ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ತಾರೆಯರ, ತಂತ್ರಜ್ಞರ ಸಮಾಗಮದಲ್ಲಿ ನಡೆಯುವ ಪ್ರತಿಷ್ಠಿತ ಸೈಮಾ ಅವಾರ್ಡ್ಸ್ 2022 ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನೆನಪಿನೊಂದಿಗೆ ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಎರಡು ದಿನಗಳ ಕಾರ್ಯಕ್ರಮವಾಗಿದ್ದು ಇಂದೂ ಕೂಡ ನಡೆಯಲಿದೆ. ಕಳೆದ ಹತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯುತ್ತಿದೆ.
SIIMA - 'ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್' 2012ರಲ್ಲಿ ಆರಂಭಗೊಂಡಿದ್ದು, ಈ ಬಾರಿ 10 ವರ್ಷದ ಸಂಭ್ರಮಾಚರಣೆಯಲ್ಲಿದೆ. ಪ್ರತಿ ಭಾಷೆಯಲ್ಲಿ ಸುಮಾರು 19 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. 2021ರಲ್ಲಿ ತೆರೆಗೆ ಬಂದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳನ್ನು ನಾನಾ ವಿಭಾಗಗಳಡಿ ನಾಮಿನೇಷನ್ ಮಾಡಲಾಗಿತ್ತು. ಈ ಪೈಕಿ ಹಲವು ಸಿನಿಮಾಗಳು ನಿನ್ನೆ ಪ್ರಶಸ್ತಿ ಪಡೆದಿವೆ.
ದಿ. ಪುನೀತ್ ರಾಜ್ಕುಮಾರ್ ನೆನಪಿನೊಂದಿಗೆ ಈ ಕಾರ್ಯಕ್ರಮ ನಡೆದಿದ್ದು, ಯುವರತ್ನನಿಗೆ ಮರಣೋತ್ತರ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ. ತರುಣ್ ಸುಧೀರ್ ನಿರ್ದೇಶನದಲ್ಲಿ 2021ರಲ್ಲಿ ಬಂದ ರಾಬರ್ಟ್ ಸಿನಿಮಾದ ಸಿನಿಮಾಟೋಗ್ರಫಿಗೆ 'ಬೆಸ್ಟ್ ಸಿನಿಮಾಟೋಗ್ರಫಿ' (ಕನ್ನಡ) ಪ್ರಶಸ್ತಿಯನ್ನು ಸುಧಾಕರ್ ರಾಜ್ ಅವರು ಪಡೆದುಕೊಂಡಿದ್ದಾರೆ. ನಿನ್ನ ಸನಿಹಕೆ ಸಿನಿಮಾದ 'ನೀ ಪರಿಚಯ' ಹಾಡಿಗೆ ವಾಸುಕಿ ವೈಭವ್ 'ಅತ್ಯುತ್ತಮ ಗೀತ ರಚನಕಾರ' (ಕನ್ನಡ) ಪ್ರಶಸ್ತಿ ಬಾಚಿಕೊಂಡಿದ್ದಾರೆ.
