ಚಂದನವನದ ನಟಿ ಅನಿತಾ ಭಟ್ ಸಹೋದರ ಹೃದಯ ಸ್ತಂಭನದಿಂದ ನಿನ್ನೆ (ಏಪ್ರಿಲ್ 9) ನಿಧನರಾಗಿದ್ದಾರೆ. ಈ ಬಗ್ಗೆ ನಟಿ ಭಾವನಾತ್ಮಕ ಪೋಸ್ಟ್ವೊಂದನ್ನು ಶೇರ್ ಮಾಡಿದ್ದಾರೆ. ಸಹೋದರನ ಸಾವಿನ ನೋವಿನ ಬಗ್ಗೆ ಅನಿತಾ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ಅನಿತಾ ಭಟ್ ಮನೆಯಲ್ಲಿ ಇದೀಗ ಶೋಕದ ಛಾಯೆ ಆವರಿಸಿದೆ. ನಟಿಯ ಪೋಸ್ಟ್ಗೆ ಅಭಿಮಾನಿಗಳು, ಆಪ್ತರು ಮತ್ತು ಸೆಲೆಬ್ರಿಟಿಗಳು ಕಮೆಂಟ್ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.
ನಟಿಯ ಭಾವನಾತ್ಮಕ ಟ್ವೀಟ್ ಹೀಗಿದೆ..: "ನನ್ನ ಹೃದಯ ನಿನ್ನೆ ತುಂಡಾಗಿದೆ. ನನ್ನ ಸಹೋದರ ಹೃದಯ ಸ್ತಂಭನದಿಂದ ನಮ್ಮನ್ನು ಬಿಟ್ಟು ಅಗಲಿದ್ದಾರೆ. ನನಗೆ ಆಗುತ್ತಿರುವ ನೋವನ್ನು ಯಾವುದೇ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನಾನು ಒಪ್ಪಿಕೊಳ್ಳಬೇಕಾದ ಕಹಿ ಸತ್ಯ ಎಂದರೆ ಅವನು ಮತ್ತೆ ಎಂದಿಗೂ ಹಿಂತಿರುಗುವುದಿಲ್ಲ. ಆತನಿಗೆ ಸದ್ಗತಿ ಸಿಗುವಂತೆ ಅನುಗ್ರಹಿಸಿ. ಈಗ ನಿಮ್ಮ ಆಶೀರ್ವಾದ ಬೇಕು" ಎಂದು ನಟಿ ಅನಿತಾ ಭಟ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
-
A piece of my heart tore apart yesterday. My brother left us due to cardiac arrest. No words can explain the pain we are going through and the bitter truth we need to accept is he won't come back. Please bless him to get Sadgati. Need lots of yours blessing now 🙏🏻 pic.twitter.com/Ww9QOs1wog
— Anita Bhat (@IamAnitaBhat) April 10, 2023 " class="align-text-top noRightClick twitterSection" data="
">A piece of my heart tore apart yesterday. My brother left us due to cardiac arrest. No words can explain the pain we are going through and the bitter truth we need to accept is he won't come back. Please bless him to get Sadgati. Need lots of yours blessing now 🙏🏻 pic.twitter.com/Ww9QOs1wog
— Anita Bhat (@IamAnitaBhat) April 10, 2023A piece of my heart tore apart yesterday. My brother left us due to cardiac arrest. No words can explain the pain we are going through and the bitter truth we need to accept is he won't come back. Please bless him to get Sadgati. Need lots of yours blessing now 🙏🏻 pic.twitter.com/Ww9QOs1wog
— Anita Bhat (@IamAnitaBhat) April 10, 2023
ಅನಿತಾ ಭಟ್ ಪರಿಚಯ.. 2008 ರಲ್ಲಿ ಬಿಡುಗಡೆಯಾದ 'ಸೈಕೋ' ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟು, ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ನಟಿ ಅನಿತಾ ಭಟ್. ಈಗಲೂ 'ಸೈಕೋ' ಸಿನಿಮಾದ ಹಾಡುಗಳನ್ನು ಜನರು ಗುನುಗುತ್ತಿರುತ್ತಾರೆ. ಈ ಚಿತ್ರವೂ ಅಷ್ಟೊಂದು ಹಿಟ್ ಆಗದಿದ್ದರೂ ಕೂಡ ಅಪಾರ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಬಳಿಕ ಸ್ವಲ್ಪ ದಿನಗಳ ಕಾಲ ನಟನೆಯಿಂದ ದೂರವೇ ಇದ್ದ ಅನಿತಾ, ನಂತರ ಕೆಲವೊಂದು ಐಟಮ್ ಸಾಂಗ್ ಗಳಲ್ಲಿ ಕಾಣಿಸಿಕೊಂಡರು. ಅದಾಗಿ 'ಬೆಂಗಳೂರು 69', 'ಕಲಿವೀರ', 'ಕನ್ನೇರಿ', 'ಸದ್ಗುಣ ಸಂಪನ್ನ' ಸೇರಿದಂತೆ ಮುಂತಾದ ಚಿತ್ರದಲ್ಲಿ ಭಟ್ ಅಭಿನಯಿಸಿದ್ದಾರೆ.
