ETV Bharat / entertainment

ಹಾಲಿವುಡ್​ ಡೈರೆಕ್ಟರ್​ ಜೊತೆ ರಾಕಿಂಗ್​ ಸ್ಟಾರ್ ಯಶ್​​; ಡಿಸೆಂಬರ್​​ನಲ್ಲಿ ಶೂಟಿಂಗ್​ ಶುರು: ಸಿನಿಮಾ ವಿಶ್ಲೇಷಕರು ಹೇಳಿದ್ದಿಷ್ಟು - Hollywood director JJ Perry

Yash with Hollywood director JJ Perry: ಹಾಲಿವುಡ್ ನಿರ್ದೇಶಕ ಜೆಜೆ ಪೆರಿ ಜೊತೆಗಿರುವ ನಟ ಯಶ್​ ಅವರ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Rocking star Yash
ರಾಕಿಂಗ್​ ಸ್ಟಾರ್ ಯಶ್
author img

By ETV Bharat Karnataka Team

Published : Sep 27, 2023, 5:39 PM IST

ಸರಿಸುಮಾರು ಕಳೆದೊಂದು ವರ್ಷದಿಂದ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​​ನಲ್ಲಿಯೋ ಏಕೈಕ ವಿಷಯ 'YASH19'. ಅಭಿಮಾನಿಗಳು ಅದೆಷ್ಟೇ ಬೇಡಿಕೆ ಇಟ್ಟರೂ ಇನ್ನೂ ರಾಕಿಂಗ್​ ಸ್ಟಾರ್ ಯಶ್​ ಮುಖ್ಯಭೂಮಿಕೆಯ ಮುಂದಿನ ಸಿನಿಮಾ ಘೋಷಣೆ ಆಗಿಲ್ಲ. ಹಲವು ಅಂತೆಕಂತೆಗಳು ಉರುಳಿ ಹೋಗಿವೆ ಹೊರತು, ನಟ ಯಶ್​ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದ್ರಿಂದು ಸೌತ್​ ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​ ಓರ್ವರ ಸೋಷಿಯಲ್​ ಮೀಡಿಯಾ ಪೋಸ್ಟ್ ಸಖತ್​ ಸದ್ದು ಮಾಡುತ್ತಿದೆ.

ಮನೋಬಾಲಾ ವಿಜಯಬಾಲನ್​ ಟ್ವೀಟ್: ದಕ್ಷಿಣ ಚಿತ್ರರಂಗದ ವಿಶ್ಲೇಷಕ ಮನೋಬಾಲಾ ವಿಜಯಬಾಲನ್​ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ X (ಹಿಂದಿನ ಟ್ವಿಟರ್) ನಲ್ಲಿ ಹಾಲಿವುಡ್​ ಡೈರೆಕ್ಟರ್​ ಜೊತೆ ರಾಕಿಂಗ್​ ಸ್ಟಾರ್ ಯಶ್ ಫೋಟೋವನ್ನು ಶೇರ್ ಮಾಡಿದ್ದಾರೆ. ಇಬ್ಬರು ಜೊತೆಗಿರುವ ಫೋಟೋ ಶೇರ್ ಮಾಡಿದ ಮನೋಬಾಲಾ ವಿಜಯಬಾಲನ್, ''ಲಂಡನ್‌ನಲ್ಲಿ ಹಾಲಿವುಡ್ ನಿರ್ದೇಶಕ ಜೆಜೆ ಪೆರಿ (Hollywood director JJPerry) ಅವರೊಂದಿಗೆ ಯಶ್ ಅವರ ಲೇಟೆಸ್ಟ್ ಫೋಟೋ. ಯಶ್​ 19ಗಾಗಿ ನಟ ಯಶ್​​ ಲುಕ್ ಟೆಸ್ಟ್‌ಗೆ ಒಳಗಾಗಿದ್ದಾರೆ. ಕೆಜಿಎಫ್​​ ಚಾಪ್ಟರ್ 2ರ ಯಶಸ್ಸಿನಲ್ಲಿರುವ ನಟ ಅಕ್ಟೋಬರ್ ತಿಂಗಳಲ್ಲಿ ಯಶ್ 19 ಅನ್ನು ಘೋಷಿಸಲಿದ್ದಾರೆ. ಈ ಚಿತ್ರವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುವ ಸಾಧ್ಯತೆ ಇದೆ ಮತ್ತು ಇದೇ ಸಾಲಿನ ಡಿಸೆಂಬರ್‌ ತಿಂಗಳಲ್ಲಿ ಶೂಟಿಂಗ್​​ ಪ್ರಾರಂಭವಾಗುವ ನಿರೀಕ್ಷೆ ಇದೆ'' ಎಂದು ಬರೆದುಕೊಂಡಿದ್ದಾರೆ.

  • Latest pic of Yash with Hollywood director JJPerry at London. #Yash is currently undergoing look tests for #Yash19.

    The #KGF star is fresh from the success of monstrous #KGFChapter2 and will be announcing his upcoming biggie Yash 19 in the October month.

    The film is likely to… pic.twitter.com/25jCRlgnG7

    — Manobala Vijayabalan (@ManobalaV) September 26, 2023 " class="align-text-top noRightClick twitterSection" data=" ">

ಅಧಿಕೃತ ಘೋಷಣೆಗೆ ಕಾತರ: ನಟ ಯಶ್​ ಅಥವಾ ಚಿತ್ರತಂಡದಿಂದ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಸದ್ಯ ಸಿನಿಮಾ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಮಾಡಿರುವ ಪೋಸ್ಟ್​ ಸಖತ್​ ಸದ್ದು ಮಾಡುತ್ತಿದೆ.

