ಲಾಸ್ ಏಂಜಲೀಸ್ (ಕ್ಯಾಲಿಪೋರ್ನಿಯಾ): 29ನೇ ವರ್ಷದ 'ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ 2023' ಸಮಾರಂಭವು ಭಾನುವಾರ ರಾತ್ರಿ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನ ಫೇರ್ಮಾಂಟ್ ಸೆಂಚುರಿ ಪ್ಲಾಜಾದಲ್ಲಿ ಅದ್ಧೂರಿಯಾಗಿ ಜರುಗಿತು. 'ಎವ್ರಿಥಿಂಗ್ ಎವ್ರಿವೇರ್ ಆಲ್ ಅಟ್ ಒನ್ಸ್' ಚಲನಚಿತ್ರವು ಒಂದೇ ವೇದಿಕೆಯಲ್ಲಿ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿತು. ಇಲ್ಲಿಯವರೆಗಿನ ಎಲ್ಲಾ ಸಿನಿಮಾಗಳ ದಾಖಲೆಯನ್ನು ಮುರಿದು ಹೊಸ ಇತಿಹಾಸವನ್ನು ಬರೆಯಿತು.
ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ..
1. ಚಲನಚಿತ್ರ ಮತ್ತು ಲಿಮಿಟೆಡ್ ಸೀರಿಸ್ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ - ಸ್ಯಾಮ್ ಎಲಿಯಟ್ (1883)
2. ಚಲನಚಿತ್ರ ಮತ್ತು ಲಿಮಿಟೆಡ್ ಸೀರಿಸ್ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ - ಜೆಸ್ಸಿಕಾ ಚಸ್ಟೈನ್ (ಜಾರ್ಜ್ ಅಂಡ್ ಟಮ್ಮಿ)
3. ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ - ಜೆರೆಮಿ ಅಲೆನ್ ವೈಟ್ (ದಿ ಬೇರ್)
4. ಅತ್ಯುತ್ತಮ ಹಾಸ್ಯ ನಟಿ ಪ್ರಶಸ್ತಿ - ಜೀನ್ ಸ್ಮಾರ್ಟ್ (ಹ್ಯಾಕ್ಸ್)
5. ಅತ್ಯುತ್ತಮ ಹಾಸ್ಯ ಸಿನಿಮಾ ಪ್ರಶಸ್ತಿ - ಅಬಾಟ್ ಎಲಿಮೆಂಟರಿ
6. ಡ್ರಾಮಾ ಸೀರೀಸ್ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ - ಜೇಸನ್ ಬೇಟ್ಮನ್ (ಓಜಾರ್ಕ್)
7. ಡ್ರಾಮಾ ಸೀರೀಸ್ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ - ಜೆನ್ನಿಫರ್ ಕೂಲಿಡ್ಜ್ (ದಿ ವೈಟ್ ಲೋಟಸ್)
8. ಅತ್ಯುತ್ತಮ ಡ್ರಾಮಾ ಸೀರೀಸ್ ಪ್ರಶಸ್ತಿ - ದಿ ವೈಟ್ ಲೋಟಸ್
9. ಫೋಷಕ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ನಟಿ) - ಜೇಮೀ ಲೀ ಕರ್ಟಿಸ್ (ಎವ್ರಿಥಿಂಗ್ ಎವ್ರಿವೇರ್ ಆಲ್ ಅಟ್ ಒನ್ಸ್)
10. ಪೋಷಕ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ನಟ) - ಕೆ ಹುಯ್ ಕ್ವಾನ್ (ಎವ್ರಿಥಿಂಗ್ ಎವ್ರಿವೇರ್ ಆಲ್ ಅಟ್ ಒನ್ಸ್)
11. ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ನಟಿ) - ಮಿಚೆಲ್ ಯೋಹ್ (ಎವ್ರಿಥಿಂಗ್ ಎವ್ರಿವೇರ್ ಆಲ್ ಅಟ್ ಒನ್ಸ್)
12. ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ನಟ) - ಬ್ರೆಂಡನ್ ಫ್ರೇಸರ್ (ದಿ ವೇಲ್)
13. ಅತ್ಯುತ್ತಮ ಮೋಷನ್ ಪಿಕ್ಚರ್ - (ಎವ್ರಿಥಿಂಗ್ ಎವ್ರಿವೇರ್ ಆಲ್ ಅಟ್ ಒನ್ಸ್)
14. ಮೋಷನ್ ಪಿಕ್ಚರ್ನಲ್ಲಿ ಅತ್ಯುತ್ತಮ ಸಾಹಸ ಪ್ರದರ್ಶನ - ಟಾಪ್ ಗನ್: ಮೇವರಿಕ್
15. ಟೆಲಿವಿಷನ್ ಸೀರೀಸ್ನಲ್ಲಿ ಅತ್ಯುತ್ತಮ ಸಾಹಸ ಪ್ರದರ್ಶನ - ಸ್ಟ್ರೇಂಜರ್ ಥಿಂಗ್ಸ್
1995 ರಲ್ಲಿ 'ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ'ಯನ್ನು ನೀಡಲು ಪ್ರಾರಂಭಿಸಲಾಯಿತು. ಈವರೆಗೆ ಕೇವಲ ನಾಲ್ಕು ಚಿತ್ರಗಳು ಮಾತ್ರ ಒಂದೇ ಬಾರಿಗೆ ಮೂರು ಪ್ರಶಸ್ತಿಗಳನ್ನು ಗೆದ್ದಿವೆ. ಆದರೆ ಈ ಬಾರಿ 'ಎವ್ರಿಥಿಂಗ್ ಎವ್ರಿವೇರ್ ಆಲ್ ಅಟ್ ಒನ್ಸ್' ಚಲನಚಿತ್ರವು ಒಮ್ಮೆಲೇ 4 ಪ್ರಶಸ್ತಿಯನ್ನು ಗೆದ್ದುಕೊಂಡು ಹೊಸ ದಾಖಲೆಯನ್ನು ಬರೆದಿದೆ. ಅತ್ಯುತ್ತಮ ಮೋಷನ್ ಪಿಕ್ಚರ್, ಪೋಷಕ ಪಾತ್ರದಲ್ಲಿ 2 ಪ್ರಶಸ್ತಿಗಳು ಮತ್ತು ಪ್ರಮುಖ ಪಾತ್ರದಲ್ಲಿ ಮಹಿಳಾ ನಟಿ ಈ ನಾಲ್ಕು ವಿಭಾಗಳಲ್ಲಿ ಅವಾರ್ಡ್ನ್ನು ಸಿನಿಮಾ ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ: ಬ್ರಿಟಿಷ್ ಅಕಾಡೆಮಿ ಚಲನಚಿತ್ರ ಪ್ರಶಸ್ತಿ: ಇಂಗ್ಲಿಷ್ ಅಲ್ಲದ ಭಾಷೆಯ 'ಆಲ್ ಕ್ವೈಟ್' ಚಿತ್ರಕ್ಕೆ ಏಳು ಪ್ರಶಸ್ತಿ