ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿರುವ ಬಹುನಿರೀಕ್ಷಿತ 'ಸಲಾರ್' ಸಿನಿಮಾ ಕಳೆದ ಶುಕ್ರವಾರದಂದು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಬಹುತೇಕ ಪಾಸಿಟಿವ್ ರೆಸ್ಪಾನ್ಸ್ ಸ್ವೀಕರಿಸಿದೆ. ಬಾಕ್ಸ್ ಆಫೀಸ್ ಓಟ ಅದ್ಭುತವಾಗಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸಿನಿಮಾ ಸೋಮವಾರದಂದು ಭಾರತೀಯ ಬಾಕ್ಸ್ ಆಫೀಸ್ನಲ್ಲಿ 250 ಕೋಟಿ ರೂ.ನ ಕ್ಲಬ್ ಸೇರುವಲ್ಲಿ ಯಶ ಕಂಡಿದೆ. ಸಿನಿಮಾದಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಅಮೋಘವಾಗಿ ಅಭಿನಯಿಸಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಶೈಲಿಗೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
-
December 25th India Box Office #Prabhas ' #Salaar vs #ShahRukhKhan's #Dunki [Christmas Day]
— Manobala Vijayabalan (@ManobalaV) December 26, 2023 " class="align-text-top noRightClick twitterSection" data="
Salaar has SOLD a WHOPPING 11,78,609 tickets from 10293 shows with 42.07% occupancy.
National Chains
PVR - 1,51,711 - ₹ 5.74 cr
INOX - 1,06,050 - ₹ 3.75 cr
Cinepolis… pic.twitter.com/az60kmhgJf
">December 25th India Box Office #Prabhas ' #Salaar vs #ShahRukhKhan's #Dunki [Christmas Day]
— Manobala Vijayabalan (@ManobalaV) December 26, 2023
Salaar has SOLD a WHOPPING 11,78,609 tickets from 10293 shows with 42.07% occupancy.
National Chains
PVR - 1,51,711 - ₹ 5.74 cr
INOX - 1,06,050 - ₹ 3.75 cr
Cinepolis… pic.twitter.com/az60kmhgJfDecember 25th India Box Office #Prabhas ' #Salaar vs #ShahRukhKhan's #Dunki [Christmas Day]
— Manobala Vijayabalan (@ManobalaV) December 26, 2023
Salaar has SOLD a WHOPPING 11,78,609 tickets from 10293 shows with 42.07% occupancy.
National Chains
PVR - 1,51,711 - ₹ 5.74 cr
INOX - 1,06,050 - ₹ 3.75 cr
Cinepolis… pic.twitter.com/az60kmhgJf
ಭಾರತೀಯ ಬಾಕ್ಸ್ ಆಫೀಸ್ ಕಲೆಕ್ಷನ್: ವರದಿಗಳ ಪ್ರಕಾರ ಸಲಾರ್ ತೆರೆಕಂಡ ದಿನವೇ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 90.7 ಕೋಟಿ ರೂ. ಗಳಿಸಿದೆ. ಎರಡನೇ ದಿನ 56.35 ಕೋಟಿ ರೂ. ಕಲೆಕ್ಷನ್ ಮಾಡಿದೆ. ಮೂರನೇ ದಿನ 62.05 ಕೋಟಿ ರೂ.ನ ವ್ಯವಹಾರ ನಡೆಸಿದ ಸಿನಿಮಾ ತನ್ನ ನಾಲ್ಕನೇ ದಿನ ಅಂದರೆ ಮೊದಲ ಸೋಮವಾರ 42.50 ಕೋಟಿ ರೂಪಾಯಿಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಈವರೆಗೆ 251.60 ಕೋಟಿ ರೂ. ಸಂಪಾದಿಸಿದೆ.
-
Superb Day 4 for pan India Star #Prabhas' #Salaar at the Box Office.
— Manobala Vijayabalan (@ManobalaV) December 25, 2023 " class="align-text-top noRightClick twitterSection" data="
CROSSES ₹400 cr gross mark and heading… pic.twitter.com/yUZKROslNi
">Superb Day 4 for pan India Star #Prabhas' #Salaar at the Box Office.
