ದೇವ ಮೋಹನ್ ಮತ್ತು ಸಮಂತಾ ರುತ್ ಪ್ರಭು ಅಭಿನಯದ ಬಹು ನಿರೀಕ್ಷಿತ 'ಶಾಕುಂತಲಂ' ಸಿನಿಮಾ ಬರುವ ಏಪ್ರಿಲ್ 14ರಂದು ತೆರೆಕಾಣಲಿದೆ. ಈ ಹಿನ್ನೆಲೆ ನಟಿ ಸಮಂತಾ ಬ್ಯಾಕ್ ಟು ಬ್ಯಾಕ್ ಸಂದರ್ಶನ, ಸಿನಿಮಾ ಪ್ರಮೋಶನ್ನಲ್ಲಿ ಬ್ಯುಸಿ ಆಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿಯೂ ಬಗೆ ಬಗೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿಭಿನ್ನ ಪ್ರಚಾರ ಮಾಡುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಊ ಅಂಟಾವ ಹಾಡು ಮತ್ತು ವೈವಾಹಿಕ ಜೀವನದ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದಾರೆ.
- " class="align-text-top noRightClick twitterSection" data="
">
ವೈವಾಹಿಕ ಜೀವನ ಕೊನೆಗೊಂಡ ಹೊತ್ತಲ್ಲೇ 'ಪುಷ್ಪ' ಚಿತ್ರದ 'ಊ ಅಂಟಾವಾ' ಆಫರ್ ಬಂದಿತ್ತು. ಆ ಸಂದರ್ಭ ತಪ್ಪು ಮಾಡದ ನಾನು ಏಕೆ ಮನೆಯಲ್ಲಿ ಬೇಸರದಿಂದ ಕುಳಿತುಕೊಳ್ಳಬೇಕು? ಎಂದು ಅನಿಸಿತು. ಆ ಹಾಡಿಗೆ ಸ್ಟೆಪ್ ಹಾಕಲು ನಿರ್ಧರಿಸಿದೆ. ಹಾಡನ್ನು ಘೋಷಿಸಿದ ಕೂಡಲೇ ನನ್ನ ಕುಟುಂಬ ಸದಸ್ಯರು ಮತ್ತು ಆಪ್ತರು ನನಗೆ ಕರೆ ಮಾಡಿದರು. "ಮನೆಯಲ್ಲಿ ಕುಳಿತುಕೊಳ್ಳಿ, ಬ್ರೇಕಪ್ ಆದ ತಕ್ಷಣ ಐಟಂ ಸಾಂಗ್ ಮಾಡಬೇಡಿ'' ಎಂದೆಲ್ಲಾ ಸಲಹೆ ಕೊಟ್ಟರು. ಯಾವಾಗಲೂ ಪ್ರೋತ್ಸಾಹಿಸುವ ನನ್ನ ಗೆಳೆಯರು ಕೂಡ ಆ ಹಾಡು ಬೇಡ ಅಂತ ಹೇಳಿದ್ರು. ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ಏಕೆಂದರೆ, ನನ್ನ ವೈವಾಹಿಕ ವಿಷಯದಲ್ಲಿ ನಾನು ಶೇ.100 ರಷ್ಟು ಪ್ರಾಮಾಣಿಕ ಎಂಬುದು ನನಗೆ ಗೊತ್ತಿತ್ತು. ಅಂದು ನಾನು ಆ ನಿರ್ಧಾರ ಕೈಗೊಳ್ಳದಿದ್ದರೆ, ನನ್ನ ವೃತ್ತಿ ಜೀವನ ಇಷ್ಟು ಸುಗಮವಾಗಿ ಸಾಗಲು ಸಾಧ್ಯವಾಗುತ್ತಿರಲಿಲ್ಲ. ನಾನು ಮಾಡದ ಅಪರಾಧಕ್ಕೆ ನಾನೇಕೆ ನರಳಬೇಕು? ಎಂದು ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸೀರೆಯಲ್ಲಿ ಸಮಂತಾ: 'ಶಾಕುಂತಲೆ'ಯ ಅಂದಕ್ಕೆ ಸರಿಸಾಟಿ ಯಾರು?
