ETV Bharat / entertainment

ನಟಿ ಅಮೂಲ್ಯ ಹುಟ್ಟುಹಬ್ಬ.. ತಮಗೆ ಸೆ.​14 ವ್ಯಾಲೆಂಟೈನ್​ ಡೇ ಎಂದ ಪತಿ ಜಗದೀಶ್​ - Actress Amulya husband jagdeesh

ಇಂದು ಸ್ಯಾಂಡಲ್​ವುಡ್ ನಟಿ ಅಮೂಲ್ಯ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

Sandalwood Actress Amulya birthday
ನಟಿ ಅಮೂಲ್ಯ ಹುಟ್ಟುಹಬ್ಬ
author img

By

Published : Sep 14, 2022, 12:08 PM IST

Updated : Sep 14, 2022, 12:16 PM IST

ಸ್ಯಾಂಡಲ್​ವುಡ್ ಕಂಡ ಖ್ಯಾತ ನಟಿ ಅಮೂಲ್ಯ 29ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಚಿತ್ರರಂಗ ಸೇರಿದಂತೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ವಿವಾಹದ ಬಳಿಕ ಸಿನಿಮಾಗಳಿಂದ ದೂರ ಉಳಿದಿರುವ ನಟಿ ಅಮೂಲ್ಯ ಮತ್ತೆ ಸಿನಿಮಾ ಮಾಡಬೇಕೆಂಬುದು ಅಭಿಮಾನಿಗಳ ಆಸೆ.

ಜೂನ್​​ ತಿಂಗಳಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ ಸದ್ಯಅವಳಿ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಪತಿ ಜಗದೀಶ್​ ತಮ್ಮ ಪಾಲಿಗೆ ಈ ದಿನವೇ ‘ವ್ಯಾಲೆಂಟೈನ್​ ಡೇ’ ಎಂದು ಅವರು ಹೇಳಿ ಪತ್ನಿಗೆ ವಿಶೇಷವಾಗಿ ಶುಭಕೋರಿದ್ದಾರೆ. ಅಮೂಲ್ಯ ಜೊತೆಗಿನ ಫೋಟೋಗಳನ್ನು ಜಗದೀಶ್​ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನನಗೆ ಸೆಪ್ಟೆಂಬರ್​ 14 ವ್ಯಾಲೆಂಟೈನ್​ ಡೇ. ಹುಟ್ಟುಹಬ್ಬದ ಶುಭಾಶಯಗಳು ಅಮೂಲ್ಯ. ನೀನು ಯಾವಾಗಲೂ ಮಿನುಗುವ ನಕ್ಷತ್ರವಾಗಿರಬೇಕು. ಇದು ನಾವು ಕಳೆದ ಪ್ರೀತಿಯ ಕ್ಷಣಗಳು ಎಂದು ಕ್ಯಾಪ್ಷನ್​ ನೀಡಿದ್ದಾರೆ.

Sandalwood Actress Amulya baby's
ಜೂನ್​​ ತಿಂಗಳಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ

ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಮೂಲ್ಯ ನಂತರ ‘ಚೆಲುವಿನ ಚಿತ್ತಾರ’ ಸಿನಿಮಾ ಮೂಲಕ ಹೀರೋಯಿನ್​ ಆಗಿ ಮಿಂಚಿದರು. ಗೋಲ್ಡನ್​ ಸ್ಟಾರ್​ ಗಣೇಶ್​ ಜೊತೆ ನಟಿಸಿದ ಆ ಚಿತ್ರ ಸೂಪರ್​ ಹಿಟ್​ ಆಗಿ ಅಮೂಲ್ಯರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತು. ನಂತರ ಸ್ಟಾರ್​ ನಟರ ಜೊತೆ ಅಭಿನಯಿಸುವ ಚಾನ್ಸ್​ ಪಡೆದುಕೊಂಡ ಅಮೂಲ್ಯರಿಗೆ ‘ಶ್ರಾವಣಿ ಸುಬ್ರಹ್ಮಣ್ಯ’ ಚಿತ್ರದಲ್ಲಿನ ನಟನೆಗಾಗಿ ಫಿಲ್ಮ್​ಫೇರ್​ ಪ್ರಶಸ್ತಿ ಒಲಿಯಿತು. ಇವಲ್ಲದೇ ಚೈತ್ರದ ಚಂದ್ರಮ, ಪ್ರೇಮಿಸಂ, ನಾನು ನನ್ನ ಕನಸು, ಮನಸೋಲಾಜಿ, ಗಜಕೇಸರಿ, ಖುಷಿ ಖುಷಿಯಾಗಿ, ಮಳೆ ಸೇರಿ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

Sandalwood Actress Amulya baby's
ಮಕ್ಕಳೊಂದಿಗೆ ನಟಿ ಅಮೂಲ್ಯ

ಇದನ್ನೂ ಓದಿ: ವಿಷ್ಣುವರ್ಧನ್ ಜನ್ಮದಿನ ಆಚರಣೆಗೆ ಸಿದ್ಧತೆ.. ಒಂದೇ ಜಾಗದಲ್ಲಿ 40 ಅಡಿ ಎತ್ತರದ 50 ಕಟೌಟ್

2017ರಲ್ಲಿ ಬಂದ ಮುಗುಳು ನಗೆ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರ ಮಾಡಿದ ಬಳಿಕ ಅಮೂಲ್ಯ ಅವರು ಬೇರೆ ಯಾವುದೇ ಸಿನಿಮಾದಲ್ಲೂ ನಟಿಸಿಲ್ಲ. ಮತ್ತೆ ಅವರನ್ನು ದೊಡ್ಡ ಪರದೆಯಲ್ಲಿ ನೋಡಬೇಕು ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Last Updated : Sep 14, 2022, 12:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.