ETV Bharat / entertainment

ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿ 'ನಾಟು ನಾಟು..' ಹಾಡು: ಗಣ್ಯರಿಂದ ಪ್ರಶಂಸೆಗಳ ಸುರಿಮಳೆ - 2023ನೇ ಸಾಲಿನ ಆಸ್ಕರ್ ಪ್ರಶಸ್ತಿ

ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿಗೆ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ನಾಮಿನೇಟ್ ಆಗಿದೆ. ಇದು ಭಾರತೀಯ ಚಲನಚಿತ್ರೋದ್ಯಮಕ್ಕೆ ಅತ್ಯಂತ ಸ್ಮರಣೀಯ ಕ್ಷಣ ಎಂದು ಚಿತ್ರರಂಗದ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ಯಾರು, ಏನಂದ್ರು?.

Oscar 2023 nominations
Oscar 2023 nominations
author img

By

Published : Jan 25, 2023, 8:25 AM IST

ಮುಂಬೈ (ಮಹಾರಾಷ್ಟ್ರ): 2023ನೇ ಸಾಲಿನ ಆಸ್ಕರ್ ಪ್ರಶಸ್ತಿಯ ಅಂತಿಮ ನಾಮನಿರ್ದೇಶನ ಪಟ್ಟಿ ಬಹಿರಂಗಗೊಂಡಿದೆ. ಭಾರತದಿಂದ ಎಸ್‌.ಎಸ್.ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ತೆಲುಗು ಚಿತ್ರದ ‘ನಾಟು ನಾಟು’ ಹಾಡಿಗೆ ‘ಒರಿಜಿನಲ್ ಸಾಂಗ್’ (ಮೂಲ ಹಾಡು) ವಿಭಾಗದ ಪ್ರಶಸ್ತಿಗೆ ನಾಮಿನೇಟ್ ಆಗಿದೆ. ವ್ಯಾಪಕ ಜನಮೆಚ್ಚುಗೆ ಗಳಿಸಿದ ಈ ಹಾಡು ಮಂಗಳವಾರ ಅಧಿಕೃತ ಆಸ್ಕರ್ ನಾಮನಿರ್ದೇಶನಕ್ಕೆ ಬರುತ್ತಿದ್ದಂತೆ ಗಾಯಕ ಗುರು ರಾಂಧವಾ ಮತ್ತು ನಟಿ ಸಾಯಿ ಮಂಜ್ರೇಕರ್ ಸೇರಿದಂತೆ ಹಲವು ಗಣ್ಯರು ಚಿತ್ರತಂಡವನ್ನು ಅಭಿನಂದಿಸಿದ್ದಾರೆ.

"ಈ ವಿಷಯ ಎಲ್ಲರೂ ಖುಷಿ ಪಡುವಂಥದ್ದು. ಆಸ್ಕರ್ ಪ್ರಶಸ್ತಿಗೆ ‘ನಾಟು ನಾಟು’ ಹಾಡು ನಾಮಿನೇಟ್ ಆಗುತ್ತಿದ್ದಂತೆ ನಾನು ಟ್ವೀಟ್​ ಮಾಡಿ ಚಿತ್ರತಂಡವನ್ನು ಅಭಿನಂದಿಸಿರುವೆ. ನಾನೊಬ್ಬ ಸಂಗೀತಗಾರ ಮತ್ತು ಕಲಾವಿದನಾಗಿದ್ದು ಇದು ನನಗೆ ಅತ್ಯಂತ ಹೆಮ್ಮೆಯ ವಿಷಯ. ಜಗತ್ತಿನ ಯಾವ ದೇಶಕ್ಕೆ ಕಾಲಿಟ್ಟರೂ ಅಲ್ಲಿ ಈ ಹಾಡು ಕೇಳಿ ಬರುತ್ತಿದೆ. ಇದೊಂದು ಇತಿಹಾಸ. ಚಿತ್ರತಂಡ ಇಂತಹ ಇತಿಹಾಸವನ್ನು ಸೃಷ್ಟಿಸಿದೆ. ಭವಿಷ್ಯದ ಪ್ರಾಜೆಕ್ಟ್‌ಗಳಿಗೆ ಶುಭವಾಗಲಿ" ಎಂದಿದ್ದಾರೆ.

