'ಆರ್‌ಆರ್‌ಆರ್' ಚಿತ್ರ ನಿರ್ಮಾಪಕರು ಆಸ್ಕರ್ ರೇಸ್‌ನಲ್ಲಿ ಮತ್ತಷ್ಟು ಪ್ರಗತಿ ಸಾಧಿಸುತ್ತಿರುವ ಖುಷಿಯಲ್ಲಿದ್ದಾರೆ. 2023ರ ಆಸ್ಕರ್ ಪ್ರಶಸ್ತಿಗಳಿಗೆ 'ಅತ್ಯುತ್ತಮ ಮೂಲ ಗೀತೆ' ವಿಭಾಗದಲ್ಲಿ ಬ್ಲಾಕ್‌ಬಸ್ಟರ್ ತೆಲುಗು ಚಲನಚಿತ್ರದ 'ನಾಟು ನಾಟು' ಹಾಡನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಚಿತ್ರ ವಿಮರ್ಶಕ ತರಣ್ ಆದರ್ಶ್ ಅವರು ಟ್ವಿಟರ್‌ನಲ್ಲಿ ಈ ಕುರಿತು ಖಚಿತ ಪಡಿಸಿದ್ದಾರೆ.
-
What a way to start the day… #NaatuNaatu [from #RRR] - the most celebrated dance number of 2022 - shortlisted for #Oscars2023 in ‘Original Song’ category.#RRRMovie pic.twitter.com/hrHzmhpzWJ
— taran adarsh (@taran_adarsh) December 22, 2022 " class="align-text-top noRightClick twitterSection" data="
">What a way to start the day… #NaatuNaatu [from #RRR] - the most celebrated dance number of 2022 - shortlisted for #Oscars2023 in ‘Original Song’ category.#RRRMovie pic.twitter.com/hrHzmhpzWJ
— taran adarsh (@taran_adarsh) December 22, 2022What a way to start the day… #NaatuNaatu [from #RRR] - the most celebrated dance number of 2022 - shortlisted for #Oscars2023 in ‘Original Song’ category.#RRRMovie pic.twitter.com/hrHzmhpzWJ
— taran adarsh (@taran_adarsh) December 22, 2022
"ದಿನವನ್ನು ಪ್ರಾರಂಭಿಸಲು ಅದ್ಭುತ ಮಾರ್ಗ.. ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು, 2022ರ ಅತ್ಯಂತ ಪ್ರಸಿದ್ಧ ನೃತ್ಯ, - ಆಸ್ಕರ್ 2023ರ 'ಮೂಲ ಹಾಡು' ವಿಭಾಗದಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ಚೆಲ್ಲೋ ಶೋ: ಇನ್ನೂ ಗುಜರಾತಿ ಚಿತ್ರ 'ಚೆಲ್ಲೋ ಶೋ' ಅನ್ನು 'ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ' ವಿಭಾಗದಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ಸಹ ಆದರ್ಶ್ ಘೋಷಿಸಿದರು. "ಒಂದು ಸ್ಮರಣೀಯ ಕ್ಷಣ, ನಿಜಕ್ಕೂ 'ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್' ವಿಭಾಗದಲ್ಲಿ ಚೆಲ್ಲೋ ಶೋ ಅನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಅಧಿಕೃತ ಪೋಸ್ಟರ್" ಎಂದು ಅವರು ಬರೆದಿದ್ದಾರೆ.
-
A memorable moment, indeed… #LastFilmShow [#ChhelloShow] shortlisted in ‘International Feature Film’ category at #Oscars2023… OFFICIAL POSTER… pic.twitter.com/1W2dZpJFmz
— taran adarsh (@taran_adarsh) December 22, 2022 " class="align-text-top noRightClick twitterSection" data="
">A memorable moment, indeed… #LastFilmShow [#ChhelloShow] shortlisted in ‘International Feature Film’ category at #Oscars2023… OFFICIAL POSTER… pic.twitter.com/1W2dZpJFmz
— taran adarsh (@taran_adarsh) December 22, 2022A memorable moment, indeed… #LastFilmShow [#ChhelloShow] shortlisted in ‘International Feature Film’ category at #Oscars2023… OFFICIAL POSTER… pic.twitter.com/1W2dZpJFmz
— taran adarsh (@taran_adarsh) December 22, 2022
ಆರ್‌ಆರ್‌ಆರ್: ಆರ್‌ಆರ್‌ಆರ್ ಚಲನಚಿತ್ರ ನಿರ್ಮಾಪಕರು ಚಲನಚಿತ್ರವನ್ನು ಆಸ್ಕರ್‌ಗಾಗಿ ಅಕಾಡೆಮಿಗೆ ಮುಖ್ಯ ವಿಭಾಗಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಅವರು ಅತ್ಯುತ್ತಮ ಚಿತ್ರ (ಡಿವಿವಿ ದಾನಯ್ಯ), ಅತ್ಯುತ್ತಮ ನಿರ್ದೇಶಕ (ಎಸ್‌ಎಸ್ ರಾಜಮೌಳಿ), ಅತ್ಯುತ್ತಮ ನಟ (ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್), ಅತ್ಯುತ್ತಮ ಪೋಷಕ ನಟ (ಅಜಯ್ ದೇವಗನ್), ಅತ್ಯುತ್ತಮ ಪೋಷಕ ನಟಿ (ಆಲಿಯಾ ಭಟ್) ಹೆಸರನ್ನು ಪರಿಗಣನೆಗೆ ಕೇಳಿದ್ದರು.
