ETV Bharat / entertainment

ರಾಕಿಂಗ್​ ಸ್ಟಾರ್ ಯಶ್ ಹೊಸ ಲುಕ್​​ಗೆ ಫ್ಯಾನ್ಸ್​ ಫಿದಾ

author img

By

Published : Sep 15, 2022, 6:41 PM IST

ರಾಕಿಂಗ್​ ಸ್ಟಾರ್ ಯಶ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದು, ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್​ಗೆ ಲೈಕ್​ಗಳ ಸಂಖ್ಯೆ ಹೆಚ್ಚುತ್ತಿದೆ

Rocking star Yash
ರಾಕಿಂಗ್​ ಸ್ಟಾರ್ ಯಶ್

ಕೆಜಿಎಫ್​​ ಸಿನಿಮಾಗಳ ಮೂಲಕ ರಾಕಿಂಗ್​ ಸ್ಟಾರ್ ಯಶ್ ಭಾರತೀಯ ಚಿತ್ರರಂಗ ಮಾತ್ರವಲ್ಲದೇ ಇಡೀ ವಿಶ್ವಾದ್ಯಂತ ಹೆಸರು ಗಳಿಸಿದ್ದಾರೆ. ಕನ್ನಡಿಗರಿಗೆ ಸೀಮಿತವಾಗಿದ್ದಅಭಿಮಾನಿ ಬಳಗವೀಗ ಬಲು ದೊಡ್ಡದಾಗಿದೆ. ಯಶ್ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಸಾಕಷ್ಟು ಕುತೂಹಲ ವ್ಯಕ್ತಪಡಿಸುತ್ತಾರೆ. ಇದೀಗ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದು, ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Rocking star Yash
ಪ್ರತಿಷ್ಠಿತ ಸೈಮಾ ಅವಾರ್ಡ್ಸ್ 2022ರಲ್ಲಿ ಯಶ್-ರಾಧಿಕಾ ದಂಪತಿ

ಈ ಮೊದಲು ಯಶ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿರಲಿಲ್ಲ. ಕೆಜಿಎಫ್ 2 ರಿಲೀಸ್ ಆದ ಬಳಿಕ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟೀವ್ ಆದರು. ಫ್ಯಾನ್ಸ್​​ಗೋಸ್ಕರ ಹೊಸ ಹೊಸ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಮಕ್ಕಳ ಜೊತೆ ಸಮಯ ಕಳೆಯುತ್ತಿರುವ ಫೋಟೋಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Rocking star Yash
ರಾಕಿಂಗ್​ ಸ್ಟಾರ್ ಯಶ್

ಇನ್​ಸ್ಟಾಗ್ರಾಮ್​ನಲ್ಲಿ ಯಶ್ ಅವರನ್ನು 1.12 ಕೋಟಿ ಅಭಿಮಾನಿಗಳು ಹಿಂಬಾಲಿಸುತ್ತಿದ್ದಾರೆ. ಕನ್ನಡದ ಯಾವ ಹೀರೋಗೂ ಇನ್​​ಸ್ಟಾಗ್ರಾಮ್​​ನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹಿಂಬಾಲಕರಿಲ್ಲ. ಈಗ ಯಶ್ ಹೊಸ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಈ ಫೋಟೋ ಪ್ರತಿಷ್ಠಿತ ಸೈಮಾ ಅವಾರ್ಡ್ಸ್ 2022 ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಂದರ್ಭದಲ್ಲಿ ತೆಗೆದಿರುವುದು ಎನ್ನಲಾಗಿದೆ.

ಯಶ್ ಕತ್ತಲಲ್ಲಿ ಕುಳಿತಿದ್ದಾರೆ. ಬಿಳಿ ಬಣ್ಣದ ಬಟ್ಟೆ ಧರಿಸಿದ್ದು ಫೋಟೋ ಬಹಳ ಚೆನ್ನಾಗಿದೆ. ಈ ಫೋಟೋ ಪೋಸ್ಟ್ ಮಾಡಿದ 5 ಗಂಟೆಯಲ್ಲಿ 13 ಲಕ್ಷ ಮಂದಿ ಲೈಕ್ ಬಟನ್ ಒತ್ತಿದ್ದಾರೆ. ಲೈಕ್ಸ್ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಫೋಟೋ ನೋಡಿದ ಫ್ಯಾನ್ಸ್​ ‘ಕೆಜಿಎಫ್’ ಡೈಲಾಗ್​​​ ‘ಸಲಾಂ ರಾಕಿ ಭಾಯ್​’ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸದ್ಯದಲ್ಲೇ ಏನೋ ವಿಶೇಷ ಬರಲಿದೆ: ಬಾಲಿವುಡ್​​​ನ ಬಾರ್ಬಿ ಡಾಲ್​ ಕತ್ರಿನಾ ಕೈಫ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.