೊದಲ ಕನ್ನಡ ಸಿನಿಮಾ ಎಂಬ ದಾಖಲೆ ಈ ಸಿನಿಮಾದ್ದಾಗಿದೆ. ಹೀಗೆ ಸಾಕಷ್ಟು ಸ್ಪೆಷಾಲಿಟಿ ಇರುವ ಅಮೆರಿಕಾ ಅಮೆರಿಕಾ ಸಿನಿಮಾದ, ಬಗ್ಗೆ ಮಾತನಾಡೋದಿಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟರಾದ ರಮೇಶ್ ಅರವಿಂದ್, ಅಕ್ಷಯ್ ಆನಂದ್, ನಟಿ ಹೇಮಾ‌ ಪಂಚಮುಖಿ, ನಿರ್ಮಾಪಕ ನಂದಕುಮಾರ್, ಸಂಗೀತ ನಿರ್ದೇಶಕ ಮನೋಮೂರ್ತಿ, ಹಿರಿಯ ನಟ ದತ್ತಣ್ಣ ಸೇರಿದಂತೆ ಕೆಲ ತಾರೆಯರು ಉಪಸ್ಥಿತರಿದ್ದರು.

ಅಮೆರಿಕ ಅಮೆರಿಕ ಸಿನಿಮಾದ ಬಗ್ಗೆ ನಟ, ನಿರ್ದೇಶಕರ ಅಭಿಪ್ರಾಯ

ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಅರವಿಂದ್, ಅಮೆರಿಕಾ ಅಮೆರಿಕಾ ಸಿನಿಮಾ ನನ್ನ ಸಿನಿ ಜರ್ನಿಯ ಬೆಸ್ಟ್ ಸಿನಿಮಾಗಳಲ್ಲಿ ಒಂದು. ನಾನು, ನಾಗತಿಹಳ್ಳಿ ಚಂದ್ರಶೇಖರ್ ಅಮೆರಿಕದಲ್ಲಿ ಕನ್ನಡ ಸಿನಿಮಾ ಮಾಡಬೇಕು ಅಂತಾ ಹೋಗಿದ್ವಿ. ಆದರೆ ಅಮೆರಿಕಾದಲ್ಲಿ ಆದ ಅನುಭವಗಳು ಮರೆಯೋದಿಕ್ಕೆ ಆಗೋಲ್ಲ ಎಂದರು. ಇದರ ಜೊತೆಗೆ ಈ ಸಿನಿಮಾಗಾಗಿ ಎರಡನೇ ಬಾರಿ ವೀಸಾ ಮಾಡಿಸಿದ್ದು, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಾಯಕಿ ಹೇಮಾ ಅವರನ್ನು ಬದಲಾವಣೆ ಮಾಡಬೇಕು ಅಂದಾಗ ಎದುರಾದ ಚಾಲೆಂಜ್ ಮತ್ತು ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ನನ್ನ ಪಾತ್ರದ ರಮೇಶ್ ಅರವಿಂದ್ ತಮ್ಮದೇ ಮಾತುಗಳಲ್ಲಿ ವರ್ಣಿಸಿದರು. ಈ ವೇಳೆ ಅಮೆರಿಕಾ ಅಮೆರಿಕಾ ಪುಸ್ತಕವನ್ನ ಗಿರೀಶ್ ಕಾಸರವಳ್ಳಿ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅನಂತರ ಮಾತು ಶುರು ಮಾಡಿದ ನಿರ್ದೇಶಕ ನಾಗತಿಹಳ್ಳಿ, ಈ ಸಿನಿಮಾ ಶುರು ಮಾಡೋದಿಕ್ಕೆ ಕಾರಣ ಮುದ್ದು ಕೃಷ್ಣ. ಯಾಕೆಂದರೆ ಈ ಸಿನಿಮಾ ಮಾಡೋದಿಕ್ಕೆ ನಿರ್ಮಾಪಕ ಸಿಗದೆ ಇದ್ದ ಸಮಯದಲ್ಲಿ ನನಗೆ ನಂದಕುಮಾರ್ ಅವರನ್ನು ಪರಿಚಯ ಮಾಡಿಸಿ ಸಿನಿಮಾ ಮಾಡೋದಕ್ಕೆ ಸಹಾಯ ಮಾಡಿದ್ದರು. ಆ ಸಮಯದಲ್ಲಿ ನಾನು ಅಮೆರಿಕಕ್ಕೆ ಹೋದಾಗ ತಬ್ಬಲಿಯಾಗಿ ನಿಂತಿದ್ದೆ. ನಾವು ಸಿನಿಮಾ ಶೂಟಿಂಗ್ ಅಂತಾ ಅಮೆರಿಕಕ್ಕೆ ಹೋರಟಾಗ, ಪ್ರಖ್ಯಾತ ಸಿನಿಮಾ ನಿರ್ಮಾಪಕರು ನಮ್ಮನ್ನ ಗೇಲಿ ಮಾಡಿದ್ದರು. ಅಮೆರಿಕಾದಲ್ಲಿ ಸಿನಿಮಾ ಶೂಟಿಂಗ್ ಮಾಡೋದಕ್ಕೆ ಮುಖ್ಯ ಕಾರಣ ನನ್ನ ಪತ್ನಿ ಶೋಭಾ. ಈ 25 ವರ್ಷದಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಅಂದರು. ಈ ಸಿನಿಮಾದಲ್ಲಿ ಅಕ್ಷಯ್ ಆನಂದ್ ಪಾತ್ರವನ್ನು ಸುದೀಪ್ ಮಾಡಬೇಕಿತ್ತು. ದತ್ತಣ್ಣ ಅವರ ಸಹಾಯದಿಂದ ಹೇಮಾ ಪಂಚಮುಖಿ ಈ‌ ಸಿನಿಮಾಗೆ ನಾಯಕಿ ಆಗಿ ಸೆಲೆಕ್ಟ್ ಆದರು ಎಂಬುದನ್ನು ವಿವರಿಸಿದರು.

