ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅಭಿನಯದ 'ಕಿಸಿ ಕಾ ಬಾಯ್ ಕಿಸಿ ಕಿ ಜಾನ್' ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮವು ಏಪ್ರಿಲ್ 10 ರಂದು ಮುಂಬೈನಲ್ಲಿ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ಪೂಜಾ ಹೆಗ್ಡೆ ಸೇರಿದಂತೆ ಹಲವಾರು ಮಂದಿ ವೇದಿಕೆ ಏರಿದ್ದರು. ಈ ವೇಳೆ, ಸಲ್ಲು ಅಭಿಮಾನಿಗಳು ಅವರಲ್ಲಿ ಸಿಕ್ಸ್ ಪ್ಯಾಕ್ ತೋರಿಸುವಂತೆ ಒತ್ತಾಯಿಸಿದರು. ಹೀಗಾಗಿ ಅವರು ಸ್ಟೇಜ್ ಮೇಲೆಯೇ ಶರ್ಟ್ ಓಪನ್ ಮಾಡಿ ದೇಹದಾರ್ಢ್ಯ ಪ್ರದರ್ಶಿಸಿದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಈ ತುಣುಕು ವೈರಲ್ ಆಗುತ್ತಿದ್ದಂತೆ ಫ್ಯಾನ್ ಕೆಂಪು ಹೃದಯದ ಎಮೋಜಿಗಳು ಮತ್ತು ಬಗೆ ಬಗೆಯ ಬರಹಗಳಿಂದ ಕಮೆಂಟ್ ವಿಭಾಗವನ್ನು ತುಂಬಿದ್ದಾರೆ.
-
Saw his abs live 🔥🔥🔥🔥🔥 #SalmanKhan @BeingSalmanKhan pic.twitter.com/CB4ph02xZH
— SALMAN KI SENA™ (@Salman_ki_sena) April 10, 2023 " class="align-text-top noRightClick twitterSection" data="
">Saw his abs live 🔥🔥🔥🔥🔥 #SalmanKhan @BeingSalmanKhan pic.twitter.com/CB4ph02xZH
— SALMAN KI SENA™ (@Salman_ki_sena) April 10, 2023Saw his abs live 🔥🔥🔥🔥🔥 #SalmanKhan @BeingSalmanKhan pic.twitter.com/CB4ph02xZH
— SALMAN KI SENA™ (@Salman_ki_sena) April 10, 2023
ನಿರ್ದೇಶಕರ ಕಾಲೆಳೆದ ಸಲ್ಮಾನ್: ಸಲ್ಮಾನ್ ಖಾನ್ ಅವರು ಟ್ರೇಲರ್ ಲಾಂಚ್ನಲ್ಲಿ ಹಾಸ್ಯಭರಿತವಾಗಿ ಮಾತನಾಡಿದ್ದಾರೆ. ಇದೇ ವೇಳೆ, ಸಹ ನಟರ ಮತ್ತು ನಿರ್ದೇಶಕ ಫರ್ಹಾದ್ ಸಾಮ್ಜಿಯ ಕಾಲೆಳೆದಿದ್ದಾರೆ. ವೇದಿಕೆಯಲ್ಲಿ ನಿರ್ದೇಶಕ ಫರ್ಹಾದ್ ಅವರು ಸಲ್ಮಾನ್ ಖಾನ್ ಅವರ ಕೆಲಸವನ್ನು ಅಭಿನಂದಿಸಿದ್ದಾರೆ. "ಜನರು ಕೆಲಸ ಮಾಡಲು ಸೂಪರ್‌ಸ್ಟಾರ್‌ಗಳನ್ನು ಹುಡುಕಬಹುದು, ಆದರೆ, ಸಲ್ಮಾನ್ ಅದೃಷ್ಟವಂತರಿಗೆ ಮಾತ್ರ ಸಿಗುತ್ತಾರೆ" ಎಂದು ಹೇಳಿದ್ದಾರೆ. ಇದಕ್ಕೆ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿರುವ ಸಲ್ಲು, "ಈ ಸಿನಿಮಾ ಒಂದು ವೇಳೆ ಸೋತಲ್ಲಿ ಎಲ್ಲಾ ಹೊಣೆ ನನ್ನ ಮೇಲೆಯೇ ಬೀಳುತ್ತದೆ. ಆದರೆ ಚಿತ್ರದ ವರಿಜಿನಲ್ ಸ್ಕ್ರಿಪ್ಟ್ ನನ್ನ ಬಳಿಯಿದೆ" ಎಂದು ಹೇಳಿದ್ದಾರೆ.
