ETV Bharat / entertainment

Ronny Movie Teaser: ನಟ ಕಿರಣ್​ ರಾಜ್​ ಬರ್ತ್​ಡೇಯಂದೇ 'ರಾನಿ' ಟೀಸರ್​ ರಿಲೀಸ್​ - ರಾನಿ

ಕನ್ನಡತಿ ಧಾರವಾಹಿ ಖ್ಯಾತಿಯ ನಟ ಕಿರಣ್​ ರಾಜ್​ ನಾಯಕನಾಗಿ ನಟಿಸಿರುವ 'ರಾನಿ' ಸಿನಿಮಾದ ಟೀಸರ್​ ಜುಲೈ 5ರಂದು ಬಿಡುಗಡೆಯಾಗಲಿದೆ.

ರಾನಿ
ರಾನಿ
author img

By

Published : Jun 25, 2023, 10:27 AM IST

ರಾನಿ ಟೀಸರ್ ರಿಲೀಸ್​ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿರುವ ನಿರ್ದೇಶಕ ಗುರುತೇಜ್​ ಶೆಟ್ಟಿ​

ಬೆಂಗಳೂರು: ಟೈಟಲ್ ಹಾಗೂ ಪೋಸ್ಟರ್​ನಿಂದ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದ 'ರಾನಿ' ಸಿನಿಮಾದ ಟೀಸರ್ ನಾಯಕ ನಟ ಕಿರಣ್ ರಾಜ್ ಹುಟ್ಟುಹಬ್ಬದ ದಿನವಾದ ಜುಲೈ 5ರಂದು ಬಿಡುಗಡೆಯಾಗುತ್ತಿದೆ. ಕಿರಣ್ ರಾಜ್ ದುಬೈಗೆ ಹೋಗಿ 13 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿ 'ರಾನಿ' ಟೈಟಲ್ ಅನಾವರಣಗೊಳಿಸಿದ್ದರು. ಅವರ ಈ ಸಾಹಸಕ್ಕೆ ಚಿತ್ರರಂಗ ಮೆಚ್ಚುಗೆ ವ್ಯಕ್ತಪಡಿಸಿತ್ತು. ನಂತರ ಬಿಡುಗಡೆಯಾದ ಪೋಸ್ಟರ್ ಚಿತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿತ್ತು.

ನಿರ್ದೇಶಕ ಗುರುತೇಜ್​ ಶೆಟ್ಟಿ ಮಾತನಾಡಿ, ಈ ಬಾರಿ ಗಟ್ಟಿ ಕಥೆಯೊಂದಿಗೆ ಆ್ಯಕ್ಷನ್-ಕಮರ್ಷಿಯಲ್ ಸಿನಿಮಾ ಮಾಡಿದ್ದೇನೆ. ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾ. ಹಾಗಿದ್ದರೂ ಕುಟುಂಬಸಮೇತ ಬಂದು ನೋಡುವಂತಹ ಭಾವನಾತ್ಮಕ ವಿಷಯಗಳಿವೆ. ಸಿನಿಮಾದ ಜರ್ನಿ ಶುರುವಾಗಿ ಸುಮಾರು ಒಂದು ವರ್ಷವಾಯಿತು. ಪ್ರಾಮಾಣಿಕ ತಂಡದೊಂದಿಗೆ ಅದ್ಧೂರಿಯಾಗಿ ಮಾಡಿದ್ದೇವೆ. ಒಂದೊಳ್ಳೆ ಸಿನಿಮಾ ಮಾಡಬೇಕು, ಯಾವುದೇ ಕೊರತೆ ಕಾಣಬಾರದು, ಕ್ವಾಲಿಟಿ ಸಿನಿಮಾವಾಗಿರಬೇಕು ಎಂಬ ಕಂಕಣಕಟ್ಟಿ ಕೆಲಸ ಶುರುಮಾಡಿದ್ದೆವು. ಉತ್ತಮ ಟೆಕ್ನಿಶಿಯನ್ಸ್ ಕೆಲಸ ಮಾಡಿದ್ದಾರೆ. ಟೀಸರ್ ಅ​ನ್ನು ನಿಮ್ಮ ಜೊತೆ ಹಂಚಿಕೊಳ್ಳಲು ನಮಗೂ ಕುತೂಹಲವಿದೆ. ಜುಲೈ 5ರಂದು ಟೀಸರ್​ ರಿಲೀಸ್ ಕಾರ್ಯಕ್ರಮ​ ಮಾಡುತ್ತಿದ್ದೇವೆ. ಅದ್ಭುತ ವಿಚಾರಗಳನ್ನು ಆ ದಿನ ಹಂಚಿಕೊಳ್ಳುತ್ತೇವೆ. ಅಲ್ಲದೇ ಅಂದು ಕಿರಣ್​ ರಾಜ್​ ಅವರ ಹುಟ್ಟುಹಬ್ಬವೂ ಇದೆ ಎಂದು ತಿಳಿಸಿದರು.

ಇದನ್ನೂ ಓದಿ: ಮದುವೆಯಾಗದಿದ್ದರೆ ಹೆಣ್ಣಿಗೆ ಅಸ್ತಿತ್ವ ಇಲ್ವೇ?: ಹೆಣ್ಣುಮಕ್ಕಳ ಮೂಕವೇದನೆಗೆ ದನಿಯಾದ 'ಅಮೃತಧಾರೆ'!

ರವಿಶಂಕರ್ ಮೈಕೋ ನಾಗರಾಜ್ , ಉಗ್ರಂ ರವಿ, ಉಗ್ರಂ ಮಂಜು, ಬಿ. ಸುರೇಶ್, ಮಂಡ್ಯ ರಮೇಶ್, ಸುಜಯ್ ಶಾಸ್ತ್ರಿ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರು, ಗಿರೀಶ್ ಹೆಗ್ಡೆ ಮುಂತಾದವರನ್ನು ಒಳಗೊಂಡ ತಾರಾಗಣ ಚಿತ್ರದಲ್ಲಿದೆ. ಸಮೀಕ್ಷಾ, ಅಪೂರ್ವ, ರಾದ್ಯಾ ಮೂವರು ಚಿತ್ರದ ನಾಯಕಿಯರಾಗಿದ್ದಾರೆ. ಮೂವರೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಚಿತ್ರತಂಡ ಹೇಳಿದೆ.

ರಾಘವೇಂದ್ರ ಬಿ. ಕೋಲಾರ್ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ​ವಿರುವ ಚಿತ್ರಕ್ಕೆ ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತವಿದೆ. ಸ್ಟಾರ್ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗ್ಡೆ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರವಿದು. ಡಿಸೆಂಬರ್​ನಲ್ಲಿ ಚಿತ್ರ ಬಿಡುಗಡೆ ಮಾಡುವ​ ಯೋಜನೆಯಲ್ಲಿದ್ದಾರೆ ನಿರ್ಮಾಪಕರು.

ಇದನ್ನೂ ಓದಿ: ''ಸ್ವಾತಂತ್ರ್ಯ ಅಂದ್ರೆ ಕೊಡೋದಲ್ಲ, ಕಿತ್ತುಕೊಳ್ಳೋದು": ಕುತೂಹಲ ಮೂಡಿಸಿದ ಸ್ಪೈ ಟ್ರೇಲರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.