'ಖುಷಿ' ಮತ್ತು 'ಸಿಟಾಡೆಲ್' ಸೌತ್ ಸೂಪರ್ಸ್ಟಾರ್ ನಟಿ ಸಮಂತಾ ರುತ್ ಪ್ರಭು ಅವರ ಬಹುನಿರೀಕ್ಷಿತ ಪ್ರಾಜೆಕ್ಟ್ಗಳು. ಇವರೆಡರ ಶೂಟಿಂಗ್ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಸದ್ಯ ಸ್ಯಾಮ್ ತಮ್ಮ ಆರೋಗ್ಯದ ಮೇಲೆ ಸಂಪೂರ್ಣ ಗಮನ ಹರಿಸುವ ಸಲುವಾಗಿ, ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಚೇತರಿಕೆ ನಂತರ ಹೊಸ ಪ್ರಾಜೆಕ್ಟ್ಗಳತ್ತ ಗಮನ ಹರಿಸಲಿದ್ದಾರೆ. ಪ್ರಸ್ತುತ ಅವರು ತಮ್ಮ ರಜಾದಿನಗಳನ್ನು ಆನಂದಿಸುತ್ತಿದ್ದಾರೆ.
ಪ್ರವಾಸ, ಧ್ಯಾನ, ದೇವಸ್ಥಾನ ಭೇಟಿ, ಮೂವಿ ಟೈಮ್ ಎಂದು ಬ್ಯುಸಿಯಾಗಿದ್ದಾರೆ. ತಮ್ಮ ದಿನಚರಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಸಮಂತಾ ಅವರು ಬಾಲಿ ಪ್ರವಾಸದಲ್ಲಿದ್ದಾರೆ. ಉಬುದ್ನ ಮಂಕಿ ಫಾರೆಸ್ಟ್ಗೆ ಭೇಟಿ ಕೊಟ್ಟಿದ್ದಾರೆ. ಕೋತಿಯೊಂದಿಗೆ ತೆಗೆದ ಫೋಟೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಜೊತೆಯಲ್ಲಿ ಸ್ನೇಹಿತೆಯೂ ಇದ್ದಾರೆ. 'ಮಂಗ ಕಂಡಿತು 😎🥰' ಎಂದು ಕ್ಯಾಪ್ಶನ್ ನೀಡಿದ್ದಾರೆ.
ಅವರ ತಮಾಷೆಯ ಶೀರ್ಷಿಕೆಯು ಅಭಿಮಾನಿಗಳಿಂದ ಸಾಕಷ್ಟು ಪ್ರತಿಕ್ರಿಯೆಗಳನ್ನು ಪಡೆಯಿತು. ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು, "ಮಂಗವು ನಿಜವಾಗಿಯೂ ಸೆಲ್ಫಿಗಾಗಿ ಕ್ಯಾಮ್ ಅನ್ನು ಹಿಡಿದಿರುವಂತೆ ತೋರುತ್ತಿದೆ. ಚೆನ್ನಾಗಿದೆ" ಎಂದಿದ್ದಾರೆ. ಮತ್ತೊಬ್ಬರು, "ಆ ಕೋತಿಯ ಸೆಲ್ಫಿ ಕೌಶಲ್ಯ > ನನ್ನ ಫೋಟೋಗ್ರಾಫಿ ಕೌಶಲ್ಯ" ಎಂದು ಬರೆದು ಅಳುವ ಎಮೋಜಿನೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಹೀಗೆ ನೆಟ್ಟಿಗರು ಬಗೆ ಬಗೆಯ ಬರಹಗಳಿಂದ ಕಮೆಂಟ್ ವಿಭಾಗವನ್ನು ತುಂಬಿದ್ದಾರೆ.
