ETV Bharat / entertainment

ಧಾರ್ಮಿಕ ಸಂಘರ್ಷ:  ಕಮೆಂಟ್​ ಮಾಡಿ ಟ್ರೋಲ್​ ಸುಳಿಗೆ ಸಿಲುಕಿದ ನಟಿ ಸಾಯಿಪಲ್ಲವಿ - ಕಾಶ್ಮೀರಿ ಪೈಲ್ಸ್​ ಸಿನಿಮಾದ ಬಗ್ಗೆ ಸಾಯಿ ಪಲ್ಲವಿ ಕಮೆಂಟ್​

ಪ್ರತಿಯೊಬ್ಬರ ದೃಷ್ಟಿಕೋನವು ಅವರವರ ಪರಿಸರದ ಆಧಾರದ ಮೇಲೆ ವಿಭಿನ್ನವಾಗಿರುತ್ತದೆ. ಹಿಂಸೆಯ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ, ಯಾವುದು ಸರಿ ಯಾವುದು ತಪ್ಪು ಎಂದು ಹೇಳುವುದೂ ಕೂಡ ತುಂಬಾ ಕಷ್ಟ ಎಂದ ನಟಿ ಸಾಯಿ ಪಲ್ಲವಿ.

Actress Sai Pallavi
ನಟಿ ಸಾಯಿ ಪಲ್ಲವಿ
author img

By

Published : Jun 16, 2022, 1:07 PM IST

ಹೈದರಾಬಾದ್ (ತೆಲಂಗಾಣ): ನಟಿ ಸಾಯಿಪಲ್ಲವಿ ತಮ್ಮ ಮುಂಬರುವ ಚಿತ್ರ ವಿರಾಟ ಪರ್ವಂ ಸಿನಿಮಾದ ಪ್ರಚಾರಕ್ಕಾಗಿ ನಡೆದ ಸಂದರ್ಶನವೊಂದರಲ್ಲಿ ಧಾರ್ಮಿಕ ಸಂಘರ್ಷ ಮತ್ತು ಹಿಂಸಾಚಾರದ ಕುರಿತು ಮಾಡಿರುವ ಕಮೆಂಟ್ ಸಾಮಾಜಿಕ ಮಾಧ್ಯಮಗಳಲ್ಲಿ ಕೋಲಾಹಲವನ್ನು ಸೃಷ್ಟಿಸುತ್ತಿದೆ.

ವಿರಾಟ ಪರ್ವಂ ಚಿತ್ರದಲ್ಲಿ ನಕ್ಸಲ್ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ ಕಾಶ್ಮೀರ ಫೈಲ್ಸ್​ ಚಿತ್ರದ ಬಗ್ಗೆ ಮಾತನಾಡಿದ್ದು, ಕಾಶ್ಮೀರ್​ ಫೈಲ್ಸ್​ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎಂದು ತೋರಿಸಲಾಗಿದೆ. ಆದರೆ, ಇತ್ತೀಚೆಗೆ ಕೋವಿಡ್​ ಸಮಯದಲ್ಲಿ ಕೆಲವು ಮುಸ್ಲಿಂ ವ್ಯಕ್ತಿಗಳು ವಾಹನದಲ್ಲಿ ದನವನ್ನು ಕೊಂಡೊಯ್ಯುತ್ತಿದ್ದಾಗ ಅವರನ್ನು ತಡೆದು ಬಲವಂತವಾಗಿ ಜೈ ಶ್ರೀರಾಮ್​ ಎಂದು ಹೇಳುವಂತೆ ಒತ್ತಾಯಿಸಿ ಹೊಡೆಯಲಾಯಿತು. ನೀವು ಧಾರ್ಮಿಕ ಸಂಘರ್ಷದ ಕುರಿತು ಮಾತನಾಡುವುದಾದರೆ, ಈ ಎರಡರ ಮಧ್ಯೆ ವ್ಯತ್ಯಾಸ ಏನಿದೆ? ಅದು ಆವತ್ತು ನಡೆದಿದೆ. ಇದು ಇವತ್ತು ನಡೆದಿದೆ, ಅಷ್ಟೇ ಮತ್ತೇನು ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ.

ಪ್ರತಿಯೊಬ್ಬರ ದೃಷ್ಟಿಕೋನವು ಅವರವರ ಪರಿಸರದ ಆಧಾರದ ಮೇಲೆ ವಿಭಿನ್ನವಾಗಿರುತ್ತದೆ. ಹಿಂಸೆಯ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ, ಯಾವುದು ಸರಿ ಯಾವುದು ತಪ್ಪು ಎಂದು ಹೇಳುವುದೂ ಕೂಡ ತುಂಬಾ ಕಷ್ಟ. ಆ ಸಮಯದಲ್ಲಿ ನಕ್ಸಲರು ಹಿಂಸೆಯಿಂದ ಮಾತ್ರ ನ್ಯಾಯ ಪಡೆಯಬಹುದು ಎಂದು ಭಾವಿಸಿದ್ದರು. ಇದು ಬಹಳ ಹಿಂದೆಯೇ ಸಂಭವಿಸಿದೆ. ನಮ್ಮ ದೃಷ್ಟಿಕೋನಗಳು ವಿಭಿನ್ನವಾಗಿರಬಹುದು.