ಸಿನಿಮಾ ವ್ಯವಹಾರ ವಿಶ್ಲೇಷಕರ ಮಾಹಿತಿ ಹೊರಬಿದ್ದರೂ, ಅಪಾರ ಸಂಖ್ಯೆಯ ಅಭಿಮಾನಿಗಳು ಯಶ್​ ಅವರಿಂದಲೇ ಅಧಿಕೃತ ಘೋಷಣೆಗೆ ಬೇಡಿಕೆ ಇಟ್ಟಿದ್ದಾರೆ. ಕಳೆದ ಏಪ್ರಿಲ್​ನಲ್ಲಿ ಕೆಜಿಎಫ್​ 2 ಸಿನಿಮಾ ತೆರೆಕಂಡು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತ್ತು. ಈ ಹಿನ್ನೆಲೆ ಸಹಜವಾಗಿ ನಟನ ಮುಂದಿನ ಸಿನಿಮಾ ಮೇಲೆ ಕುತೂಹಲ ಹೆಚ್ಚಾಗಿದೆ. ಒಂದೂವರೆ ವರ್ಷ ಕಳೆದರೂ ನಟ ತಮ್ಮ ಮುಂದಿನ ಸಿನಿಮಾ ಘೋಷಿಸಿಲ್ಲ. ಕೆಜಿಎಫ್​ 2 ಗೆ ಸಿಕ್ಕ ಮನ್ನಣೆ ಗಮನಿಸಿದ್ರೆ ಮುಂದಿನ ಸಿನಿಮಾ ಕೂಡ ಅತ್ಯದ್ಭುತವಾಗಿ ಮೂಡಿ ಬರಬೇಕು. ಈ ಹಿನ್ನೆಲೆ ನಟ ಯಶ್​​ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ಚಿತ್ರ, ಕಥೆ, ನಿರ್ದೇಶಕರು ಸೇರಿದಂತೆ ಸಂಪೂರ್ಣ ತಂಡ ಗಣ್ಯರಿಂದಲೇ ಕೂಡಿರುತ್ತದೆ ಅನ್ನೋದು ಅಭಿಮಾನಿಗಳು ಸೇರಿದಂತೆ ಸಿನಿಮಾ ವಿಶ್ಲೇಷಕರ ಅಭಿಪ್ರಾಯ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್​ ದಾಸ್​ ನಿರ್ದೇಶನದಲ್ಲಿ ಯಶ್​ ಸಿನಿಮಾ ಮಾಡಲಿದ್ದಾರೆ ಅನ್ನೋ ವಿಷಯ ಹಲವು ದಿನಗಳಿಂದ ಕೇಳಿಬರುತ್ತಿದೆಯಾದರೂ, ಎಲ್ಲವೂ ಅಂತೆಕಂತೆಗಳೇ. ಹಾಗಾಗಿ ಸ್ವತಃ ನಟ ಯಶ್​ ಅವರೇ ಮುಂದಿನ ಸಿನಿಮಾ ಘೋಷಿಸಲಿ ಅನ್ನೋದು ಅವೆ ಕಟ್ಟಾ ಅಭಿಮಾನಿಗಳ ಆಶೆ.

ಇದನ್ನೂ ಓದಿ: 'ಲೋಕಾನೆ ಗರಡಿ..ಬಾಳೇ ಅಖಾಡ': 'ಗರಡಿ' ಟೈಟಲ್ ಸಾಂಗ್ ಬಿಡುಗಡೆ

ಇನ್ನು, ಸೋಷಿಯಲ್​ ಮೀಡಿಯಾಲ್ಲಿ ಯಶ್​ 19 ಕುರಿತು ಚರ್ಚೆಗಳು ನಡೆಯುತ್ತಲೇ ಇವೆ. ಗೋವಾ ಮಾಫಿಯಾ ಸುತ್ತ ಕಥೆ ಹೆಣೆಯುತ್ತಿರಬಹುದೆಂದೂ ಕೂಡ ಹೇಳಲಾಗಿದೆ. ಕೆಜಿಎಫ್​ ರೀತಿಯ ಕಥೆಯನ್ನೇ ಆಯ್ಕೆ ಮಾಡಿಕೊಂಡಿರಬಹುದೆಂದು ಮೂಲಗಳು ತಿಳಿಸಿವೆಯಾದರೂ, ಎಲ್ಲರ ಗಮನ ಸದ್ಯ ಅಧಿಕೃತ ಘೋಷಣೆ ಮೇಲೆ ಕೇಂದ್ರೀಕೃತವಾಗಿದೆ.

ಇದನ್ನೂ ಓದಿ: ಆಸ್ಕರ್ 2024: ನಾಮನಿರ್ದೇಶನ ಪ್ರಕ್ರಿಯೆಗೆ ಮಲಯಾಳಂನ '2018: ಎವ್ರಿಒನ್​​ ಈಸ್ ಎ ಹೀರೋ' ಎಂಟ್ರಿ

ಯಶ್​ 19 ಕಥೆ ಏನು? ನಿರ್ಮಾಪಕರು ಯಾರು? ಯಾರ ನಿರ್ದೇಶನದಲ್ಲಿ ಸಿನಿಮಾ? ನಾಯಕ ನಟಿ ಯಾರಿರಬಹುದು? ಯಾವ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ ಎಂಬ ಚರ್ಚೆ ನಡೆಯುತ್ತಿದ್ದು, ನಟ ಯಶ್​​ ಅಧಿಕೃತ ಮಾಹಿತಿ ಕೊಡಬೇಕು ಎಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.