ETV Bharat / entertainment

'ಸಲಾರ್​' ಬಿಡುಗಡೆಗೆ ಕ್ಷಣಗಣನೆ: ಚಿತ್ರದ ಎರಡನೇ ಹಾಡು 'ಪ್ರತಿಕಥೆಯ..' ನೋಡಿ

Salaar second single: ನಾಳೆ ತೆರೆ ಕಾಣಲಿರುವ 'ಸಲಾರ್​' ಚಿತ್ರದ 'ಪ್ರತಿಕಥೆಯ' ಎಂಬ ಶೀರ್ಷಿಕೆಯ ಹಾಡು ಅನಾವರಣಗೊಂಡಿದೆ.

salaar-second-single-prathikateya-released
'ಸಲಾರ್​' ಬಿಡುಗಡೆಗೆ ಕ್ಷಣಗಣನೆ: ಚಿತ್ರದ ಎರಡನೇ ಹಾಡು 'ಪ್ರತಿಕಥೆಯ..' ಅನಾವರಣ​
author img

By ETV Bharat Karnataka Team

Published : Dec 21, 2023, 5:54 PM IST

ನಟ ಡಾರ್ಲಿಂಗ್​ ಪ್ರಭಾಸ್​ ಅಭಿನಯದ 'ಸಲಾರ್​' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಅಡ್ವಾನ್ಸ್​ ಬುಕ್ಕಿಂಗ್​ಗೆ​ ಉತ್ತಮ ರೆಸ್ಪಾನ್ಸ್​ ಸಿಕ್ಕಿದ್ದು, ಚಿತ್ರಮಂದಿರಗಳು ಹೌಸ್‌ಫುಲ್​ ಆಗಲಿವೆ. ಈಗಾಗಲೇ ರಿಲೀಸ್ ಆಗಿರುವ ಎರಡು ಟ್ರೇಲರ್​ಗಳು ಹಾಗೂ ಫಸ್ಟ್​ ಸಿಂಗಲ್​ ಸಿನಿ ಪ್ರೇಮಿಗಳ ಉತ್ಸಾಹ ಹೆಚ್ಚಿಸಿದೆ. ಆ ಕುತೂಹಲವನ್ನು ನಾಳೆಯವರೆಗೆ ಕಾಯ್ದಿರಿಸಲು ಚಿತ್ರತಂಡ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ಮೊದಲ ಹಾಡಿಗಿಂತ ಈ ಹಾಡು ಹೆಚ್ಚು ಭಾವನಾತ್ಮಕವಾಗಿರುವುದರಿಂದ ಸಿನಿ ಪ್ರೇಮಿಗಳು ಬೇಗನೆ ಕನೆಕ್ಟ್​ ಆಗಿದ್ದಾರೆ.

  • " class="align-text-top noRightClick twitterSection" data="">

ಕನ್ನಡದಲ್ಲಿ 'ಪ್ರತಿಕಥೆಯು', ತೆಲುಗಿನಲ್ಲಿ 'ಪ್ರತಿಕದಲೋ', ಹಿಂದಿಯಲ್ಲಿ 'ಕಿಸ್ಸನ್​ ಮೇ', ಮಲಯಾಳಂನಲ್ಲಿ 'ಪ್ರತಿಕಾರಮೋ' ಮತ್ತು ತಮಿಳಿನಲ್ಲಿ 'ಪಲಕದಯಿಲ್' ಎಂಬ ಶೀರ್ಷಿಕೆಯಡಿ ಹಾಡನ್ನು ಅನಾವರಣಗೊಳಿಸಲಾಗಿದೆ. ​'ಕೆಜಿಎಫ್​' ಸಿನಿಮಾ ಖ್ಯಾತಿಯ ರವಿ ಬಸ್ರೂರು ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಇದಕ್ಕೂ ಮುನ್ನ 'ಆಕಾಶ ಗಾಡಿಯ' ಎಂಬ ಲಿರಿಕಲ್‍ ಹಾಡು ಅನಾವರಣಗೊಂಡಿತ್ತು. ಕನ್ನಡ ಆವೃತ್ತಿಯಲ್ಲಿ ಈ ಹಾಡು 1.3 ಮಿಲಿಯನ್​ ವೀಕ್ಷಣೆ ಪಡೆದುಕೊಂಡಿದೆ.

