ETV Bharat / entertainment

ಬೆಂಗಳೂರಿನಲ್ಲಿ 'ಸಲಾರ್'​ ಸಕ್ಸಸ್​ ಸೆಲೆಬ್ರೇಶನ್​: ಫೋಟೋ - ವಿಡಿಯೋಗಳಿಲ್ಲಿವೆ - ಪ್ರಭಾಸ್

salaar success party: ನಿನ್ನೆ ಸಂಜೆ ಬೆಂಗಳೂರಿನಲ್ಲಿ ಸಲಾರ್ ತಂಡ ಸಕ್ಸಸ್​ ಸೆಲೆಬ್ರೇಶನ್ ನಡೆಸಿದೆ.

ಸಲಾರ್ ಸಕ್ಸಸ್​ ಸೆಲೆಬ್ರೇಶನ್
salaar success party
author img

By ETV Bharat Karnataka Team

Published : Jan 13, 2024, 3:46 PM IST

2023ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾಗಿದ್ದ 'ಸಲಾರ್​' ಸಿನಿಮಾ ಡಿಸೆಂಬರ್​ 22ರಂದು ತೆರೆಗಪ್ಪಳಿಸಿ ಅಭುತಪೂರ್ವ ಯಶ ಕಂಡಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಚಿತ್ರತಂಡ ಅದ್ಧೂರಿಯಾಗಿ ಸಂಭ್ರಮಾಚಣೆ ನಡೆಸಿದೆ. ಶುಕ್ರವಾರ ರಾತ್ರಿ ಹೈ ಅಲ್ಟ್ರಾ ಲೌಂಜ್‌ನಲ್ಲಿ ನಿರ್ದೇಶಕ ಪ್ರಶಾಂತ್ ನೀಲ್, ನಟ ಪ್ರಭಾಸ್​, ನಟಿ ಶ್ರುತಿ ಹಾಸನ್, ನಟ ಜಗಪತಿ ಬಾಬು, ನಿರ್ಮಾಪಕ ವಿಜಯ್​ ಕಿರಗಂದೂರ್​ ಸೇರಿದಂತೆ ಚಿತ್ರತಂಡ ಸಕ್ಸಸ್​ ಸೆಲೆಬ್ರೇಶನ್​ ಮಾಡಿದೆ. ಬ್ಲ್ಯಾಕ್​ ಥೀಮ್ ಕೋಡ್​ನಲ್ಲಿ ಚಿತ್ರತಂಡ ಕಾಣಿಸಿಕೊಂಡಿದೆ.

ಸಲಾರ್ ಸಕ್ಸಸ್ ಸಲೆಬ್ರೇಶನ್​ನ ಹಲವು ಫೋಟೋ, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ. ನಟಿ ಶ್ರುತಿ ಹಾಸನ್ ಕೂಡ ಚಿತ್ರ ತಂಡದವರೊಂದಿಗಿನ ಫೋಟೋ-ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ, ಪ್ರಭಾಸ್ ಕಂಪ್ಲೀಟ್​ ಬ್ಲ್ಯಾಕ್​​​ ಔಟ್​​ಫಿಟ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡದ ಎಲ್ಲರೂ ಬ್ಲ್ಯಾಕ್​ ಥೀಮ್ ಕೋಡ್ ಫಾಲೋ ಮಾಡಿದ್ದಾರೆ. ಇದಕ್ಕೂ ಮುನ್ನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಲಾರ್​ ಚಿತ್ರತಂಡ ಭೇಟಿ ನೀಡಿತ್ತು. ಪ್ರಭಾಸ್​, ಪ್ರಶಾಂತ್​ ನೀಲ್​, ವಿಜಯ್​​ ಕಿರಗಂದೂರ್​ ಅವರು ದೇವಿಯ ಆಶೀರ್ವಾದ ಪಡೆದಿದ್ದಾರೆ.

'ಸಲಾರ್' 2023 ಡಿಸೆಂಬರ್ 22 ರಂದು ತೆರೆಗಪ್ಪಳಿಸಿತ್ತು. ತೆಲುಗು, ಕನ್ನಡ, ತಮಿಳು, ಮಾಲಯಳಂ ಮತ್ತು ಹಿಂದಿ ಸೇರಿ ಪಂಚಭಾಷೆಗಳಲ್ಲಿ ಬಿಡುಗಡೆ ಆದ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಪ್ರಭಾಸ್, ಪೃಥ್ವಿರಾಜ್​ ಸುಕುಮಾರನ್ ಕಾಣಿಸಿಕೊಂಡಿದ್ದಾರೆ. ಅದೇ ಸಮಯ ಬಾಲಿವುಡ್​ ಕಿಂಗ್​ ಖಾನ್​​ ಶಾರುಖ್​ ಅವರ ಬಹು ನಿರೀಕ್ಷಿತ ಚಿತ್ರ ಡಂಕಿ ಕೂಡ ಬಿಡುಗಡೆ ಆಗಿ ಬಾಕ್ಸ್​​ ಆಫೀಸ್​ನಲ್ಲಿ ಭರ್ಜರಿ ಪೈಪೋಟಿ ನೀಡಿತ್ತು. ಅದಾಗ್ಯೂ ಸೌತ್​ ಸಿನಿಮಾ ಬಹುಕೋಟಿ ಸಂಗ್ರಹಿಸುವಲ್ಲಿ ಯಶಸ್ವಿ ಆಗಿದೆ.

ಇದನ್ನೂ ಓದಿ: ನಿರ್ದೇಶಕ ಅಶುತೋಷ್ ಗೋವಾರಿಕರ್ ಜೊತೆ ಕಾಣಿಸಿಕೊಂಡ ರಿಷಬ್​ ಶೆಟ್ಟಿ!

ಸಲಾರ್ ಭಾಗ 1 ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಸರಿ - ಸುಮಾರು 700 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂದು ವರದಿಯಾಗಿದೆ. ಸಲಾರ್ ಸೀಕ್ವೆಲ್​ - ಶೌರ್ಯಾಂಗ ಪರ್ವಂ ಕೆಲಸ ಮುಂದುವರಿದಿದೆ. ಪ್ರಶಾಂತ್​ ನೀಲ್​ ನಿರ್ದೇಶನದ ಈ ಚಿತ್ರ ಖಾನ್ಸಾರ್​ ಎಂಬ ನಗರದಲ್ಲಿ ಇಬ್ಬರು ಬಾಲ್ಯಸ್ನೇಹಿತರು ಶತ್ರುಗಳಾದ ಕಥೆಯನ್ನು ವಿವರಿಸುತ್ತದೆ. ಸಲಾರ್​ ಪ್ರಭಾಸ್​ ಅವರ ಸ್ಟಾರ್​ಡಮ್​ ಅನ್ನು ಹೆಚ್ಚಿಸಿದೆ. ಬಾಹುಬಲಿ 1 ಮತ್ತು 2ರ ಅದ್ಭುತ ಯಶಸ್ಸಿನ ನಂತರ, ಪ್ರಭಾಸ್ ಅವರ ಯಾವ ಚಿತ್ರಗಳೂ ಕೂಡ ದೊಡ್ಡ ಮಟ್ಟಿನ ಹೆಸರು ಮಾಡಲಿಲ್ಲ. ಈ ಹಿನ್ನೆಲೆ, ಸಲಾರ್​​ ನಟನ ಜನಪ್ರಿಯತೆ ಹೆಚ್ಚಿಸೋ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ ಸಿನಿಮಾ ಮೇಲೆ ಕುತೂಹಲ: '45' ಶೂಟಿಂಗ್​ ಫೋಟೋಗಳಿಲ್ಲಿವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.