Guru Randhawa, Saiee Manjrekar congratulate team 'RRR' for Oscar 2023 nominations
ಗಾಯಕ ಗುರು ರಾಂಧವಾ ಮತ್ತು ನಟಿ ಸಾಯಿ ಮಂಜ್ರೇಕರ್

"ಭಾರತವನ್ನು ವಿಶ್ವಾದ್ಯಂತ ಪ್ರಶಂಸಿಸಲಾಗುತ್ತಿದೆ. ಇದು ನಿಜವಾಗಿಯೂ ಆಸಕ್ತಿದಾಯಕ ವಿಚಾರ. ಹೇಳಿಕೊಳ್ಳಲಾಗದಷ್ಟು ಖುಷಿ ಆಗುತ್ತಿದೆ. ಮುಂಬರುವ ಚಿತ್ರಗಳಿಗೂ ಹೊಸ ಭರವಸೆ ತುಂಬಿದೆ. ಚಿತ್ರತಂಡಕ್ಕೆ ಶುಭವಾಗಲಿ" ಎಂದು ನಟಿ ಸಾಯಿ ಮಂಜ್ರೇಕರ್ ಖುಷಿ ವ್ಯಕ್ತಪಡಿಸಿದ್ದಾರೆ. ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶನದ ಚಂದ್ರಬೋಸ್ ಸಾಹಿತ್ಯ ಬರೆದಿರುವ ‘ನಾಟು ನಾಟು’ ಹಾಡು ಇದಾಗಿದೆ. ಚಿತ್ರದಲ್ಲಿ ನಟ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ಆಕರ್ಷಕವಾಗಿ ಹೆಜ್ಜೆ ಹಾಕಿದ್ದಾರೆ. ವಿಭಿನ್ನ ಸಂಯೋಜನೆಯ ನೃತ್ಯ ನೋಡುಗರಲ್ಲಿ ರೋಮಾಂಚನ ಉಂಟುಮಾಡಿದೆ. ಹಲವು ನೆಟಿಜನ್ಸ್​ ಅವರಂತೆಯೇ ನೃತ್ಯ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಈ ಮೂಲಕವೂ ಹಾಡು ಜಗತ್ತಿನಾದ್ಯಂತ ಹೆಚ್ಚು ಜನಪ್ರಿಯತೆ ಗಳಿಸಿತು.

ಈ ಸಾಧನೆಯ ಮುಖೇನ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಸಿನಿಮಾ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ‘ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ‘ನಾಟು ನಾಟು’ ನಾಮಿನೇಟ್ ಆಗಿರುವುದಕ್ಕೆ ಇಡೀ ‘ಆರ್‌ಆರ್‌ಆರ್‌’ ತಂಡ ಪುಳಕಗೊಂಡಿದೆ. "ನಾವು ಇತಿಹಾಸ ಸೃಷ್ಟಿಸಿದ್ದೇವೆ. ನಾಟು ನಾಟು ಹಾಡು 95ನೇ ಅಕಾಡೆಮಿ ಅವಾರ್ಡ್ಸ್​ನಲ್ಲಿ ಅತ್ಯುತ್ತಮ ಮೂಲ ಹಾಡುಗಳ ವಿಭಾಗಕ್ಕೆ ನಾಮನಿರ್ದೇಶನಗೊಂಡಿದೆ" ಎಂದು ಸಿನಿಮಾದ ಅಧಿಕೃತ ಟ್ವೀಟ್ ಪೇಜ್ ಚಿತ್ರ ತಂಡ ಟ್ವೀಟ್ ಮಾಡಿದೆ.