ಇದನ್ನೂ ಓದಿ: ಮಹೇಶ್ ಬಾಬು ಕಿಲ್ಲಿಂಗ್ ಲುಕ್ಗೆ ಹೆಂಡತಿ ನಮ್ರತಾ ಕಮೆಂಟ್; 'ಟಾಲಿವುಡ್ನ ಗ್ರೀಕ್ ದೇವತೆ' ಎಂದ ಅಭಿಮಾನಿ
ಅದಕ್ಕಿಂತ ಮೊದಲು ಸೂಪರ್ ಹಿಟ್ 'ಟಗರು' ಚಿತ್ರದಲ್ಲಿ ಅನಿತಾ ಕಾಣಿಸಿಕೊಂಡಿದ್ದಾರೆ. ಅದಲ್ಲದೇ 'ಡೇಸ್ ಆಪ್ ಬೋರಾಪುರ' ಸಿನಿಮಾದ ಮೂಲಕ ಅನಿತಾ ಎಲ್ಲರ ಗಮನ ಸೆಳೆದಿದ್ದರು. ಛಲ ಬಿಡದೆ, ತಮ್ಮ ಪ್ರತಿಭೆ ಮತ್ತು ಗ್ಲಾಮರ್ನಿಂದ ಸಿನಿಮಾಗಳಲ್ಲಿ ಅವಕಾಶ ಪಡೆಯುತ್ತಿರುವ ಅನಿತಾ ಭಟ್, ಉತ್ತಮ ಯೋಗಪಟು ಕೂಡಾ ಹೌದು. ಅವರು ನಿತ್ಯ ಯೋಗಾಭ್ಯಾಸ ಮಾಡ್ತಾರಂತೆ. ಇದುವೇ ಅವರ ಸೌಂದರ್ಯದ ಗುಟ್ಟು ಕೂಡ ಆಗಿದೆ.
ಈವರೆಗೂ ಅವರು ಒಟ್ಟು 15 ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ನಲ್ಲೂ ಭಾಗವಹಿಸಿದ್ದರು. ಇವರು ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಆಗಾಗ ಹೊಸ ಅಪ್ಡೇಟ್ ಮೂಲಕ ಜನರ ಜೊತೆಗೆ ಸಂಪರ್ಕದಲ್ಲಿರುತ್ತಾರೆ. ಜೊತೆಗೆ ವಿಭಿನ್ನ ಫೋಟೋಶೂಟ್ಗಳನ್ನು ಮಾಡಿಸಿ ಶೇರ್ ಮಾಡುತ್ತಿರುತ್ತಾರೆ. ಇವರಿಗೆ ಇನ್ಸ್ಟಾಗ್ರಾಮ್ನಲ್ಲಿ 2 ಲಕ್ಷದ 52 ಸಾವಿರ ಫಾಲೋವರ್ಸ್ ಇದ್ದಾರೆ.
ಇದನ್ನೂ ಓದಿ: 'ಮಾಲ್ತಿ ಮೇರಿ ಮೊದಲ ಈಸ್ಟರ್': ಮಗಳ ಜೊತೆಗಿನ ಫೋಟೋ ಹಂಚಿಕೊಂಡ ಪ್ರಿಯಾಂಕಾ