ETV Bharat / entertainment

ಚಿಕಿತ್ಸೆಗಾಗಿ 25 ಕೋಟಿ ರೂ. ಸಾಲ ವದಂತಿ: 'ವೃತ್ತಿಜೀವನದಲ್ಲಿ ಸಾಕಷ್ಟು ಸಂಪಾದಿಸಿದ್ದೇನೆ' ಎಂದ ಸಮಂತಾ ರುತ್​ ಪ್ರಭು - ಸಮಂತಾ ಚಿಕಿತ್ಸೆ

Samantha Ruth Prabhu: ಸಾಲ ಪಡೆದಿರುವ ವದಂತಿಗಳ ಬಗ್ಗೆ ಸೌತ್​ ಸುಂದರಿ ಸಮಂತಾ ರುತ್​ ಪ್ರಭು ಸ್ಪಷ್ಟನೆ ಕೊಟ್ಟಿದ್ದಾರೆ.

Samantha Ruth Prabhu
ಸಮಂತಾ ರುತ್​ ಪ್ರಭು
author img

By

Published : Aug 5, 2023, 12:49 PM IST

ದಕ್ಷಿಣ ಚಿತ್ರರಂಗದ ಟಾಪ್​ ನಟಿ ಸಮಂತಾ ರುತ್​ ಪ್ರಭು ಸದ್ಯ ಸಿನಿಮಾಗಳಿಂದ ಬ್ರೇಕ್​ ಪಡೆದಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ರಿಲ್ಯಾಕ್ಸ್ ಮೂಡ್​ನಲ್ಲಿರುವ ನಟಿ ಪ್ರವಾಸ, ಮೂವಿ ಟೈಮ್​, ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ಕೊಡುವ ಮೂಲಕ ತಮ್ಮ ದಿನ ಕಳೆಯುತ್ತಿದ್ದಾರೆ. ಮತ್ತೊಂದೆಡೆ ಆರೋಗ್ಯ ಚೇತರಿಕೆ ಕಡೆ ಗಮನ ಹರಿಸಿದ್ದಾರೆ ಎಂಬ ವರದಿಗಳೂ ಇವೆ.

ಚಿಕಿತ್ಸೆಗಾಗಿ 25 ಕೋಟಿ ರೂ. ಸಾಲ ವದಂತಿ: ಮಯೋಸಿಟಿಸ್​ ವಿರುದ್ಧ ಹೊರಾಡುತ್ತಿರುವ ಶಾಕುಂತಲಂ ನಟಿ ಚಿಕಿತ್ಸೆ ಪಡೆಯಲು ಸಜ್ಜಾಗಿದ್ದಾರೆ ಎಂಬುದು ನಿಮಗೆ ತಿಳಿದಿದೆ. ಆದರೆ ಶ್ರೀಮಂತ ನಟಿ ಚಿಕಿತ್ಸೆಗಾಗಿ 25 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನುವ ಸುದ್ದಿ ಶುಕ್ರವಾರ ಸದ್ದು ಮಾಡಿತ್ತು. ಸೋಷಿಯಲ್​ ಮೀಡಿಯಾಗಳಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಸಂಬಂಧಿಸಿದಂತೆ ಬರುವ ಊಹಾಪೋಹಗಳಿಗೆ ನೇರ ಉತ್ತರ ಕೊಡಲು ಹೆಸರುವಾಸಿಯಾಗಿರುವ ಬಹುಬೇಡಿಕೆ ನಟಿ ಇದೀಗ ಈ ವದಂತಿಗಳಿಗೂ ನೇರವಾಗಿ ತೆರೆ ಎಳೆದಿದ್ದಾರೆ.

Samantha Ruth Prabhu
ಸ್ಯಾಮ್​ ಇನ್​ಸ್ಟಾ ಸ್ಟೋರಿ

ತನ್ನನ್ನು ತಾನು ನಿಭಾಯಿಸಿಕೊಳ್ಳಲು ಸಮರ್ಥ: ತಮ್ಮ ಚಿಕಿತ್ಸೆಗಾಗಿ 25 ಕೋಟಿ ರೂ. ಸಾಲ ಪಡೆದಿದ್ದಾರೆ ಎಂದು ಹೇಳಲಾಗಿದೆ. ಅದಾಗ್ಯೂ, ನಟಿ ತನ್ನ ವೃತ್ತಿಜೀವನದಲ್ಲಿ ಸಾಕಷ್ಟು ಗಳಿಸಿದ್ದೇನೆ. ತನ್ನನ್ನು ತಾನು ನಿಭಾಯಿಸಿಕೊಳ್ಳಲು ಸಮರ್ಥಳಾಗಿದ್ದೇನೆ ಎಂದು ತಿಳಿಸಿ ಆ ವರದಿಗಳನ್ನು ತಳ್ಳಿಹಾಕಿದ್ದಾರೆ.