ಈ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗೋದಕ್ಕೆ ಕಾರಣ ಸಂಗೀತ ನಿರ್ದೇಶಕ ಮನೋಮೂರ್ತಿ ಮತ್ತು ಗಾಯಕರಾದ ರಾಜೇಶ್ ಕೃಷ್ಣನ್ ಮತ್ತು ಮಂಜುಳಾ ಗುರುರಾಜ್. ಹೀಗೆ ಈ ಚಿತ್ರ ಸಕ್ಸಸ್ ಆಗೋದಕ್ಕೆ ಕಾರಣಗಳನ್ನ ನಾಗತಿಹಳ್ಳಿ ಚಂದ್ರಶೇಖರ್ ಬಿಚ್ಚಿಟ್ಟರು. ಹಾಗೇ ಅಮೆರಿಕಾ ಅಮೆರಿಕಾ ಅತ್ಯುತ್ತಮ ಕನ್ನಡ ಸಿನಿಮಾ ನ್ಯಾಷನಲ್ ಅವಾರ್ಡ್ ಮತ್ತು ಅತ್ಯುತ್ತಮ ನಟ, ಅತ್ಯುತ್ತಮ ಕಥೆ, ಅತ್ಯುತ್ತಮ ಸಿನಿಮಾ ರಾಜ್ಯ ಪ್ರಶಸ್ತಿ ಪಡೆದುಕೊಂಡಿದೆ ಎಂದು ಹೇಳಿದರು. ಆ ಕಾಲದಲ್ಲಿ ಲಂಕೇಶ್ ಅವರು ಅನಾರೋಗ್ಯ ಮಧ್ಯೆಯೂ ನಮ್ಮ ಸಿನಿಮಾದ ವಿಸಿಪಿ ಕ್ಯಾಸೆಟ್ ತರಿಸಿಕೊಂಡು ಅಮೆರಿಕಾ ಅಮೆರಿಕಾ ಸಿನಿಮಾ ಬಗ್ಗೆ ಬಹಳ ಅಚ್ಚುಕಟ್ಟಾಗಿ ವಿಮರ್ಶೆ ಮಾಡಿದರು ಅಂತಾ ನಾಗತಿಹಳ್ಳಿ ಚಂದ್ರಶೇಖರ್ ಹಲವು ವಿಚಾರಗಳನ್ನ ಹಂಚಿಕೊಂಡರು.

ಇದನ್ನೂ ಓದಿ: Photos: ಶಾಸಕ ಜಮೀರ್ ನಿವಾಸದಲ್ಲಿ ಇಫ್ತಿಯಾರ್ ಕೂಟ; ನಟ ದರ್ಶನ್ ಭಾಗಿ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.