'ಸಲಾರ್​' ಅಡ್ವಾನ್ಸ್​ ಬುಕ್ಕಿಂಗ್​: ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಮೊದಲ ದಿನದ ಶೋಗಳಿಗೆ 14,10,965 ಟಿಕೆಟ್‌ಗಳನ್ನು ಮಾರಾಟ ಮಾಡಿದ್ದು, 29.55 ಕೋಟಿ ರೂ.ಗಳ ವ್ಯವಹಾರ ನಡೆಸಿದೆ. ಇದು ಮೊದಲ ದಿನದ ಆನ್​​ಲೈನ್​ ವ್ಯವಹಾರವಷ್ಟೇ. ಈ ಅಂಕಿ - ಅಂಶ ಏರಿಕೆ ಕಾಣಲಿದೆ. 'ಸಲಾರ್‌' ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್​​ ಪ್ರೊಸೆಸ್​ ಅನ್ನು ಕೆಲ ದಿನಗಳ ಹಿಂದೆ ತೆರೆಯಲಾಗಿದ್ದು, ಕಲೆಕ್ಷನ್​​ ಅಂಕಿಅಂಶಗಳು ಉತ್ತಮವಾಗಿರುವಂತೆ ತೋರುತ್ತಿದೆ. ನಾಳೆ ಸಲಾರ್​ ಸಿನಿಮಾ ಹಿಂದಿ, ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಭಾರತದಾದ್ಯಂತ 10,472 ಸ್ಕ್ರೀನ್‌ಗಳಲ್ಲಿ ತೆರೆಕಾಣಲಿದೆ.

'ಸಲಾರ್' ಸುತ್ತಲಿನ ಉತ್ಸಾಹ ಜೋರಾಗಿದೆ. ಚಿತ್ರೋದ್ಯಮದ ಪಂಡಿತರು, ವಿಮರ್ಶಕರ ಪ್ರಕಾರ, ಸಲಾರ್‌ ಮೊದಲ ದಿನದ ಕಲೆಕ್ಷನ್​​ ಮೂಲಕ ದಾಖಲೆ ಬರೆಯಲಿದೆ. ಮುಂಗಡ ಟಿಕೆಟ್​​ ಬುಕಿಂಗ್​ ವಿಚಾರದಲ್ಲಿ ದಾಖಲೆಯ ಅಂಕಿಅಂಶ ದಾಖಲಾಗಿದೆ. ಸುಮಾರು 1.3 ಮಿಲಿಯನ್ ಜನರು ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ ತಮ್ಮ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಸಲಾರ್ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದು, ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಕೆಜಿಎಫ್​, ಕಾಂತಾರ ಮುಂತಾದ ಬ್ಲಾಕ್​ಬಸ್ಟರ್​ ಸಿನಿಮಾಗಳಿಗೆ ಬಂಡವಾಳ ಹೂಡಿರುವ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​ 'ಸಲಾರ್​' ಸಿನಿಮಾ ನಿರ್ಮಿಸಿದೆ. ಚಿತ್ರದಲ್ಲಿ ಪ್ರಭಾಸ್​ ಜೊತೆಗೆ ಶ್ರುತಿ ಹಾಸನ್​, ಪೃಥ್ವಿರಾಜ್​ ಸುಕುಮಾರನ್​, ಮೀನಾಕ್ಷಿ ಚೌಧರಿ, ಈಶ್ವರಿ ರಾವ್​, ಶರಣ್​ ಶಕ್ತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಿಸೆಂಬರ್​ 22ರಂದು ಬಿಡುಗಡೆಯಾಗಲಿರುವ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 1000 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವುದು ಖಚಿತ ಎಂದು ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: 15 ವರ್ಷಗಳ ಹಿಂದೆಯೇ ಆರಂಭಗೊಂಡಿತ್ತು 'ಸಲಾರ್' ಪಯಣ: ಇಂಟ್ರೆಸ್ಟಿಂಗ್​ ವಿಚಾರಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.