ETV Bharat / entertainment

I am Salman: ಹಾಲಿವುಡ್​ ಸಿನಿಮಾ ಪರ ಬಾಲಿವುಡ್​​ ಸಲ್ಲು ಪ್ರಚಾರ - ಸಲ್ಮಾನ್​ ಖಾನ್​​ ಲೇಟೆಸ್ಟ್ ನ್ಯೂಸ್

ಗಾರ್ಡಿಯನ್ಸ್ ಆಫ್ ದಿ ಗ್ಯಾಲಾಕ್ಸಿ 3 ಸಿನಿಮಾ ಪ್ರಚಾರದ ವಿಡಿಯೋವನ್ನು ನಟ ಸಲ್ಮಾನ್​ ಖಾನ್​​ ಹಂಚಿಕೊಂಡಿದ್ದಾರೆ.

Salman Khan
ಸಲ್ಮಾನ್​ ಖಾನ್​​
author img

By

Published : May 2, 2023, 6:34 PM IST

ಕೆಲ ತಿಂಗಳ ಹಿಂದೆ ನಷ್ಟದ ಹೊಡೆತಕ್ಕೆ ಸಿಲುಕಿದ್ದ ಬಾಲಿವುಡ್​ ಮತ್ತೆ ಎದ್ದು ನಿಂತಿದೆ. ಒಳ್ಳೊಳ್ಳೆ ಚಿತ್ರಗಳು ನಿರ್ಮಾಣ ಆಗುತ್ತಿವೆ. ಹಿಂದಿ ಚಿತ್ರರಂಗದ ದಿಗ್ಗಜರಾದ ಶಾರುಖ್​ ಖಾನ್​​ ಮತ್ತು ಸಲ್ಮಾನ್​ ಖಾನ್ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಸಲ್ಮಾನ್​ ಖಾನ್​​ ಸಿನಿಮಾ ಹೇಳುವಷ್ಟರ ಮಟ್ಟಿಗೆ ದೊಡ್ಡ ಹಿಟ್ ಆಗದಿದ್ದರೂ, ಬಾಕ್ಸ್​ ಆಫೀಸ್​ನಲ್ಲಿ ಸೋತಿಲ್ಲ. ಈ ಹೊತ್ತಿನಲ್ಲಿ​ ​ ಸಲ್ಲು 'ಗಾರ್ಡಿಯನ್ಸ್​​ ಆಫ್​​ ಗ್ಯಾಲಾಕ್ಸಿ 3' ಎಂಬ ಹಾಲಿವುಡ್​ ಸಿನಿಮಾ ಪರ ಪ್ರಚಾರಕ್ಕಿಳಿದಿದ್ದಾರೆ.

ಹಾಲಿವುಡ್​ ಸಿನಿಮಾ ನಿರ್ಮಾಣ ಸಂಸ್ಥೆ ಮಾರ್ವೆಲ್ ಮತ್ತು ಭಾರತದ ಬಹುಬೇಡಿಕೆ ನಟ ಸಲ್ಮಾನ್​ ಖಾನ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಒಳಗೊಂಡ ವಿಡಿಯೋವಿದು. ಈ ದೃಶ್ಯದ ಪೂರ್ತಿ ಸಲ್ಮಾನ್​ ಖಾನ್ ಅವರು "ನಾನು ಸಲ್ಮಾನ್" ಎಂಬ ಡೈಲಾಗ್ ಅನ್ನೇ ಹೇಳುತ್ತಿದ್ದಾರೆ. ಈ ವಿಡಿಯೋ ಹೊರ ಬೀಳುತ್ತಿದ್ದಂತೆ, ಚಿತ್ರದ ಅಭಿಮಾನಿಗಳ ಮೆಚ್ಚಿನ ಪಾತ್ರ 'ಗ್ರೂಟ್'ನ ಹಿಂದಿ ಆವೃತ್ತಿಗೆ ತಾರೆ ತಮ್ಮ ಧ್ವನಿಯನ್ನು ನೀಡಿದ್ದಾರೆಯೇ ಎಂಬ ಊಹಾಪೋಹಗಳು ಪ್ರಾರಂಭವಾಗಿದೆ. ಚಿತ್ರದ ಮೂಲ ಆವೃತ್ತಿಯಲ್ಲಿ ವಿನ್ ಡೀಸೆಲ್ ದನಿಯಾಗಿದ್ದಾರೆ. ಮತ್ತೊಂಡೆದೆ ಹಾಲಿವುಡ್​ ಸಿನಿಮಾ ಪರ ಸಲ್ಮಾನ್​ ಖಾನ್​ ಪ್ರಚಾರ ಮಾಡುತ್ತಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಸದ್ಯ ವಿಡಿಯೋ ಮಾತ್ರ ಹೊರಬಿದ್ದು, ಸಿನಿಪ್ರಿಯರಲ್ಲಿ ಮತ್ತು ಸಲ್ಲು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ.

