ETV Bharat / entertainment

ನಾಟು ನಾಟು ಸಾಧನೆಗೆ ಅಮೆರಿಕನ್ ಗಾಯಕ ಪ್ರಶಂಸೆ: ಭಾವುಕರಾದ ಕೀರವಾಣಿ, RRR ತಂಡ - ಆರ್​ಆರ್​ಆರ್​ ಆಸ್ಕರ್

ನಾಟು ನಾಟು ಆಸ್ಕರ್​ ಸಾಧನೆಗೆ ಅಮೆರಿಕನ್ ಗಾಯಕ ರಿಚರ್ಡ್ ಕಾರ್ಪೆಂಟರ್ ವಿಶೇಷ ವಿಡಿಯೋ ಮೂಲಕ ಪ್ರಶಂಸಿಸಿದ್ದಾರೆ.

Richard Carpenter tribute to RRR team
ನಾಟು ನಾಟು ಸಾಧನೆಗೆ ಅಮೆರಿಕನ್ ಗಾಯಕ ಪ್ರಶಂಸೆ
author img

By

Published : Mar 16, 2023, 3:32 PM IST

ವಿಶ್ವ ಪ್ರತಿಷ್ಟಿತ ಪ್ರಶಸ್ತಿ ಪುರಸ್ಕಾರ - ಆಸ್ಕರ್​​ 2023ರಲ್ಲಿ ನಮ್ಮ ಭಾರತದ ಮನೋರಂಜನಾ ಕ್ಷೇತ್ರ ಅಭೂತಪೂರ್ವ ಯಶಸ್ಸು ಕಂಡಿದ್ದು, ಎಲ್ಲೆಡೆ ಸಂತಸದ ವಾತಾವರಣವಿದೆ. ಭಾರತದ ಖ್ಯಾತ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಸಾರಥ್ಯದಲ್ಲಿ ಮೂಡಿಬಂದ ಆರ್​ಆರ್​ಆರ್​ ಸಿನಿಮಾದ ಸೂಪರ್​ ಹಿಟ್​ ನಾಟು ನಾಟು ಹಾಡು ಅಕಾಡೆಮಿಯ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಹಾಗೆಯೇ, ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ, ಗುನೀತ್​ ಮೊಂಗಾ ನಿರ್ಮಾಣದ "ದ ಎಲಿಫೆಂಟ್ ವಿಸ್ಪರರ್ಸ್" ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಪ್ರಶಸ್ತಿ ಪಡೆದುಕೊಂಡು ಭಾರತದ ಖ್ಯಾತಿ ಹೆಚ್ಚಿಸಿದೆ. ಈ ಹಿನ್ನೆಲೆ ಅಭಿಮಾನಿಗಳು ಸೇರಿದಂತೆ ಅನೇಕ ಗಣ್ಯರು ವಿಜೇತರನ್ನು ಕೊಂಡಾಡಿದ್ದಾರೆ.

ಆಸ್ಕರ್ ಪ್ರಶಸ್ತಿ ವಿಜೇತ ನಾಟು ನಾಟು ಹಾಡಿನ ಸಂಯೋಜಕ ಎಂಎಂ ಕೀರವಾಣಿ ಮತ್ತು ಗೀತೆ ರಚನೆಕಾರ ಚಂದ್ರಬೋಸ್ ಪರವಾಗಿ ತಾರೆಯರು ವಿಶೇಷ ಒಲವು ತೋರುತ್ತಿದ್ದಾರೆ. ಅತ್ಯುತ್ತಮ ಮೂಲ ಗೀತೆಗಾಗಿ ನಾಟು ನಾಟು ಆಸ್ಕರ್ ಪ್ರಶಸ್ತಿ ಗೆದ್ದ ನಂತರ, ಅಮೆರಿಕನ್ ಖ್ಯಾತ ಗಾಯಕ, ಗೀತೆ ರಚನೆಕಾರ, ಪಿಯಾನೋ ವಾದಕ ರಿಚರ್ಡ್ ಕಾರ್ಪೆಂಟರ್ (Richard Carpenter) ಅವರು ನಾಟು ನಾಟು ಸಂಗೀತ ಸಂಯೋಜಕ ಎಂಎಂ ಕೀರವಾಣಿ ಮತ್ತು ಗೀತೆ ರಚನೆಕಾರ ಚಂದ್ರಬೋಸ್ ಅವರ ಆಸ್ಕರ್ ಗೆಲುವನ್ನು ಕೊಂಡಾಡಿ, ಅವರಿಗೆ ವಿಶೇಷ ಸಂಗೀತ ಅರ್ಪಿಸಿದರು. ಆಸ್ಕರ್​ ವೇದಿಕೆಯಲ್ಲಿ ಪ್ರಶಸ್ತಿ ವಿಜೇತರು ರಿಚರ್ಡ್ ಕಾರ್ಪೆಂಟರ್ ಅವರ ಹೆಸರನ್ನು ಉಲ್ಲೇಖಿಸಿದ್ದರು.

