ETV Bharat / entertainment

'ಸಲಾರ್​' ಚಿತ್ರದ ಫ್ರೆಂಡ್​ಶಿಪ್​ ಥೀಮ್ ಸಾಂಗ್​ 'ಗೆಳೆಯ' ಬಿಡುಗಡೆ​ - ಈಟಿವಿ ಭಾರತ ಕನ್ನಡ

Salaar song Geleya out: ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ 'ಸಲಾರ್' ಚಿತ್ರದ 'ಗೆಳೆಯ' ಸಾಂಗ್​ ಬಿಡುಗಡೆಯಾಗಿದೆ.

blockbuster-salaar-movie-song-geleya-out
'ಸಲಾರ್​'
author img

By ETV Bharat Karnataka Team

Published : Dec 26, 2023, 7:48 PM IST

ಪ್ರಶಾಂತ್ ನೀಲ್ ಆ್ಯಕ್ಷನ್​ ಕಟ್​​ ಹೇಳಿರುವ ಬಹುನಿರೀಕ್ಷಿತ 'ಸಲಾರ್' ಸಿನಿಮಾ ಕಳೆದ ಶುಕ್ರವಾರದಂದು ಬಿಡುಗಡೆಯಾಗಿದ್ದು, ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಡಾರ್ಲಿಂಗ್​ ಪ್ರಭಾಸ್​ ಮತ್ತು ಪೃಥ್ವಿರಾಜ್​ ಸುಕುಮಾರನ್​ ನಟನೆಗೆ ಪ್ರೇಕ್ಷಕರು ಫುಲ್​ ಮಾರ್ಕ್ಸ್​​ ನೀಡಿದ್ದಾರೆ. ಈ ಚಿತ್ರದ ಹಾಡುಗಳಿಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಮತ್ತೊಂದು ಹಾಡನ್ನು ಯೂಟ್ಯೂಬ್​ನಲ್ಲಿ ರಿಲೀಸ್​ ಮಾಡಿದೆ. ಫ್ರೆಂಡ್​ಶಿಪ್ ಕುರಿತಾದ ಸಾಂಗ್​ ಇದಾಗಿದೆ. ​

  • " class="align-text-top noRightClick twitterSection" data="">

ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​​ ಹಾಡನ್ನು ಹಂಚಿಕೊಳ್ಳಲು ಸೋಷಿಯಲ್​ ಮೀಡಿಯಾವನ್ನು ವೇದಿಕೆಯನ್ನಾಗಿ ಬಳಸಿಕೊಂಡಿತು. ವಿನರಾ (ತೆಲುಗು), ಗೆಳೆಯ (ಕನ್ನಡ), ಯರಾ (ಹಿಂದಿ), ಅರಿವಾಯಿ (ತಮಿಳು), ವರಮಾಯಿ (ಮಲಯಾಳಂ) ಈ ಶೀರ್ಷಿಕೆಗಳೊಂದಿಗೆ ಹೊಂಬಾಳೆ ಫಿಲ್ಮ್ಸ್​ ಯೂಟ್ಯೂಬ್​ನಲ್ಲಿ 5 ಭಾಷೆಗಳಲ್ಲಿ ಹಾಡು ಬಿಡುಗಡೆಯಾಗಿದೆ. ಕನ್ನಡ ಭಾಷೆಯಲ್ಲಿ ಈ ಹಾಡು 1 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಪ್ರಭಾಸ್​ ಮತ್ತು ಪೃಥ್ವಿರಾಜ್​ ನಡುವಿನ ಸ್ನೇಹವನ್ನು ಸಾರುವ ಹಾಡು ಇದಾಗಿದೆ.

ಭಾರತೀಯ ಬಾಕ್ಸ್ ಆಫೀಸ್ ಕಲೆಕ್ಷನ್​: ವರದಿಗಳ ಪ್ರಕಾರ 'ಸಲಾರ್'​ ತೆರೆಕಂಡ ದಿನವೇ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ 90.7 ಕೋಟಿ ರೂ. ಗಳಿಸಿದೆ. ಎರಡನೇ ದಿನ 56.35 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಮೂರನೇ ದಿನ 62.05 ಕೋಟಿ ರೂ.ನ ವ್ಯವಹಾರ ನಡೆಸಿದ ಸಿನಿಮಾ ತನ್ನ ನಾಲ್ಕನೇ ದಿನ ಅಂದರೆ ಮೊದಲ ಸೋಮವಾರ 42.50 ಕೋಟಿ ರೂಪಾಯಿಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ ಈವರೆಗೆ 251.60 ಕೋಟಿ ರೂ. ಸಂಪಾದಿಸಿದೆ.

ಸಲಾರ್ ಕಲೆಕ್ಷನ್​​ ಭಾನುವಾರದ ವೇಳೆಗೆ ಜಾಗತಿಕವಾಗಿ 400 ಕೋಟಿ ರೂ. ಮೀರಿದೆ. ಸೋಮವಾರದ ಕಲೆಕ್ಷನ್​ ಸೇರಿಸಿದರೆ, ಚಿತ್ರ ಈಗಾಗಲೇ 450 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ ಅಂತಲೇ ಹೇಳಬಹುದು. ಪ್ರಶಾಂತ್​​ ನೀಲ್​ ಅವರ ಖಾನ್ಸಾರ್ ಎಂಬ ಕಾಲ್ಪನಿಕ ನಗರದಲ್ಲಿ ದೇವ (ಪ್ರಭಾಸ್) ಮತ್ತು ವರದ (ಪೃಥ್ವಿರಾಜ್) ಪಾತ್ರಗಳ ಸುತ್ತ ಕಥೆ ಸುತ್ತುತ್ತದೆ.

ಪ್ರಶಾಂತ್ ನೀಲ್ ಅವರ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶ್ರುತಿ ಹಾಸನ್, ಈಶ್ವರಿ ರಾವ್, ಜಗಪತಿ ಬಾಬು, ಶ್ರೀಯಾ ರೆಡ್ಡಿ, ಬಾಬಿ ಸಿಂಹ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ನಿರ್ಮಾಪಕ ವಿಜಯ್ ಕಿರಗಂದೂರು ಚಿತ್ರ ನಿರ್ಮಿಸಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಶಾರುಖ್ ಖಾನ್ ಅವರ 'ಡಂಕಿ'ಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಇದನ್ನೂ ಓದಿ: 'ಸಲಾರ್​' ಮುಂದುವರಿದ ಭಾಗ ಮತ್ತಷ್ಟು ಅದ್ಭುತ: ನಟ ಪ್ರಭಾಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.