ETV Bharat / entertainment

ರಿಚಾ ಚಡ್ಡಾ ವಿವಾದಿತ ಟ್ವೀಟ್​.. ಕ್ಷಮೆ ಕೋರಿದ ಬಾಲಿವುಡ್​ ನಟಿ - ಕ್ಷಮೆ ಕೇಳಿದ ನಟಿ ರಿಚಾ ಚಡ್ಡಾ

ಬಾಲಿವುಡ್​ ನಟಿ ರಿಚಾ ಚಡ್ಡಾ ವಿವಾದಾತ್ಮಕ ಟ್ವೀಟ್​ ಮಾಡಿ ಟೀಕೆಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾದ ಬಳಿಕ ನಟಿ ಕ್ಷಮೆ ಕೋರಿ ಸ್ಪಷ್ಟನೆ ನೀಡಿದ್ದಾರೆ.

richa-chadha-trolled
ಸೇನೆ ಅವಮಾನಿಸಿ ರಿಚಾ ಚಡ್ಡಾ ಟ್ವೀಟ್​.
author img

By

Published : Nov 24, 2022, 4:14 PM IST

Updated : Nov 24, 2022, 4:25 PM IST

ನವದೆಹಲಿ: ಬಾಲಿವುಡ್​ ನಟಿ ರಿಚಾ ಚಡ್ಡಾ ಮಾಡಿದ್ದ ವಿವಾದಾತ್ಮಕ ಟ್ವೀಟ್​ ಮಾಡಿದ್ದಕ್ಕೆ ಭಾರಿ ಟ್ರೋಲ್​ಗೆ ಒಳಗಾಗಿದ್ದಾರೆ. ನಟಿಯ ವಿರುದ್ಧ ಕೇಸ್​ ದಾಖಲಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ತನ್ನ ತಪ್ಪಿನ ಅರಿವಾದ ಬಳಿಕ ರಿಚಾ ಚಡ್ಡಾ ಕ್ಷಮೆಯಾಚಿಸಿದ್ದಾರೆ.

ನಟಿಯ ಟ್ವೀಟ್​ ವಿವಾದ: ಭಾರತ ಮತ್ತು ಚೀನಾ ನಡುವೆ 2020 ರಲ್ಲಿ ಗಾಲ್ವಾನ್ ಘರ್ಷಣೆಯಲ್ಲಿ ಹಲವಾರು ಭಾರತೀಯ ಯೋಧರು ವೀರ ಮರಣವನ್ನಪ್ಪಿದ್ದರು. ಇತ್ತೀಚೆಗೆ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಹೇಳಿಕೆ ನೀಡಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಿಂಪಡೆಯಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದಿದ್ದರು. ಅದರ ಸ್ಕ್ರೀನ್​ಶಾಟ್​ ಅನ್ನು ಬಳಸಿದ ರಿಚಾ "ಗಾಲ್ವಾನ್​ ಸೇಯ್ಸ್​ ಹಾಯ್​' ಎಂದು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದರು.

ನಟಿಯ ಈ ಪೋಸ್ಟ್​ ಗಾಲ್ವಾನ್​ಗೆ ಹೋಗಿ ಯುದ್ಧ ಮಾಡಿ, ಗಾಲ್ವಾನ್​ ನಿಮ್ಮನ್ನು ಕರೆಯುತ್ತಿದೆ ಎಂಬ ರೀತಿಯ ಅರ್ಥ ಬರುವಂತಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಯಿತು.ಈ ವಿವಾದಾತ್ಮಕ ಟೀಕೆ ಹಿನ್ನೆಲೆಯಲ್ಲಿ ನಟಿ ಬಂಧಿಸಿ, ಕೇಸ್​ ದಾಖಲಿಸಬೇಕು ಎಂದು ಒತ್ತಾಯ ಕೇಳಿ ಬಂದಿತು.

ಕ್ಷಮೆ ಕೇಳಿದ ನಟಿ ರಿಚಾ ಚಡ್ಡಾ: ತಮ್ಮ ವಿವಾದಿತ ಟ್ವೀಟ್​ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ನಟಿ ರಿಚಾ ಚಡ್ಡಾ ಕ್ಷಮೆಯಾಚಿಸಿ ಸ್ಪಷ್ಟನೆ ನೀಡಿದ್ದಾರೆ.

ಓದಿ: ರಿಯಲ್ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ಏರುಪೇರು.. ಅಭಿಮಾನಿಗಳಿಗೆ ಉಪ್ಪಿ ಹೇಳಿದ್ದೇನು?

Last Updated : Nov 24, 2022, 4:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.