ಇದನ್ನೂ ಓದಿ: ಸಿನಿ ಪ್ರಿಯರಿಗೆ ಗುಡ್ನ್ಯೂಸ್.. ಆಸ್ಕರ್ ರೇಸ್ಗೆ ಕಾಂತಾರ ಎಂಟ್ರಿ
RRRನ ಅಗಾಧ ಯಶಸ್ಸು ಸಾಧಿಸಿದೆ. ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಮೈಲಿಗಲ್ಲುಗಳನ್ನು ಸೃಷ್ಟಿಸುವ ಮೂಲಕ ಮತ್ತು ಭಾಷಾ ಮತ್ತು ಸಾಂಸ್ಕೃತಿಕ ಅಡೆತಡೆಗಳನ್ನು ಮೀರಿ ಪ್ರಪಂಚದಾದ್ಯಂತದ ಚಲನಚಿತ್ರ ರಸಿಕರನ್ನು ಒಂದುಗೂಡಿಸುವ ಮೂಲಕ ಜಾಗತಿಕ ವೇದಿಕೆಯಲ್ಲಿ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸಿದ್ದಕ್ಕಾಗಿ ನಾವು ಗೌರವಿಸುತ್ತೇವೆ. ನಾವು ಪ್ರತಿಯೊಬ್ಬರಿಗೂ ಕೃತಜ್ಞರಾಗಿರುತ್ತೇವೆ.
ಕಳೆದ ಕೆಲವು ತಿಂಗಳುಗಳಲ್ಲಿ ನಮ್ಮ ಚಲನಚಿತ್ರವನ್ನು ಪ್ರೀತಿಸಿ ಮತ್ತು ನಮ್ಮನ್ನು ಹುರಿದುಂಬಿಸಿದ್ದೀರಿ. ನೀವು (ಅಭಿಮಾನಿಗಳು) ಈ ಪ್ರಯಾಣವನ್ನು ಸಾಧ್ಯಗೊಳಿಸಿದ್ದೀರಿ. ನಾವು ಸಾಮಾನ್ಯ ವರ್ಗದಲ್ಲಿ ಆಸ್ಕರ್‌ಗಾಗಿ ಅಕಾಡೆಮಿಗೆ ಅರ್ಜಿ ಸಲ್ಲಿಸಿದ್ದೇವೆ. ನಮ್ಮ RRR ಕುಟುಂಬಕ್ಕೆ ನಾವು ಶುಭ ಹಾರೈಸುತ್ತೇವೆ ಮತ್ತು ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಅವರಿಗೆ ಮತ್ತು ನಿಮಗೂ ನಮ್ಮ ಧನ್ಯವಾದಗಳು.
ನಿಮ್ಮ ಮನಸ್ಸನ್ನು ಗೆಲ್ಲಲು ಮತ್ತು ವಿಶ್ವಾದ್ಯಂತ ಪ್ರೇಕ್ಷಕರನ್ನು ರಂಜಿಸಲು ನಮಗಿದು ದಾರಿ" ಎಂದು RRRನ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ನಿಮ್ಮ ಪ್ರೀತಿಯ ಅಪ್ಪುಗೆಗೆ ಈ ದಾಸ ಸದಾ ಚಿರಋಣಿ: ನಟ ದರ್ಶನ್
ಕಾಂತಾರ: ಇನ್ನೂ ಮಾಧ್ಯಮ ವರದಿಗಳ ಪ್ರಕಾರ ಸಂದರ್ಶನವೊಂದರಲ್ಲಿ, 'ನಾವು ಕೊನೆಯ ಕ್ಷಣದಲ್ಲಿ ಚಿತ್ರದ ಅರ್ಜಿಯನ್ನು ಆಸ್ಕರ್‌ಗೆ ಕಳುಹಿಸಿದ್ದೇವೆ. ಅಂತಿಮ ಪಟ್ಟಿ ಇನ್ನೂ ಬರಬೇಕಿದೆ. ಇದಕ್ಕಾಗಿ ಕಾಯುತ್ತಿದ್ದೇವೆ. ಕಾಂತಾರ ಕಥೆಗೆ ವಿಶ್ವಾದ್ಯಂತ ಪ್ರೇಕ್ಷಕರನ್ನು ಸೆಳೆಯುವ ಶಕ್ತಿ ಇದೆ' ಎಂದು ಕಾಂತಾರ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರು ತಿಳಿಸಿದ್ದಾರೆ.