ಕಾಂತಾರ ಖ್ಯಾತಿಯ ನಿರ್ದೇಶಕ, ನಟ ರಿಷಬ್ ಶೆಟ್ಟಿ ನಾಡಿನ ಜನತೆಗೆ ಮತದಾನ ಮಾಡುವಂತೆ ಕೇಳಿಕೊಂಡಿದ್ದಾರೆ. ಕರ್ನಾಟಕದ ವನ್ಯ ಸಂಪತ್ತು, ಕಲೆ ಮತ್ತು ಸಂಸ್ಕೃತಿಯನ್ನು ಚಲನಚಿತ್ರದ ಮೂಲಕ ಜಗತ್ತಿಗೆ ಪರಿಚಯಿಸಿದ ರಿಷಬ್ ರಾಜ್ಯದ ಜನತೆಗೆ ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತ ಹಾಕುವಂತೆ ಮನವಿ ಮಾಡಿದ್ದಾರೆ. ನಮ್ಮ ಉತ್ತಮ ಬದುಕಿಗಾಗಿ ಪ್ರತಿಯೊಬ್ಬರೂ ವೋಟ್ ಮಾಡಿ ಎಂಬುದಾಗಿ ಹೇಳಿದ್ದಾರೆ.
"2023ರ ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆ ಮಾಡಿದ್ದಾರೆ. ಮೇ 10 ರಂದು ಎಲೆಕ್ಷನ್ ನಡೆಯಲಿದೆ. ಪ್ರತಿಯೊಬ್ಬರೂ ತಪ್ಪದೇ ವೋಟ್ ಮಾಡಿ. ನಮ್ಮ ನಾಡಿನ ನೆಲ, ಜಲ ಸಂಪನ್ಮೂಲ ಅಭಿವೃದ್ಧಿಗಾಗಿ, ನಮ್ಮ ಉತ್ತಮ ಬದುಕಿಗಾಗಿ ಪ್ರತಿಯೊಬ್ಬರೂ ಮತ ಚಲಾಯಿಸಿ" ಎಂದಿದ್ದಾರೆ.
- " class="align-text-top noRightClick twitterSection" data="
">
ಇತ್ತೀಚೆಗಷ್ಟೇ ರಿಷಬ್ ಅವರು ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ವಿಶ್ವದ ಹಲವು ದೇಶದ ಪ್ರತಿನಿಧಿಗಳ ಮುಂದೆ ಕನ್ನಡದಲ್ಲೇ ಪರಿಸರ ಮತ್ತು ಅರಣ್ಯದಂಚಿನಲ್ಲಿರುವ ಜನರ ಸಮಸ್ಯೆಗಳ ಬಗ್ಗೆ ಮಾತನಾಡುವ ಮೂಲಕ ಭಾಷಾಭಿಮಾನ ಮೆರೆದಿದ್ದರು. "ಪರಿಸರ ಸಂರಕ್ಷಣೆಗಾಗಿ ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ತಳಮಟ್ಟದಿಂದ ಕಾರ್ಯನಿರ್ವಹಿಸುತ್ತಿರುವ ಭಾರತದ ಏಕೋಪಾಸ್ ಪ್ರತಿನಿಧಿಯಾಗಿ ನಾನು ವಿಶ್ವಸಂಸ್ಥೆಗೆ ಬಂದಿದ್ದೇನೆ. ಪರಿಸರ ಸುಸ್ಥಿರತೆ ಕಾಪಾಡುವುದು ಸದ್ಯದ ಅಗತ್ಯ. ಒಬ್ಬ ನಟ ನಿರ್ದೇಶಕನಾಗಿ ತಳಮಟ್ಟದಲ್ಲಿ ಪರಿಣಾಮ ಬೀರಬೇಕು ಎಂಬುದು ನನ್ನ ಉದ್ದೇಶ" ಎಂದು ಅಭಿಪ್ರಾಯ ಹಂಚಿಕೊಂಡಿದ್ದರು.
ಇದನ್ನೂ ಓದಿ: ಸಿಹಿ ಸುದ್ದಿ ನೀಡಿದ ರಿಷಬ್ ಶೆಟ್ಟಿ: 'ಕಾಂತಾರ 2' ಸಿನಿಮಾದ ಬರವಣಿಗೆ ಪ್ರಾರಂಭ
ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದ ರಿಷಬ್: ಇದಕ್ಕೂ ಮೊದಲು ನಟ ರಿಷಬ್ ಕಾಡಂಚಿನ ಜನರ ಸಮಸ್ಯೆಗಳ ಕುರಿತ ವರದಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಮುಂದಿಟ್ಟಿದ್ದರು. ಇವರ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುವಂತೆ ಕೇಳಿಕೊಂಡಿದ್ದರು. ಸಿಎಂ ಪರಿಹರಿಸುವುದಾಗಿ ತಿಳಿಸಿದ್ದರು. ಈ ಎಲ್ಲಾ ಮಾಹಿತಿಯನ್ನು ವಿಡಿಯೋ ಮೂಲಕ ನಾಡಿನ ಜನತೆಗೆ ರಿಷಬ್ ತಿಳಿಸಿದ್ದರು.
ಇದನ್ನೂ ಓದಿ: 'ಕಾಂತಾರ'ಗೆ ಮತ್ತೆರಡು ಗರಿ: 'ಗೇಮ್ ಚೇಂಜರ್' ರಿಷಬ್, 'ರೈಸಿಂಗ್ ಸ್ಟಾರ್' ಸಪ್ತಮಿ
ಇನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಕಾಂತಾರ, ಮನುಷ್ಯ ಪ್ರಕೃತಿ ಸಂಘರ್ಷಗಳನ್ನು ಒಳಗೊಂಡಿದೆ ಮತ್ತು ಜಾನಪದ ಮೂಲ ಕಥೆಯಾಗಿದೆ. ಚಿತ್ರದಲ್ಲಿ ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಕೂಡ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿತ್ತು.
ಇದನ್ನೂ ಓದಿ: ಬಾಲಿವುಡ್ ಲೈಫ್ ಅವಾರ್ಡ್ಸ್: 'ಕಾಂತಾರ' ಅತ್ಯುತ್ತಮ ಚಿತ್ರ, ರಿಷಬ್ ಶೆಟ್ಟಿ ಅತ್ಯುತ್ತಮ ನಟ