-
The wait is over! @vasukivaibhav has been bestowed with the coveted Best Lyric Writer (Kannada) Award for the song Nee Parichaya in the movie Ninna Sanihake. pic.twitter.com/oj7VKutVKa
— SIIMA (@siima) September 10, 2022 " class="align-text-top noRightClick twitterSection" data="
">The wait is over! @vasukivaibhav has been bestowed with the coveted Best Lyric Writer (Kannada) Award for the song Nee Parichaya in the movie Ninna Sanihake. pic.twitter.com/oj7VKutVKa
— SIIMA (@siima) September 10, 2022The wait is over! @vasukivaibhav has been bestowed with the coveted Best Lyric Writer (Kannada) Award for the song Nee Parichaya in the movie Ninna Sanihake. pic.twitter.com/oj7VKutVKa
— SIIMA (@siima) September 10, 2022
ಸೈಮಾ ಪ್ರಶಸ್ತಿಗಳ ಪಟ್ಟಿ:
- ಅತ್ಯುತ್ತಮ ನಟ: ಪುನೀತ್ ರಾಜ್ಕುಮಾರ್ (ಯುವರತ್ನ)
- ಅತ್ಯುತ್ತಮ ನಟಿ: ಆಶಿಕಾ ರಂಗನಾಥ್ (ಮದಗಜ)
- ಅತ್ಯುತ್ತಮ ನಟಿ (ಕ್ರಿಟಿಕ್ಸ್): ಅಮೃತಾ ಅಯ್ಯಂಗಾರ್ (ಬಡವ ರಾಸ್ಕಲ್)
- ಅತ್ಯುತ್ತಮ ಹಾಸ್ಯ ನಟ: ಚಿಕ್ಕಣ್ಣ (ಪೊಗರು)
- ಅತ್ಯುತ್ತಮ ನಿರ್ದೇಶನ: ತರುಣ್ ಸುಧೀರ್ (ರಾಬರ್ಟ್)
- ಅತ್ಯುತ್ತಮ ಪೋಷಕ ನಟಿ: ಆರೋಹಿ ನಾರಾಯಣ್ (ದೃಶ್ಯ 2)
- ಅತ್ಯುತ್ತಮ ಪೋಷಕ ನಟ: ಪ್ರಮೋದ್ (ರತ್ನನ್ ಪ್ರಪಂಚ)
- ಅತ್ಯುತ್ತಮ ಹಿನ್ನೆಲೆ ಗಾಯಕಿ: ಚೈತ್ರಾ ಆಚಾರ್ (‘ಗರುಡ ಗಮನ ವೃಷಭ ವಾಹನ’ ಚಿತ್ರದ ‘ಸೋಜುಗಾದ ಸೂಜುಮಲ್ಲಿಗೆ ಹಾಡು’)
- ಅತ್ಯುತ್ತಮ ಸಂಗೀತ ನಿರ್ದೇಶಕ: ಅರ್ಜುನ್ ಜನ್ಯ- (ರಾಬರ್ಟ್)
ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳ ಚಿತ್ರಗಳಲ್ಲಿಯೂ ಪ್ರತ್ಯೇಕ 19 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ. ತೆಲುಗು ಚಿತ್ರರಂಗ ಬಾಚಿಕೊಂಡ ಪ್ರಶಸ್ತಿಗಳು ಈ ಕೆಳಗಿನಂತಿವೆ.