ನಿಮ್ಮನ್ನು ಭಾಯ್ ಎಂದು ಕರೆಯುವುದಿಲ್ಲ.. ಸಲ್ಮಾನ್ ಖಾನ್ ಅವರ 'ತೇರೆ ನಾಮ್' ಸಿನಿಮಾದಲ್ಲಿ ಜೋಡಿಯಾಗಿದ್ದ ಭೂಮಿಕಾ ಚಾವ್ಲಾ ಇದೀಗ 20 ವರ್ಷಗಳ ನಂತರ ಕೆಬಿಕೆಜೆ ಚಿತ್ರಕ್ಕಾಗಿ ಒಂದಾಗಿದ್ದಾರೆ. 2003 ರಲ್ಲಿ ತೇರೇ ನಾಮ್ ಚಿತ್ರದ ಆಡಿಯೋ ಬಿಡುಗಡೆಯ ವೇಳೆ ಭೂಮಿಕಾ ಅವರು ಸಲ್ಮಾನ್ ಅವರನ್ನು ಭಾಯ್ ಎಂದು ಕರೆದಿದ್ದರು. ಇದಕ್ಕೆ ವಿಷಾದ ವ್ಯಕ್ತಪಡಿಸಿದ ಭೂಮಿಕಾ, 'ಇಂದು ನಾನು ನಿಮ್ಮನ್ನು ಸಲ್ಮಾನ್ ಭಾಯ್ ಎಂದು ಕರೆಯುವುದಿಲ್ಲ' ಎಂದು ಹೇಳಿದ್ದಾರೆ. ಇದಕ್ಕೆ ಸಲ್ಮಾನ್ 'ಈಗ ನನ್ನಲ್ಲಿ ಏನು ಬದಲಾಗಿದೆ?' ಎಂದು ಪ್ರಶ್ನಿಸಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದೆ.
ಬಳಿಕ ಇದಕ್ಕೆ ಪ್ರತಿಕ್ರಿಯಿಸಿದ ಭೂಮಿಕಾ, ಈಗ ಇಬ್ಬರೂ ಪ್ರಬುದ್ಧರಾಗಿರುವುದರಿಂದ ಅವರಲ್ಲಿ ಅನೇಕ ಬದಲಾವಣೆಗಳನ್ನು ಗಮನಿಸಿದ್ದೇನೆ ಎಂದು ಹೇಳಿದರು. ಮತ್ತೊಮ್ಮೆ ಅವರೊಂದಿಗೆ ಕೆಲಸ ಮಾಡಲು ಸಂತೋಷವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. "ಇನ್ನೊಂದು ಜೀವಿತಾವಧಿಯಲ್ಲಿ ಕಳೆದಂತೆ ಭಾಸವಾಗುತ್ತಿದೆ. ನಾವಿಬ್ಬರೂ ಆಗ ಚಿಕ್ಕವರಾಗಿದ್ದೆವು. ಈಗ ಪ್ರಬುದ್ಧರಾಗಿದ್ದೇವೆ. ಎಲ್ಲವೂ ಬದಲಾಗಿದೆ" ಎಂದು ಅವರು ಹೇಳಿದರು.
ಇದನ್ನೂ ಓದಿ: ಹಾಲಿವುಡ್ನಂತೆ ಸಿದ್ಧಗೊಳ್ಳುತ್ತಿದೆ ಪ್ರಭಾಸ್ 'ಪ್ರಾಜೆಕ್ಟ್ ಕೆ' ಸಿನಿಮಾ: ಕುತೂಹಲ ಕೆರಳಿಸುವ ವಿಡಿಯೋ ಔಟ್
ಟ್ರೇಲರ್ಗೆ ಎಲ್ಲೆಡೆ ಮೆಚ್ಚುಗೆ: 'ಕಿಸಿ ಕಾ ಬಾಯ್ ಕಿಸಿ ಕಿ ಜಾನ್' ಚಿತ್ರದ ಟ್ರೇಲರ್ ನಿನ್ನೆ (ಏಪ್ರಿಲ್ 10) ರಂದು ಬಿಡುಗಡೆಗೊಂಡಿದೆ. ಸಿನಿಮಾ ಟ್ರೇಲರ್ ನೋಡಿದ ಪ್ರೇಕ್ಷಕರು ಸಲ್ಲು ಆ್ಯಕ್ಟಿಂಗ್ಗೆ ಫಿದಾ ಆಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಗಳಿಸಿದೆ. ಫರ್ಹಾದ್ ಸಾಮ್ಜಿ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಖಾನ್, ಪೂಜಾ ಹೆಗ್ಡೆ, ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಭೂಮಿಕಾ ಚಾವ್ಲಾ, ವಿಜೇಂದರ್ ಸಿಂಗ್, ಅಭಿಮನ್ಯು ಸಿಂಗ್, ರಾಘವ್ ಜುಯಲ್, ಸಿದ್ದಾರ್ಥ್ ನಿಗಮ್, ಜಸ್ಸಿ ಗಿಲ್, ಶೆಹನಾಜ್ ಗಿಲ್, ಪಾಲಕ್ ತಿವಾರಿ ಮತ್ತು ವಿನಾಲಿ ಭಟ್ನಾಗರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಕಿಸಿ ಕಾ ಬಾಯ್ ಕಿಸಿ ಕಿ ಜಾನ್' ಏಪ್ರಿಲ್ 21ರಂದು ತೆರೆ ಕಾಣಲಿದೆ.