ಆರ್‌ಆರ್‌ಆರ್‌ಗೆ ಗೋಲ್ಡನ್‌ ಗ್ಲೋಬ್‌: ಇದಕ್ಕೂ ಮುನ್ನ, ಗೋಲ್ಡನ್ ಗ್ಲೋಬ್ಸ್ 2023 ಅವಾರ್ಡ್ಸ್‌ನ ಎರಡು ವಿಭಾಗಗಳಲ್ಲಿ ‘ಆರ್‌ಆರ್‌ಆರ್‌’ ಸಿನಿಮಾ ನಾಮಿನೇಟ್ ಆಗಿತ್ತು. ಗೋಲ್ಡನ್ ಗ್ಲೋಬ್ ಮತ್ತು ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ನಲ್ಲಿ ಉತ್ತಮ ಸ್ಪಂದನೆ ಜೊತೆಗೆ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತ್ತು. 'ಬೆಸ್ಟ್ ಒರಿಜಿನಲ್ ಸಾಂಗ್' ಮತ್ತು 'ಬೆಸ್ಟ್ ನಾನ್ ಇಂಗ್ಲಿಷ್ ಭಾಷೆಯ ಚಿತ್ರ' ಎಂಬ ವಿಭಾಗಗಳಲ್ಲಿ ಪ್ರಶಸ್ತಿಯ ರೇಸ್‌ನಲ್ಲಿಯೂ ಇತ್ತು. ಅಂತಿಮವಾಗಿ ಇದೀಗ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿಗೂ ‘ನಾಟು ನಾಟು’ ಹಾಡು ನಾಮಿನೇಟ್ ಆಗಿದೆ. ಇದು ಭಾರತೀಯ ಚಲನಚಿತ್ರೋದ್ಯಮಕ್ಕೆ ಅತ್ಯಂತ ಸ್ಮರಣೀಯ, ಗಮನಾರ್ಹ, ಸುವರ್ಣ ಕ್ಷಣವಾಗಿದೆ ಚಿತ್ರರಂಗದ ಗಣ್ಯರು ಟ್ವೀಟಿಸಿ ಖುಷಿ ಹಂಚಿಕೊಳ್ಳುತ್ತಿದ್ದಾರೆ.

ಭಾರತದ ಆಸ್ಕರ್ ಇತಿಹಾಸ: 1982ರಲ್ಲಿ ತೆರೆಕಂಡ ಐತಿಹಾಸಿಕ 'ಗಾಂಧಿ' ಚಲನಚಿತ್ರದ ವಸ್ತ್ರ ವಿನ್ಯಾಸಕ್ಕಾಗಿ ಭಾನು ಅಥೈಯಾ ಅವರು 1983ರಲ್ಲಿ ಆಸ್ಕರ್ ಪ್ರಶಸ್ತಿ ಪಡೆದಿದ್ದರು. ಭಾನು ಅಥೈಯಾ ಮೊಟ್ಟ ಮೊದಲ ಆಸ್ಕರ್ ಪ್ರಶಸ್ತಿ ವಿಜೇತೆಯಾಗಿ ಇತಿಹಾಸ ಬರೆದವರು. 2009ರಲ್ಲಿ ಭಾರತದಲ್ಲಿ ಸೆಟ್ಟೇರಿದ್ದ ಬ್ರಿಟಿಷ್ ಚಿತ್ರ 'ಸ್ಲಮ್‌ಡಾಗ್ ಮಿಲಿಯನೇರ್' 4 ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿತು.

RRR ಕಥೆ ಏನು?: ಇದೀಗ ಆರ್​ಆರ್​ಆರ್​ ಕೂಡ ಅದೇ ಮಾರ್ಗದಲ್ಲಿದೆ. 'RRR' ತೆಲುಗು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಜೀವನಾಧರಿಸಿದ ಕಾಲ್ಪನಿಕ ಕಥೆಯಾಗಿದ್ದು, ರಾಮ್ ಚರಣ್ ಮತ್ತು ಜೂನಿಯರ್ ಎಎನ್​​ಟಿಆರ್​ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಶ್ವಾದ್ಯಂತ ತೆರೆಕಂಡ ಈ ಚಿತ್ರ 1,200 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಆಲಿಯಾ ಭಟ್, ಅಜಯ್ ದೇವಗನ್ ಮತ್ತು ಶ್ರಿಯಾ ಸರನ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಕಂಠ ನೀಡಿದ್ದಾರೆ. ಪ್ರೇಮ್ ರಕ್ಷಿತ್ ಅವರ ಅನನ್ಯ ನೃತ್ಯ ಸಂಯೋಜನೆ, ಪಾತ್ರಗಳ ಹಂಚಿಕೆಯ ಸಮ್ಮಿಲನದ ಫಲ ನಾಟು ನಾಟು ಹಾಡು.!

ಇದನ್ನೂ ಓದಿ: ದೆಹಲಿಯ ಗಣರಾಜ್ಯೋತ್ಸವ ಪರೇಡ್​: ನಾರಿಶಕ್ತಿ ಟ್ಯಾಬ್ಲೋಗೆ ಸಾಥ್​ ನೀಡಲಿರುವ ಉತ್ತರ ಕನ್ನಡದ ಸುಗ್ಗಿ ತಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.