ಬಾಲಿವುಡ್ ನಟ ವಿಕ್ಕಿ ಕೌಶಲ್ ಅಭಿನಯದ 'ಸ್ಯಾಮ್ ಬಹದ್ದೂರ್' ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಭಾರತದಲ್ಲಿ 35.85 ಕೋಟಿ ರೂ. ಕಲೆಕ್ಷನ್ ಮಾಡಿದೆ. ಸಿನಿಮಾ 55 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣ ಆಗಿರೋ ಹಿನ್ನೆಲೆ ಈ ಸಂಖ್ಯೆಯನ್ನು ತೀರಾ ಕಡಿಮೆ ಅನ್ನೋ ಹಾಗಿಲ್ಲ. ಸಿನಿಮಾ ಕಲೆಕ್ಷನ್ 55 ಕೋಟಿ ರೂ. ದಾಟಿದರೆ ಯಶಸ್ವಿಯಾದಂತೆ. ಭರ್ಜರಿ ಪ್ರದರ್ಶನ ಕಾಣುತ್ತಿರುವ ಅನಿಮಲ್ ಸಿನಿಮಾ ಜೊತೆ 'ಸ್ಯಾಮ್ ಬಹದ್ದೂರ್' ಸಹ ಸ್ಕ್ರೀನಿಂಗ್ ಆಗುತ್ತಿದ್ದು, ಮೊದಲ ದಿನ 6.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡೂ ಚಿತ್ರಗಳು ಡಿಸೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ.
ಸ್ಯಾಮ್ ಮಾಣೆಕ್ ಶಾ ಜೀವನಾಧಾರಿತ ಕಥೆ 6.25 ಕೋಟಿ ರೂಪಾಯಿಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತು. ವಾರಾಂತ್ಯದಲ್ಲಿ ಅಂಕಿ ಅಂಶ ಕೊಂಚ ಏರಿಕೆ ಕಂಡಿತು. ಶನಿವಾರ ಮತ್ತು ಭಾನುವಾರದಂದು ಕ್ರಮವಾಗಿ 9 ಕೋಟಿ ರೂ. ಮತ್ತು 10.3 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿತು. ಆದಾಗ್ಯೂ, ಸ್ಯಾಮ್ ಬಹದ್ದೂರ್ ವಾರದ ದಿನಗಳಲ್ಲಿ ಕೊಂಚ ಕುಸಿತ ಕಂಡಿದೆ. ಬುಧವಾರದಂದು ಅಂದರೆ ಆರನೇ ದಿನ ಸಿನಿಮಾ 3.30 ಕೋಟಿ ರೂ. ಗಳಿಸಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ.
ಮೇಘನಾ ಗುಲ್ಜಾರ್ ನಿರ್ದೇಶನದ ಈ ಸಿನಿಮಾ ಮೊದಲ ಸೋಮವಾರದಂದು ಗಳಿಕೆಯಲ್ಲಿ ಕುಸಿತ ಕಂಡಿತ್ತು. 3.5 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದೀಗ ಆರನೇ ದಿನ 3.30 ಕೋಟಿ ರೂ. ಗಳಿಸಿದೆ. ಆರ್‌ಎಸ್‌ವಿಪಿ ಮೂವೀಸ್ 55 ಕೋಟಿ ರೂಪಾಯಿಗಳಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.
ಇದನ್ನೂ ಓದಿ: 500 ಕೋಟಿ ಗಡಿ ದಾಟಿದ 'ಅನಿಮಲ್' ಸಿನಿಮಾ: ಕಲೆಕ್ಷನ್ ಮಾಹಿತಿ ಇಲ್ಲಿದೆ
ಸ್ಯಾಮ್ ಬಹದ್ದೂರ್ ಸಿನಿಮಾ ಆರು ದಿನಗಳಲ್ಲಿ ಒಟ್ಟು 35.85 ಕೋಟಿ ರೂ. ಕಲೆಕ್ಷನ್ ಮಾಡಿದೆ. ಮತ್ತೊಂದೆಡೆ ರಣ್ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರ ಅನಿಮಲ್ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 312 ಕೋಟಿ ರೂ. ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ ಗಳಿಕೆಯಲ್ಲಿ 500 ಕೋಟಿ ರೂ.ನ ಗಡಿ ದಾಟಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾ ಪ್ರಮುಖ ನಟರ ವೃತ್ತಿಜೀವನದಲ್ಲಿ ದೊಡ್ಡ ಗೆಲುವು ತಂದುಕೊಟ್ಟಿದೆ.
ಇದನ್ನೂ ಓದಿ: 'ಕುಡಿದ ಮತ್ತಿನಲ್ಲಿ ತೂರಾಡಿದ ಸನ್ನಿ ಡಿಯೋಲ್': ಇದು ನಿಜವಲ್ಲ, 'ಸಫರ್' ಸಿನಿಮಾ ಶೂಟಿಂಗ್!
ಸ್ಯಾಮ್ ಬಹದ್ದೂರ್ ಸಿನಿಮಾ ಬಗ್ಗೆ ಮಾತನಾಡುವುದಾದರೆ, ಭಾರತದ ಮೊದಲ ಫೀಲ್ಡ್ ಮಾರ್ಷಲ್, ಆರ್ಮಿ ಜನರಲ್ ಸ್ಯಾಮ್ ಮಾಣೆಕ್ ಶಾ ಅವರ ಜೀವನಾಧಾರಿತ ಕಥೆ. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದರು. ಪ್ರಮುಖ ಐದು ಯುದ್ಧಗಳಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಚಿತ್ರದಲ್ಲಿ ಸಾನ್ಯಾ ಮಲ್ಹೋತ್ರಾ, ಫಾತಿಮಾ ಸನಾ ಶೇಖ್, ನೀರಜ್ ಕಬಿ, ಎಡ್ವರ್ಡ್ ಸೊನ್ನೆನ್‌ಬ್ಲಿಕ್ ಮತ್ತು ಮೊಹಮ್ಮದ್ ಜೀಶನ್ ಅಯ್ಯೂಬ್ ಸಹ ಕಾಣಿಸಿಕೊಂಡಿದ್ದಾರೆ.