‘ಆರ್‌ಆರ್‌ಆರ್’ ಸಿನಿಮಾ ಬಿಡುಗಡೆಯಾಗಿ ಬಹಳ ದಿನಗಳೇ ಕಳೆದಿವೆ. ಆದರೂ ಇದರ ಹವಾ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಬಿಡುಗಡೆ ಆಗಿ ಬಾಕ್ಸ್ ಆಫೀಸ್ನಲ್ಲಿ ಸಖತ್ ಕಮಾಲ್ ಮಾಡಿದೆ. ಇದೀಗ ಈ ಸಿನಿಮಾ ಜಪಾನ್‌ನಲ್ಲಿ ಕಮಾಲ್ ಮಾಡಲು ಸಿದ್ಧವಾಗುತ್ತಿದೆ. ಹೌದು, ಇದೇ ವರ್ಷ ಅಕ್ಟೋಬರ್ 21ರಂದು ಜಪಾನ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
ಜಪಾನ್‌ನಲ್ಲಿ ಎನ್ಟಿಆರ್ಗೆ ಒಳ್ಳೆಯ ಕ್ರೇಜ್ ಇದ್ದು, ಪ್ರೇಕ್ಷಕರ ಮುಂದೆ ತರಲು ಸಂತಸವಾಗುತ್ತಿದೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. ಜಪಾನಿನ ಅನೇಕರು ಈಗಾಗಲೇ ತೆಲುಗು ಸಿನಿಮಾಗಳ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಜಪಾನ್‌ನ ಹೀರೋ ಮುನಿರು, ಅಸಾಹಿ ಸನಕಿ ಮತ್ತು ಇತರರು ಎನ್‌ಟಿಆರ್, ರಾಮ್ ಚರಣ್, ಅಲ್ಲು ಅರ್ಜುನ್ ಅವರ ಸೂಪರ್ ಹಿಟ್ ಹಾಡುಗಳಿಗೆ ಕವರ್ ವಿಡಿಯೋಗಳನ್ನು ಮಾಡಿದ್ದಾರೆ. ಬಹುತೇಕರು ಎನ್ ಟಿಆರ್ ಅವರ ಹಾಡುಗಳಿಗೆ ನೃತ್ಯ ಮಾಡಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮರಾಜು ಹಾಗೂ ಕೊಮರಂ ಭೀಮ್ ಕಥೆಯನ್ನು ಹೊಂದಿರುವ 'ಆರ್‌ಆರ್‌ಆರ್' ಚಿತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್, ರಾಮ್ ಚರಣ್ , ಅಜಯ್ ದೇವಗನ್, ಆಲಿಯಾ ಭಟ್, ಸಮುದ್ರಖನಿ, ಶ್ರಿಯಾ ಸರಣ್ ಹಾಗೂ ಇನ್ನಿತರರು ನಟಿಸಿದ್ದಾರೆ. ಈ ಚಿತ್ರ 1200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಝೀ 5 ನಲ್ಲಿ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಲಭ್ಯವಿದೆ. ಹಿಂದಿ ಆವೃತ್ತಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಹಿಂದೆ, 'ಮುತ್ತು', 'ಬಾದ್ ಶಾ', 'ರೋಬೋ', 'ಮಗಧೀರ', 'ಬಾಹುಬಲಿ', 'ಸಾಹೋ', '3 ಈಡಿಯಟ್ಸ್', 'ಇಂಗ್ಲಿಷ್ ವಿಂಗ್ಲಿಷ್' ಚಿತ್ರಗಳು ಜಪಾನಿ ಭಾಷೆಗೆ ಡಬ್ ಆಗಿದ್ದವು.
ಇದನ್ನೂ ಓದಿ: ನಿಮ್ಮಿಬ್ಬರನ್ನು ಒಂದೇ ರೂಂನಲ್ಲಿ ಸೇರಿಸಿದ್ರೆ ಚೂಪಾದ ವಸ್ತುಗಳನ್ನಿಡಬಹುದೇ?: ಸಮಂತಾ ಉತ್ತರ ಹೀಗಿತ್ತು..