— Manobala Vijayabalan (@ManobalaV) December 25, 2023
CROSSES ₹400 cr gross mark and heading… pic.twitter.com/yUZKROslNiSuperb Day 4 for pan India Star #Prabhas' #Salaar at the Box Office.
— Manobala Vijayabalan (@ManobalaV) December 25, 2023
CROSSES ₹400 cr gross mark and heading… pic.twitter.com/yUZKROslNi
ಡಂಕಿ ಸಿನಿಮಾಗೆ ಭರ್ಜರಿ ಪೈಪೋಟಿ: ಡಿಸೆಂಬರ್ 22 ರಂದು ಶಾರುಖ್ ಖಾನ್ ಅವರ ಬಹುನಿರೀಕ್ಷೆಯ 'ಡಂಕಿ' ಕೂಡ ಥಿಯೇಟರ್ ಪ್ರವೇಶಿಸಿದೆ. ಡಂಕಿ ಬಳಿಕ ಸಲಾರ್ ತೆರೆಗಪ್ಪಳಿಸಿ ಬಾಕ್ಸ್ ಅಫೀಸ್ನಲ್ಲಿ ಪೈಪೋಟಿ ನಡೆಸುತ್ತಿದೆ. ಕಲೆಕ್ಷನ್ ವಿಚಾರದಲ್ಲಿ ಡಂಕಿಗಿಂತ ಸಲಾರ್ ಎರಡು ಹೆಜ್ಜೆ ಮುಂದಿದೆ. ಕ್ರಿಸ್ಮಸ್ ದಿನದಂದು ಸಲಾರ್ ಡಂಕಿಗಿಂತ ಎರಡು ಪಟ್ಟು ಹೆಚ್ಚು ಕಲೆಕ್ಷನ್ ಮಾಡಿದೆ. ಶಾರುಖ್ ಖಾನ್ ನಟನೆಯ ಸಿನಿಮಾ ಐದನೇ ದಿನ (ಸೋಮವಾರ) ದಂದು 22.50 ಕೋಟಿ ರೂ. ಗಳಿಸಿದ್ದು, ಭಾರತೀಯ ಬಾಕ್ಸ್ ಆಫೀಸ್ನಲ್ಲಾದ ಒಟ್ಟು ಗಳಿಕೆ 128 ಕೋಟಿ ರೂಪಾಯಿಗಳು..
ಇದನ್ನೂ ಓದಿ: ಶುರಾ ಖಾನ್ ಜೊತೆಗೆ ನಿಖಾ ಮಾಡಿಕೊಂಡ ಫೋಟೋಗಳನ್ನು ಹಂಚಿಕೊಂಡ ನಟ ಅರ್ಬಾಜ್ ಖಾನ್
ಸಲಾರ್ ಕಲೆಕ್ಷನ್ ಭಾನುವಾರದ ವೇಳೆಗೆ ಜಾಗತಿಕವಾಗಿ 400 ಕೋಟಿ ರೂ. ಮೀರಿದೆ. ಸೋಮವಾರದ ಕಲೆಕ್ಷನ್ ಸೇರಿಸಿದರೆ, ಚಿತ್ರ ಈಗಾಗಲೇ 450 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಅಂತಲೇ ಹೇಳಬಹುದು. ಪ್ರಶಾಂತ್ ನೀಲ್ ಅವರ ಖಾನ್ಸಾರ್ ಎಂಬ ಕಾಲ್ಪನಿಕ ನಗರದಲ್ಲಿ ದೇವ (ಪ್ರಭಾಸ್) ಮತ್ತು ವರದ (ಪೃಥ್ವಿರಾಜ್) ಪಾತ್ರಗಳ ಸುತ್ತ ಕಥೆ ಸುತ್ತುತ್ತದೆ.
ಇದನ್ನೂ ಓದಿ: 'ಕೆಸಿಸಿ ಕಪ್ ದೇಶದಲ್ಲೇ ವಿನೂತನ ಪ್ರಯತ್ನ': ಫೈನಲ್ ಪಂದ್ಯ ವೀಕ್ಷಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್