ರಿಚರ್ಡ್ ಕಾರ್ಪೆಂಟರ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದಾರೆ. ವಿಡಿಯೋದಲ್ಲಿ ರಿಚರ್ಡ್ ಕಾರ್ಪೆಂಟರ್ ಪಿಯಾನೋ ನುಡಿಸಿದ್ದರೆ, ಅವರ ಮಕ್ಕಳಾದ Mindy (ಮೈಂಡಿ) ಮತ್ತು ಟ್ರೇಸಿ (Tracy) ಟಾಪ್​ ಆಫ್​ ದಿ ವರ್ಲ್ಡ್​ ಹಾಡನ್ನು ಹಾಡಿದ್ದಾರೆ. ಟಾಪ್​ ಆಫ್​ ದಿ ವರ್ಲ್ಡ್​ ರಿಚರ್ಡ್ ಕಾರ್ಪೆಂಟರ್ ಅವರ ಹಾಡು. ನಿಮ್ಮ ಗೆಲುವಿನಿಂದ ನಾವೆಷ್ಟು ಹೆಮ್ಮೆ ಪಡುತ್ತಿದ್ದೇವೆ ಎಂಬುದನ್ನು ನೀವು ಅರಿತುಕೊಳ್ಳುತ್ತೀರಿ ಎಂದು ನಾವು ಭಾವಿಸುತ್ತೇವೆ ಎಂದು ಅಮೆರಿಕನ್ ಗಾಯಕ ತಮ್ಮ ಪೋಸ್ಟ್​​ನಲ್ಲಿ ಬರೆದಿದ್ದಾರೆ. ಜೊತೆಗೆ, ನೀವು ಎಷ್ಟು ಶ್ರೇಷ್ಠರು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಇನ್​ಸ್ಟಾ ಪೋಸ್ಟ್ ನಿಮಗೆ ಸಹಾಯ ಮಾಡಿದೆ ಎಂದು ನಾವು ಭಾವಿಸುತ್ತೇವೆ ಎಂದು ಕೂಡಾ ತಿಳಿಸಿದ್ದಾರೆ.

  • https://t.co/va5tOLD1DH
    This is something I didn’t expect at all ..tears rolling out of joy ❤️❤️❤️ Most wonderful gift from the Universe 🙏

    — mmkeeravaani (@mmkeeravaani) March 15, 2023 " class="align-text-top noRightClick twitterSection" data=" ">

ರಿಚರ್ಡ್ ಕಾರ್ಪೆಂಟರ್ ಅವರು ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿ ಗೆದ್ದ ಎಂಎಂ ಕೀರವಾಣಿ ಮತ್ತು ಚಂದ್ರಬೋಸ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲು ಈ ವಿಶೇಷ ವಿಡಿಯೋವನ್ನು ಶೇರ್ ಮಾಡಿದ್ದಾರೆ. ನಾನು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನಮ್ಮ ಕುಟುಂಬದಿಂದ ಈ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದೇವೆ ಕಳುಹಿಸುತ್ತಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ನಾಟು ನಾಟು ಆಸ್ಕರ್​ಗೆ ಅರ್ಹವೇ? ಎಂದು ಪ್ರಶ್ನಿಸಿದ ನಟಿ ಹಿಗ್ಗಾಮುಗ್ಗಾ ಟ್ರೋಲ್​!

ಆರ್‌ಆರ್‌ಆರ್ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು ಈ ಸುಂದರ ವಿಡಿಯೋಗೆ ಪ್ರತಿಕ್ರಿಯಿಸಿ, ''ಸರ್, ನನ್ನ ಸಹೋದರ (ಎಂಎಂ ಕೀರವಾಣಿ) ಸಂಪೂರ್ಣ ಆಸ್ಕರ್ ಸಮಾಂಭದಲ್ಲಿ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಂಡಿದ್ದರು. ಗೆಲ್ಲುವ ಮೊದಲು, ನಂತರ ತಮ್ಮ ಭಾವನೆಗಳನ್ನು ಹತ್ತಿಕ್ಕಿದ್ದರು. ಆದರೆ, ಈ ವಿಡಿಯೋ ನೋಡಿದ ನಂತರ ಕೆನ್ನೆ ಮೇಲೆ ಹರಿಯುತ್ತಿದ್ದ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇದು ನಮ್ಮ ಕುಟುಂಬಕ್ಕೆ ಅತ್ಯಂತ ಸ್ಮರಣೀಯ ಕ್ಷಣ, ನಿಮಗೆ ನಮ್ಮಿಂದ ಧನ್ಯವಾದಗಳು. ಇದು ನಿಜಕ್ಕೂ ಸಂತಸ ತಂದಿದೆ'' ಎಂದು ತಿಳಿಸಿದ್ದಾರೆ. ಆರ್​ಆರ್​ಆರ್ ನಟ ರಾಮ್ ಚರಣ್ ಪತ್ನಿ ಉಪಾಸನಾ ಅವರು ಈ ವಿಡಿಯೋ ನಿಜವಾಗಿಯೂ ತುಂಬಾ ಚೆನ್ನಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: 37 ವರ್ಷಗಳ ಬಳಿಕ B.Tech​ ಪದವಿ ಪ್ರಮಾಣ ಪತ್ರ ಪಡೆದ ರಾಮ್‌ಗೋಪಾಲ್ ವರ್ಮಾ

ಮತ್ತೊಂದೆಡೆ, ಸ್ಟಾರ್ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಸಹ ವಿಡಿಯೋಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ಖಂಡಿತವಾಗಿಯೂ ಇದನ್ನು ನಿರೀಕ್ಷಿಸಿರಲಿಲ್ಲ. ಸಂತೋಷದ ಕಣ್ಣೀರು ಹರಿಯುತ್ತದೆ. ವಿಶ್ವದ ಅತ್ಯಂತ ಅದ್ಭುತ ಕೊಡುಗೆ ಇದು ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.