ಪಾಕಿಸ್ತಾನಿ ಜನರು ಭಾರತೀಯ ಭದ್ರತಾ ಪಡೆಗಳನ್ನು ಭಯೋತ್ಪಾದಕರು ಎಂದು ಭಾವಿಸುತ್ತಾರೆ. ಅದೇ ರೀತಿ ನಾವು ನಾವು ಅವರ ಪಡೆಗಳನ್ನು ಭಯೋತ್ಪಾದಕರು ಎಂದು ಭಾವಿಸುತ್ತೇವೆ. ನಕ್ಸಲ್ ಚಳವಳಿ ಸರಿಯೋ ತಪ್ಪೋ ಎಂದು ಹೇಳುವುದು ತುಂಬಾ ಕಷ್ಟ. ಅವರು ತಮ್ಮ ಪರಿಸ್ಥಿತಿಗೆ ತಕ್ಕಂತೆ ಹಿಂಸಾಚಾರವೊಂದೇ ದಾರಿ ಎಂದು ಭಾವಿಸಿದ್ದರು. ಅದು ಆ ಕಾಲದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ವಿವರಿಸಿದ್ದರು.

ಎಡಪಂಥೀಯ ಮತ್ತು ಬಲಪಂಥೀಯರನ್ನು ಲೆಕ್ಕಿಸದೇ ತುಳಿತಕ್ಕೊಳಗಾದವರನ್ನು ರಕ್ಷಿಸುವ ಕಲ್ಪನೆಯನ್ನು ನಾನು ನಂಬುತ್ತೇನೆ. ನಾನು ತಟಸ್ಥ ವಾತಾವರಣದಲ್ಲಿ ಬೆಳೆದವಳು. ಈ ಎಡಪಂಥೀಯ ಮತ್ತು ಬಲಪಂಥೀಯರ ಬಗ್ಗೆ ಕೇಳಿದ್ದೇನೆ, ಆದರೆ ಯಾರು ಸರಿ, ಯಾರು ತಪ್ಪು ಎಂದು ನಾವು ಹೇಳಲು ಸಾಧ್ಯವಿಲ್ಲ. ನಾವು ಒಳ್ಳೆಯ ಮನುಷ್ಯರಲ್ಲದಿದ್ದರೆ, ನಾವು ನ್ಯಾಯಯುತವಾಗಿರುವುದಿಲ್ಲ, ನೀವು ನ್ಯಾಯಯುತವಾಗಿ ಮತ್ತು ನ್ಯಾಯದೊಂದಿಗೆ ನಿಂತರೆ, ನಿಮ್ಮ ಸುತ್ತಲೂ ಎಲ್ಲರೂ ತಟಸ್ಥರಾಗಿರುತ್ತಾರೆ.

ಸಾಯಿ ಪಲ್ಲವಿ ಅವರ ಈ ಕಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಹರಿದಾಡುತ್ತಿದ್ದು, ಒಂದು ಗುಂಪು ಕಾಶ್ಮೀರಿ ಪಂಡಿತರ ದುರವಸ್ಥೆಯ ಬಗ್ಗೆ ಸಾಯಿ ಪಲ್ಲವಿಯವರಿಗಿರುವ ಅಸಮರ್ಪಕ ಜ್ಞಾನವನ್ನು ನಿರ್ದಯವಾಗಿ ಟ್ರೋಲ್​ ಮಾಡುತ್ತಿದೆ. ಇನ್ನೊಂದು ಗುಂಪು ಸಾಯಿ ಪಲ್ಲವಿ ಅವರ ಮೊದಲು ಒಳ್ಳೆಯ ಮನುಷ್ಯರಾಗಿರಬೇಕು ಎಂಬ ಅಭಿಪ್ರಾಯಗಳಿಗೆ ಬೆಂಬಲವನ್ನು ಸೂಚಿಸುತ್ತಿದೆ.

ವಿರಾಟ ಪರ್ವಂನಲ್ಲಿ ನಟಿ ವೆನ್ನೆಲಾ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದರಲ್ಲಿ ರಾಣಾ ದಗ್ಗುಬಾಟಿ ಪ್ರಮುಖ ಪಾತ್ರದಲ್ಲಿದ್ದು, ವೇಣು ಉಡುಗುಲ ನಿರ್ದೇಶನದ ಈ ಚಿತ್ರ ಜೂನ್ 17 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ : 'ಸೂರರೈ ಪೊಟ್ರು' ಹಿಂದಿ ರಿಮೇಕ್: ಅಕ್ಷಯ್ ಕುಮಾರ್​ ಜೊತೆ ನಟಿಸಿರುವ ಸೂರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.