- ಅತ್ಯುತ್ತಮ ಚಿತ್ರ: ಪುಷ್ಪ ದಿ ರೈಸ್
- ಅತ್ಯುತ್ತಮ ನಟ: ಅಲ್ಲು ಅರ್ಜುನ್ (ಪುಷ್ಪ)
- ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ: ನವೀನ್ ಪೋಲಿ ಶೆಟ್ಟಿ (ಜಾತಿ ರತ್ನಾಲು)
- ದಕ್ಷಿಣ ಭಾರತದಲ್ಲಿ ಅತ್ಯುತ್ತಮ ಹಿಂದಿ ನಟ: ರಣವೀರ್ ಸಿಂಗ್
- ಅತ್ಯುತ್ತಮ ನಟಿ: ಪೂಜಾ ಹೆಗಡೆ
- ಅತ್ಯುತ್ತಮ ನಿರ್ದೇಶಕ: ಆರ್ಯ ಸುಕ್ಕು (ಪುಷ್ಪ)
- ಅತ್ಯುತ್ತಮ ಹಾಸ್ಯ ನಟ: ಸುದರ್ಶನ್
- ಅತ್ಯುತ್ತಮ ನಿರ್ಮಾಪಕ: ಸತೀಶ್ ವಿಗ್ನೇಷನ್ (ನಾಂದಿ)
- ಅತ್ಯುತ್ತಮ ಪೋಷಕ ನಟ: ಜಗದೀಶ್ (ಪುಷ್ಪ)
- ಅತ್ಯುತ್ತಮ ಪೋಷಕ ನಟಿ: ವರಲಕ್ಷ್ಮಿ ಶರತ್ ಕುಮಾರ್ (ಕ್ರ್ಯಾಕ್)
- ಅತ್ಯುತ್ತಮ ಸಂಗೀತ ನಿರ್ದೇಶಕ: ದೇವಿ ಶ್ರೀ ಪ್ರಸಾದ್ (ಪುಷ್ಪ)
- ಅತ್ಯುತ್ತಮ ನಟಿ (ಪ್ರಥಮ ಚಿತ್ರ): ಕೃತಿ ಶೆಟ್ಟಿ (ಉಪ್ಪೇನ)
- ಅತ್ಯುತ್ತಮ ಯುವ ಐಕಾನ್ ನಟಿ: ಪೂಜಾ ಹೆಗ್ಡೆ
- ಅತ್ಯುತ್ತಮ ನಿರ್ದೇಶನ: ಬುಚ್ಚಿ ಬಾಬು ಸನ (ಉಪ್ಪಿನ)
- ಯೂತ್ ಐಕಾನ್ ಪ್ರಶಸ್ತಿ (ಪುರುಷರ ವಿಭಾಗದಲ್ಲಿ): ವಿಜಯ್ ದೇವರಕೊಂಡ
- ಪ್ರೊಡಕ್ಷನ್ ಡಿಸೈನ್ ವಿಭಾಗದಲ್ಲಿ ಜೂರಿ ಪ್ರಶಸ್ತಿ: ರಾಮಕೃಷ್ಣ ಹಾಗೂ ಮೌನಿಕ
- ಅತ್ಯುತ್ತಮ ಹಿನ್ನೆಲೆ ಗಾಯಕಿ: ಗೀತಾ ಮಾಧುರಿ, (ಅಖಂಡ ಚಿತ್ರದ ಜೈ ಬಾಲಯ್ಯ ಹಾಡು)
- ಅತ್ಯುತ್ತಮ ಹಿನ್ನೆಲೆ ಗಾಯಕ: ರಾಮ ಮಿರಿಯಾಲ (ಜಾತಿ ರತ್ನಾಲು)
ಇದನ್ನೂ ಓದಿ: ಟಾಲಿವುಡ್ ರೆಬಲ್ ಸ್ಟಾರ್, ನಟ ಪ್ರಭಾಸ್ ಚಿಕ್ಕಪ್ಪ ಕೃಷ್ಣಂರಾಜು ನಿಧನ
ಮೊದಲ ದಿನದ ಕಾರ್ಯಕ್ರಮದಲ್ಲಿ ಹಲವು ಸ್ಟಾರ್ಗಳ ಸಮಾಗಮ ಆಗಿತ್ತು. ಯಶ್, ಅಲ್ಲು ಅರ್ಜುನ್ , ತೆಲುಗು ನಟ ಆಲಿ ಕುಟುಂಬ, ಶುಭ್ರಾ ಅಯ್ಯಪ್ಪ, ಸೋನು ಗೌಡ , ಲಾಸ್ಯ ನಾಗರಾಜ್ , ಕಾವ್ಯ ಶಾ, ಆಕುಲ್ ಬಾಲಾಜಿ, ನಿಧಿ ಸುಬ್ಬಯ್ಯ ಅರ್ಜುನ್ ಜನ್ಯ ಪೂರ್ಣಿಮ ರಾಮ್ ಕುಮಾರ್, ಐಂದ್ರಿತಾ ರೇ, ದಿಗಂತ್, ಕಮಲ್ ಹಾಸನ್ ಸೇರಿದಂತೆ ಹಲವು ನಟನಟಿಯರು ಆಗಮಿಸಿದ್ದರು.