ಈಗಾಗಲೇ ಸಾಕಷ್ಟು ನೊಂದಿದ್ದೇನೆ. ನಾಯಕಿಯಾಗಿ ಎಲ್ಲದನ್ನೂ ಪರ್ಫೆಕ್ಟ್ ಆಗಿ ನಿರ್ವಹಿಸಲು, ಸುಂದರವಾಗಿ ಕಾಣಲು ಹೆಣಗಾಡುತ್ತಿದ್ದೇನೆ. ಮಯೋಸಿಟಿಸ್ ಕಾಯಿಲೆ ಮತ್ತು ಔಷಧೋಪಚಾರದಿಂದಾಗಿ ನನ್ನ ಮೇಲೆ ಹಿಡಿತ ತಪ್ಪಿದೆ. ಹಾಗಾಗಿ ಕೆಲವೊಮ್ಮೆ ಮಂಕಾಗಿ ಕಾಣಿಸಬಹುದು. ಸ್ಟೈಲ್‌ಗಾಗಿ ನಾನು ಕನ್ನಡಕ ಹಾಕಿಕೊಂಡಿದ್ದೇನೆ ಎಂದು ಕೆಲವರು ಭಾವಿಸಬಹುದು, ಆದ್ರೆ ಅದು ನಿಜವಲ್ಲ. ಈಗಿನ ಪರಿಸ್ಥಿತಿಯಲ್ಲಿ ನನ್ನ ಕಣ್ಣುಗಳು ತೀವ್ರ ಬೆಳಕನ್ನು ಸಹಿಸುವುದಿಲ್ಲ. ಕಳೆದ ಎಂಟು ತಿಂಗಳಿಂದ ಪ್ರತಿನಿತ್ಯ ಹೋರಾಡುತ್ತಿದ್ದೇನೆ. ಎಲ್ಲದರ ಮೂಲಕ ಈ ಮಟ್ಟಕ್ಕೆ ಬಂದಿದ್ದೇನೆ. ಹಾಗಾಗಿ ಈಗ ಯಾರಾದರು ನನ್ನ ಲುಕ್ ಬಗ್ಗೆ ಕಾಮೆಂಟ್ ಮಾಡಿದರೆ ನಾನು ಕೇರ್ ಮಾಡುವುದಿಲ್ಲ ಎಂದು ತಿಳಿಸಿದರು.
- " class="align-text-top noRightClick twitterSection" data="
">
ಇದನ್ನೂ ಓದಿ: 'ಅರ್ಹಾ ಭವಿಷ್ಯದ ಸೂಪರ್ ಸ್ಟಾರ್': ಅಲ್ಲು ಅರ್ಜುನ್ ಪುತ್ರಿ ಬಗ್ಗೆ ಸಮಂತಾ ಗುಣಗಾನ
ಬಹುನಿರೀಕ್ಷಿತ 'ಶಾಕುಂತಲಂ' ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದ್ದು, ಚಿತ್ರತಂಡ ಮತ್ತು ಸಮಂತಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಏಪ್ರಿಲ್ 14 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿರುವ ಈ ಚಿತ್ರಕ್ಕೆ ನಿರ್ದೇಶಕ ಗುಣಶೇಖರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಾಳಿದಾಸ ಬರೆದಿರುವ 'ಅಭಿಜ್ಞಾನ ಶಾಕುಂತಲಂ' ಸಂಸ್ಕೃತ ನಾಟಕ ಆಧರಿಸಿರುವ ಈ ಸಿನಿಮಾದಲ್ಲಿ ನಟ ದೇವ ಮೋಹನ್ ಅವರು ಪುರು ರಾಜವಂಶದ ರಾಜ ದುಶ್ಯಂತ್ ಆಗಿ, ನಟಿ ಸಮಂತಾ ಅವರು ಶಾಕುಂತಲೆ ಪಾತ್ರಗಳನ್ನು ನಿರ್ವಹಿಸಿದ್ದಾರೆ.