ಸ್ಯಾಮ್​ ಇನ್​ಸ್ಟಾ ಸ್ಟೋರಿ: ಮಯೋಸಿಟಿಸ್​​ ಚಿಕಿತ್ಸೆಗಾಗಿ ಸಾಲ ಪಡೆದಿರುವ ವಿಚಾರಕ್ಕೆ ಸ್ಪಷ್ಟನೆ ಕೊಡಲು ನಟಿ ಇನ್​ಸ್ಟಾಗ್ರಾಮ್​​ ವೇದಿಕೆಯನ್ನು ಬಳಸಿಕೊಂಡರು. ''ಮಯೋಸಿಟಿಸ್​​ ಚಿಕಿತ್ಸೆಗಾಗಿ 25 ಕೋಟಿ ರೂ. ಸಾಲ!?. ಯಾರೋ ನಿಮಗೊಂದು ಕೆಟ್ಟ ಡೀಲ್​ನ ವಿಷಯ ತಂದು ಕೊಟ್ಟಿದ್ದಾರೆ. ನಾನು ಅದರಲ್ಲಿ (25 ಕೋಟಿ ರೂ.) ಚಿಕ್ಕ ಪ್ರಮಾಣದಷ್ಟು ಮಾತ್ರ ಖರ್ಚು ಮಾಡುತ್ತಿದ್ದೇನೆ ಎಂಬುದನ್ನು ಹೇಳಲು ಖುಷಿಯಾಗಿದೆ'' ಎಂದು ಇನ್​ಸ್ಟಾ ಸ್ಟೋರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Kiccha 46: 'ನನ್ನ 46ನೇ ಚಿತ್ರದಲ್ಲಿ ಕನ್ನಡದವರೇ ಹೆಚ್ಚು ಕೆಲಸ ಮಾಡ್ತಿರೋದು ಹೆಮ್ಮೆ'; ಹೊಸ ಸಿನಿಮಾ ಬಗ್ಗೆ ಸುದೀಪ್ ಅ​ಪ್ಡೇಟ್

ಬರಹ ಮುಂದುವರಿಸಿದ ಸಿಟಾಡೆಲ್​ ನಟಿ, ''ನಾನು ಸಾಕಷ್ಟು ದುಡಿದಿದ್ದೇನೆ. ನನ್ನ ಸ್ವಂತ ಖರ್ಚು ನೋಡಿಕೊಳ್ಳಲು ಬೇರೆಯವರ ಸಹಾಯ ಕೇಳುವ ಪರಿಸ್ಥಿತಿ ಇಲ್ಲ. ಯಾವುದೇ ತೊಂದರೆಯಾಗದಂತೆ, ತನ್ನನ್ನು ತಾನು ನೋಡಿಕೊಳ್ಳಲು ಸಮರ್ಥಳಾಗಿದ್ದೇನೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 'ಸಹ ನಟರ ವಯಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ..': ನಟಿ ತಮನ್ನಾ ಭಾಟಿಯಾ

ಸಮಂತಾ ಸಿನಿಮಾಗಳು: ಇನ್ನೂ ಬಹುಬೇಡಿಕೆ ನಟಿ ಸಮಂತಾ ರುತ್​ ಪ್ರಭು ಇತ್ತೀಚೆಗಷ್ಟೇ ವಿದೇಶದಿಂದ ಮರಳಿದ್ದಾರೆ. ಹೊರದೇಶಗಳಲ್ಲಿ ಕೆಲ ಕಾಲ ಕಳೆದು ರಿಲ್ಯಾಕ್ಸ್ ಮೂಡ್​ಗೆ ಹೋಗಿದ್ದಾರೆ. ಇನ್ನೂ ಮೊದಲೇ ತಿಳಿಸಿದಂತೆ ಸದ್ಯ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವ ಸಲುವಾಗಿ ವೃತ್ತಿಯಿಂದ ಸಣ್ಣ ಬ್ರೇಕ್​ ಪಡೆದಿದ್ದಾರೆ. ಮುಂದಿನ ಸಿನಿಮಾ ಗಮನಿಸುವುದಾದರೆ ಕುಶಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಜಯ್​ ದೇವರಕೊಂಡ ಜೊತೆ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕರಾದ ರಾಜ್​ ಮತ್ತು ಡಿಕೆ ಜೋಡಿಯ ಸಿಟಾಡೆಲ್​ ಶೂಟಿಂಗ್​ ಅನ್ನೂ ಪೂರ್ಣಗೊಳಿಸಿದ್ದಾರೆ. ಬಾಲಿವುಡ್​ ನಟ ವರುಣ್​ ಧವನ್​ ಜೊತೆ ಮೊದಲ ಬಾರಿ ಸ್ಕ್ರೀನ್​ ಶೇರ್ ಮಾಡಿದ್ದಾರೆ. ಇದೊಂದು ಆ್ಯಕ್ಷನ್​ ಜಾನರ್​​ ಸೀರಿಸ್​ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.