ETV Bharat / entertainment

ಸೊಸೆಯ ಜೊತೆ ಜನ್ಮದಿನ ಆಚರಿಸಿಕೊಂಡ ಸಲ್ಮಾನ್​ ಖಾನ್.. ಫೋಟೋ ಹಂಚಿಕೊಂಡ ಬಾಬಿ ಡಿಯೋಲ್​! - ಡಿಸೆಂಬರ್ 27

ಸಲ್ಮಾನ್ ಖಾನ್ ಮತ್ತು ಅವರ ಸೊಸೆ ಆಯತ್ ಜನ್ಮದಿನ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ನಟ ಬಾಬಿ ಡಿಯೋಲ್, ಅರ್ಬಾಜ್ ಖಾನ್, ಅರ್ಹಾನ್ ಖಾನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Etv BharatSalman Khan and his niece Aayat celebrated their birthday with family, Bobby Deol and other friends, watch
Etv Bharatಸೊಸೆಯ ಜೊತೆ ಜನ್ಮದಿನ ಆಚರಿಸಿಕೊಂಡ ಸಲ್ಮಾನ್​ ಖಾನ್.. ಫೋಟೋ ಹಂಚಿಕೊಂಡ ಬಾಬಿ ಡಿಯೋಲ್​!
author img

By ETV Bharat Karnataka Team

Published : Dec 27, 2023, 8:16 AM IST

Updated : Dec 27, 2023, 9:13 AM IST

ಮುಂಬೈ: ಸಲ್ಮಾನ್ ಖಾನ್ ಗೆ ಇಂದು 58ನೇ ಹುಟ್ಟುಹಬ್ಬದ ಸಂಭ್ರಮ. ಡಿಸೆಂಬರ್ 27 ರಂದು ಅವರು ಹುಟ್ಟಿದ ದಿನ. ಖಾನ್ ಕುಟುಂಬದಲ್ಲಿ ಭಾಯಿಜಾನ್ ಮಾತ್ರವಲ್ಲ, ಅವರ ಸೋದರ ಸೊಸೆ, ಅವರ ಸಹೋದರಿ ಅರ್ಪಿತಾ ಮತ್ತು ಆಯುಷ್ ಅವರ ಮಗಳು ಆಯತ್ ಅವರ ಜನ್ಮದಿನವೂ ಹೌದು. ಈ ವಿಶೇಷ ಸಂದರ್ಭದಲ್ಲಿ ಸಲ್ಮಾನ್ ಖಾನ್ ಮತ್ತು ಅವರ ಸೊಸೆ ಒಟ್ಟಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಹುಟ್ಟುಹಬ್ಬದ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಶೇಷ ದಿನದಂದು ಬಾಬಿ ಡಿಯೋಲ್ ಕೂಡ ಉಪಸ್ಥಿತರಿದ್ದರು. ಬಾಬಿ ಅವರು ಸಲ್ಮಾನ್ ಖಾನ್ ಅವರೊಂದಿಗೆ ಇರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ಸಲ್ಮಾನ್​ಖಾನ್​ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.