'ಗಾರ್ಡಿಯನ್ಸ್ ಆಫ್ ದಿ ಗ್ಯಾಲಾಕ್ಸಿ' ಮಾರ್ವೆಲ್​ನ ಜನಪ್ರಿಯ ಸಿನಿಮಾ ಸರಣಿ. ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಭಾರತದಲ್ಲಿ ಸಲ್ಮಾನ್ ಖಾನ್ ಪ್ರಚಾರ ಮಾಡುತ್ತಿದ್ದಾರೆ. ಈ ಹಿನ್ನೆಲೆ ಇಂದು ಈ ವಿಡಿಯೋವನ್ನು ಸಲ್ಮಾನ್​ ಮತ್ತು ಸಿನಿಮಾ ನಿರ್ಮಾಣ ಸಂಸ್ಥೆ ಮಾರ್ವೆಲ್​ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಸಲ್ಮಾನ್ ಖಾನ್ 'ಗಾರ್ಡಿಯನ್ಸ್ ಆಫ್ ದಿ ಗ್ಯಾಲಾಕ್ಸಿ 3'ಗೆ ಸ್ವಾಗತ ಕೋರಿದ್ದಾರೆ.

ವಿಡಿಯೋದಲ್ಲೇನಿದೆ: ಪತ್ರಿಕಾಗೋಷ್ಠಿಯೊಂದಕ್ಕೂ ಮೊದಲು ಸಲ್ಮಾನ್​ ಖಾನ್​ ವಿಡಿಯೋವೊಂದನ್ನು ವೀಕ್ಷಿಸುತ್ತಿರುತ್ತಾರೆ. ಜನಪ್ರಿಯ ಪಾತ್ರ ಗ್ರೂಟ್​ನಿಂದ (ಗ್ರೂಟ್ ಎಂಬುದು ಮಾರ್ವೆಲ್ ಕಾಮಿಕ್ಸ್ ಪ್ರಕಟಿಸಿದ ಅಮೆರಿಕನ್ ಕಾಮಿಕ್ ಪುಸ್ತಕಗಳಲ್ಲಿ ಕಾಣಿಸಿಕೊಳ್ಳುವ ಕಾಲ್ಪನಿಕ ಪಾತ್ರ) ಸಲ್ಮಾನ್​ ಪ್ರೇರಿತರಾಗಿರುವುದು ಈ ವಿಡಿಯೋದಲ್ಲಿ ಗೊತ್ತಾಗುತ್ತದೆ. ಹಾಗಾಗಿ ಸುದ್ದಿಗೋಷ್ಠಿಯಲ್ಲಿ ತಮಗೆ ಕೇಳಲಾಗುವ ಎಲ್ಲ ಪ್ರಶ್ನೆಗಳಿಗೂ ಸಲ್ಮಾನ್​​ ಖಾನ್​​ 'ಗ್ರೂಟ್' ಹೇಳುವಂತೆಯೇ 'ಐ ಆ್ಯಮ್ ಸಲ್ಮಾನ್' (I am Salman) ಎಂದಷ್ಟೇ ಉತ್ತರ ನೀಡುತ್ತಾರೆ. 'ಗಾರ್ಡಿಯನ್ಸ್ ಆಫ್ ದಿ ಗ್ಯಾಲಾಕ್ಸಿ 3' ಸಿನಿಮಾದಲ್ಲಿ ಗ್ರೂಟ್ ಸಹ ಐ ಆ್ಯಮ್​​ ಗ್ರೂಟ್ ಎಂದಷ್ಟೇ ಹೇಳುವುದು. ಅದರಂತೆಯೇ ಸಲ್ಮಾನ್​ ಖಾನ್​ ಸುದ್ದಿಗೋಷ್ಠಿ ಉದ್ದಕ್ಕೂ 'ಐ ಆ್ಯಮ್ ಸಲ್ಮಾನ್' ಎಂದಷ್ಟೇ ಉತ್ತರ ಕೊಡುತ್ತಾರೆ. ಕೊನೆಯಲ್ಲಿ ಸಲ್ಮಾನ್​ಗೆ ಎಂದಿನಂತೆ ಮದುವೆ ಬಗ್ಗೆ ಪ್ರಶ್ನೆ ಎದುರಾಗುತ್ತದೆ. ಆಗ ಸಲ್ಮಾನ್ ಖಾನ್ ಹೆಡ್​ ಫೋನ್ (ಇದೇ ಸರಣಿಯ ಹಾಡನ್ನು ಕೇಳುತ್ತಾ)​ ಧರಿಸಿ ಹೊರಡುತ್ತಾರೆ. ಅವರ ಟಿ - ಶರ್ಟ್ ಹಿಂಭಾಗದಲ್ಲಿ ಗ್ರೂಟ್​ನ ಚಿತ್ರವಿರುತ್ತದೆ. ಸಲ್ಮಾನ್ ಖಾನ್ ಸಹ ಐದು ಬೆರಳು ತೋರಿಸಿ ಎಲ್ಲವೂ ಐದನೇ ತಾರೀಖು ತಿಳಿಯಲಿದೆ ಎಂಬಂತೆ ಸಿಗ್ನಲ್​ ಕೊಡುತ್ತಾರೆ. ಮೇ. 5ರಂದು ಈ ಚಿತ್ರ ಬಿಡುಗಡೆ ಆಗಲಿದೆ

ಇದನ್ನೂ ಓದಿ: ಎಸ್​​ಆರ್​ಕೆ - ಸಲ್ಲು ಶೂಟಿಂಗ್​ಗೆ ದಿನ ನಿಗದಿ​​​: ಅಭಿಮಾನಿಗಳಲ್ಲಿ ಗರಿಗೆದರಿದ ಕುತೂಹಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.