ಇದನ್ನೂ ಓದಿ: ಆಧ್ಯಾತ್ಮಿಕ ಪ್ರವಾಸ ಕೈಗೊಂಡ ಸಮಂತಾ.. ಇಶಾದಲ್ಲಿ ಧ್ಯಾನ, ಈರೋಡ್ ಪನ್ನಾರಿ ಅಮ್ಮನ್ ದೇವಸ್ಥಾನಕ್ಕೆ ಭೇಟಿ
ನಟಿ ಸಮಂತಾ ಈವರೆಗೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಸದ್ಯ ಅವರು ತಮ್ಮ ಆರೋಗ್ಯದ ಮೇಲೆ ಸಂಪೂರ್ಣ ಗಮನ ಹರಿಸಲು ನಿರ್ಧರಿಸಿದ್ದಾರೆ. ಮಯೋಸಿಟಿಸ್ ಎಂಬ ಕಾಯಿಲೆ ವಿರುದ್ಧ ಸ್ಯಾಮ್ ಹೋರಾಡುತ್ತಿರುವುದು ನಿಮಗೆಲ್ಲರಿಗೂ ತಿಳಿದಿದೆ. ಇನ್ನೂ ಆರೋಗ್ಯ ಸರಿಯಾದ ಬಳಿಕವಷ್ಟೇ ಅವರು ಮುಂದಿನ ಸಿನಿಮಾಗಳತ್ತ ಗಮನ ಹರಿಸಲಿದ್ದಾರೆ. ಸದ್ಯಕ್ಕೆ ಅವರು ಯಾವುದೇ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿಲ್ಲ.
ಈವರೆಗೆ ಅವರ ಕೈಯಲ್ಲಿ ಖುಷಿ ಮತ್ತು ಸಿಟಾಡೆಲ್ ಎಂಬ ಎರಡು ಪ್ರಾಜೆಕ್ಟ್ಗಳಿದ್ದವು. ಅವರೆಡನ್ನೂ ಸ್ಯಾಮ್ ಪೂರ್ಣಗೊಳಿಸಿದ್ದಾರೆ. ಸಂಪೂರ್ಣ ಆರೋಗ್ಯವಂತರಾಗಲು ಹೆಚ್ಚಿನ ಚಿಕಿತ್ಸೆಗಾಗಿ ಅವರು ವಿದೇಶಕ್ಕೂ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ನಿಖರ ಮಾಹಿತಿ ಇಲ್ಲ. ಇತ್ತೀಚೆಗೆ ನಟಿ ತಮಿಳುನಾಡಿನ ಪ್ರಸಿದ್ಧ ದೇವಸ್ಥಾನಗಳಿಗೆ, ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ಹೀಗೆ ಪ್ರವಾಸ, ಧ್ಯಾನ, ದೇವಸ್ಥಾನ ಭೇಟಿ, ಮೂವಿ ಟೈಮ್ ಎಂದು ತಮ್ಮ ರಜಾದಿನವನ್ನು ಉತ್ತಮವಾಗಿ ಕಳೆಯುತ್ತಿದ್ದಾರೆ.
ಸಮಂತಾ ಅವರು ನಟಿಸಿ, ಬಿಡುಗಡೆಗೆ ಸಜ್ಜಾಗಿರುವ ಸಿನಿಮಾ ಖುಷಿ. ತೆಲುಗು ಸೂಪರ್ ಸ್ಟಾರ್ ವಿಜಯ ದೇವರಕೊಂಡ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಶಿವ ನಿರ್ವಾಣ ನಿರ್ದೇಶನದಲ್ಲಿ ರೆಡಿಯಾಗಿರುವ ಈ ಚಿತ್ರ ಸೆಪ್ಟೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಇನ್ನೂ ಸಿಟಾಡೆಲ್ ನಟಿಯ ಮತ್ತೊಂದು ಪ್ರಾಜೆಕ್ಟ್. ಈ ವೆಬ್ ಸಿರೀಸ್ನಲ್ಲಿ ಬಾಲಿವುಡ್ ನಟ ವರುಣ್ ಧವನ್ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸಿನಿಮಾಗಳಿಂದ ಬ್ರೇಕ್.. ವಿರಾಮದ ದಿನಗಳಲ್ಲಿ ಸಮಂತಾ ರುತ್ ಪ್ರಭು ದಿನಚರಿ ಹೇಗಿರಲಿದೆ?