ತಮ್ಮ 58 ನೇ ಹುಟ್ಟುಹಬ್ಬದ ದಿನದಂದು ಸಲ್ಮಾನ್ ಖಾನ್ ತಮ್ಮ ಸೊಸೆ ಆಯತ್ ಅವರೊಂದಿಗೆ ಕೇಕ್ ಕತ್ತರಿಸುವ ಮೂಲಕ ವಿಶೇಷ ದಿನವನ್ನು ಸಂಭ್ರಮಿಸಿದರು.ಜನ್ಮದಿನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದೆ. ಈ ಸಂಭ್ರಮಾಚರಣೆಯಲ್ಲಿ ಸಲ್ಮಾನ್ ಖಾನ್ ಮತ್ತು ಅವರ ಸೊಸೆ ಹಾಗೂ ಸಹೋದರಿ ಅರ್ಪಿತಾ ಖಾನ್, ಆಯುಷ್ ಶರ್ಮಾ, ಅರ್ಬಾಜ್ ಖಾನ್, ಅರ್ಹಾನ್ ಖಾನ್, ಹೆಲೆನ್, ಅಲ್ವಿರಾ ಖಾನ್ ಅಗ್ನಿಹೋತ್ರಿ, ಯುಲಿಯಾ ವಂತೂರ್, ಬಾಬಿ ಡಿಯೋಲ್ ಮತ್ತು ಅನೇಕ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಹಾಜರಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ವಿಡಿಯೋದಲ್ಲಿ ಸಲ್ಮಾನ್ ಖಾನ್, ಹೆಲೆನ್, ಅರ್ಪಿತಾ, ಆಯುಷ್ ಅವರು ಆಯತ್ ಅವರ ಕೇಕ್ ಕತ್ತರಿಸುವಾಗ ಹಾಡು ಹೇಳುತ್ತಿರುವುದನ್ನು ಕಾಣಬಹುದು. ಮತ್ತೊಂದು ವಿಡಿಯೋದಲ್ಲಿ ಅರ್ಪಿತಾ ತನ್ನ ಮಗಳು ಆಯತ್‌ಗೆ ಕೇಕ್ ತಿನ್ನಿಸುತ್ತಿದ್ದಾರೆ. ಈ ಸಮಯದಲ್ಲಿ ಅರ್ಪಿತಾ ಚಿಕ್ಕಪ್ಪ ಸಲ್ಮಾನ್‌ಗೆ ಕೇಕ್ ತಿನ್ನಿಸುವಂತೆ ಆಯತ್‌ಗೆ ಕೇಳಿಕೊಳ್ಳುವುದು ವಿಡಿಯೋದಲ್ಲಿ ದಾಖಲಾಗಿದೆ. ಇದಾದ ಬಳಿಕ ಅರ್ಪಿತಾ ತನ್ನ ಸಹೋದರ ಸಲ್ಮಾನ್‌ಗೆ ಕೇಕ್ ತಿನ್ನಿಸಿದ್ದಾರೆ. ಅದೇ ಸಮಯದಲ್ಲಿ, ಸಲ್ಮಾನ್ ತನ್ನ ಪ್ರೀತಿಯ ಸೊಸೆಗೆ ಕೇಕ್ ತಿನ್ನಿಸಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಈ ವಿಡಿಯೋವನ್ನು ಅಭಿಮಾನಿಗಳು ಲೈಕ್ ಮಾಡುತ್ತಿದ್ದಾರೆ.

ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬಕ್ಕೆ ಬಾಬಿ ಡಿಯೋಲ್ ಶುಭ ಕೋರಿದ್ದಾರೆ. ಅನಿಮಲ್ ಸ್ಟಾರ್ ಬಾಬಿ ಡಿಯೋಲ್ ಕೂಡ ಸಲ್ಮಾನ್ ಖಾನ್ ಮತ್ತು ಅವರ ಸೊಸೆಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ನಟ ಸಲ್ಮಾನ್ ಖಾನ್ ಅವರೊಂದಿಗೆ ಪಾರ್ಟಿಯ ಚಿತ್ರಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. 'ಮಾಮು ಐ ಲವ್ ಯೂ' ಎಂದು ಅಡಿ ಬರಹ ಕೊಟ್ಟಿದ್ದಾರೆ, ಮೊದಲ ಚಿತ್ರದಲ್ಲಿ, ಬಾಬಿ ಡಿಯೋಲ್ ಸೆಲ್ಫಿ ತೆಗೆದುಕೊಂಡಿದ್ದು, ಸಲ್ಮಾನ್ ಖಾನ್ ಅವರನ್ನು ಚುಂಬಿಸುತ್ತಿದ್ದಾರೆ. ಇನ್ನು ಎರಡನೇ ಚಿತ್ರದಲ್ಲಿ ಇಬ್ಬರೂ ನಗುತ್ತಾ ಕ್ಯಾಮರಾಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಈ ಪೋಸ್ಟ್‌ನಲ್ಲಿ, ಸನ್ನಿ ಕೆಂಪು ಹೃದಯದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ:ಪುತ್ರಿ ರಾಹಾ ಜೊತೆ ಪ್ರವಾಸ ಹೊರಟ ರಣ್​ಬೀರ್, ಆಲಿಯಾ: ವಿಡಿಯೋ

Last Updated : Dec 27, 2023, 9:13 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.