ETV Bharat / entertainment

ದಿ. ನಟ ಸುಶಾಂತ್​ ಸಿಂಗ್ ರಜ್​ಪೂತ್​ ಜನ್ಮದಿನಕ್ಕೆ ಶುಭ ಕೋರಿದ ರಿಯಾ ಚಕ್ರವರ್ತಿ - ಸುಶಾಂತ್ ಹುಟ್ಟುಹಬ್ಬಕ್ಕೆ ರಿಯಾ ವಿಶ್

ಸುಶಾಂತ್​ ಸಿಂಗ್​ ರಜ್​ಪೂತ್​ ಜನ್ಮದಿನ - ಅಗಲಿದ ನಟನಿಗೆ ರಿಯಾ ಚಕ್ರವರ್ತಿ ಶುಭಾಶಯ ಕೋರಿದ್ದಾರೆ.

Rhea Chakraborty wishes for Sushant
ಸುಶಾಂತ್​ ಸಿಂಗ್​ ಜನ್ಮದಿನಕ್ಕೆ ಶುಭ ಕೋರಿದ ರಿಯಾ ಚಕ್ರವರ್ತಿ
author img

By

Published : Jan 21, 2023, 4:04 PM IST

ದಿವಂಗತ ಸುಶಾಂತ್​ ಸಿಂಗ್ ರಜ್​ಪೂತ್ ಬಾಲಿವುಡ್​ ಚಿತ್ರರಂಗ ಕಂಡ ಅದ್ಭುತ ನಟ. ಆದ್ರೆ ಅವರಿಂದು ನಮ್ಮೊಂದಿಗಿಲ್ಲ ಎನ್ನುವುದು ಮಾತ್ರ ಕಹಿ ಸತ್ಯ. ಇಂದು ಸುಶಾಂತ್​ ಸಿಂಗ್​ ರಜಪೂತ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಆಚರಿಸುತ್ತಿದ್ದಾರೆ. 37ನೇ​ ಹುಟ್ಟುಹಬ್ಬದ ಈ ದಿನದಂದು ನಮ್ಮನ್ನಗಲಿರುವ ಮೆಚ್ಚಿನ ನಟನಿಗೆ ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಗೆಳತಿಯಾಗಿ ಗುತಿಸಿಕೊಂಡಿದ್ದ ರಿಯಾ ಚಕ್ರವರ್ತಿ ಕೂಡ ಸುಶಾಂತ್​ ಸಿಂಗ್ ಅವರಿಗೆ ವಿಶೇಷವಾಗಿ ಶುಭ ಕೋರಿದ್ದಾರೆ.

ಸುಶಾಂತ್​ ಜೊತೆ ರಿಯಾ ಚಕ್ರವರ್ತಿ ಫೋಟೋ : ಬಾಲಿವುಡ್​ ನಟಿ ರಿಯಾ ಚಕ್ರವರ್ತಿ ಅವರು ದಿವಂಗತ ನಟ, ಗೆಳೆಯ ಸುಶಾಂತ್​ ಸಿಂಗ್​ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷವಾಗಿ ಶುಭ ಕೋರಿದ್ದಾರೆ. ಸುಶಾಂತ್ ಸಿಂಗ್​ ಜೊತೆಗಿರುವ ಎರಡು ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ರಿಯಾ ಚಕ್ರವರ್ತಿ ಪೋಸ್ಟ್ : ಸುಶಾಂತ್​ ಸಿಂಗ್ ರಜ್​ಪೂತ್ ಜನ್ಮ ದಿನೋತ್ಸವದಂದು ಅವರೊಂದಿಗಿನ ಫೋಟೋ ಶೇರ್​ ಮಾಡಿದ್ದಾರೆ ನಟಿ ರಿಯಾ ಚಕ್ರವರ್ತಿ. ಈವರೆಗೆ ನೀವು ನೋಡಿರದ ಫೋಟೋ ಹಂಚಿಕೊಂಡಿರುವ ಅವರು, "♾️ +1 ♥️" ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ. ಈ ಪೋಸ್ಟ್ ಹೊರ ಬೀಳುತ್ತಿದ್ದಂತೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಕಾಮೆಂಟ್​​ ವಿಭಾಗದಲ್ಲಿ ಸಂದೇಶಗಳನ್ನು ಕಳುಹಿಸಲು ಆರಂಭಿಸಿದ್ದಾರೆ.

ಅಭಿಮಾನಿಗಳು ಭಾವುಕ : ನಟಿ ರಿಯಾ ಚಕ್ರವರ್ತಿ ಸ್ನೇಹಿತರ ಗುಂಪಿನಲ್ಲಿರುವ ಶಿಬಾನಿ ದಾಂಡೇಕರ್​ ಈ ಪೋಸ್ಟ್​ಗೆ ರೆಡ್​ ಹಾರ್ಟ್ ಇಮೋಜಿ ಹಾಕಿ ತಮ್ಮ ಪ್ತೀತಿ ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿಗಳಾದ ಕೃಷ್ಣ ಶ್ರಾಫ್​ ಮತ್ತು ಸಿಮೋನ್​ ಖಂಬಟ್ಟಾ ಕೂಡ ರಿಯಾ ಚಕ್ರವರ್ತಿ ಅವರ ಪೋಸ್ಟ್​ಗೆ ಹೃದಯದ ಇಮೋಜಿ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ರಿಯಾ ಚಕ್ರವರ್ತಿ ಅವರ ಪೋಸ್ಟ್ ಅನೇಕ ಸೋಶಿಯಲ್​ ಮೀಡಿಯಾ ಬಳಕೆದಾದರರನ್ನು ಭಾವುಕರನ್ನಾಗಿಸಿದೆ. ರಿಯಾ ಚಕ್ರವರ್ತಿ ಬೆನ್ನೆಲುಬಾಗಿ ಅಭಿಮಾನಿಗಳು ನಿಂತಿದ್ದಾರೆ.

ಸುಶಾಂತ್​ ಸಿಂಗ್ ರಜ್​ಪೂತ್ ನಿಧನ : 2020ರ ಜೂನ್​ 14ರಂದು ನಟ ಸುಶಾಂತ್​ ಸಿಂಗ್ ರಜ್​ಪೂತ್ ಮುಂಬೈನ ತಮ್ಮ ಅಪಾರ್ಟ್​​ಮೆಂಟ್​ನಲ್ಲಿ ಶವವಾಗಿ ಪತ್ತೆಯಾದರು. ನಂತರ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಮನಿ ಲಾಂಡರಿಂಗ್​​ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೇ ನಟನ ಅಕಾಲಿಕ ಮರಣವು ಬಾಲಿವುಡ್​ನಲ್ಲಿ ಡ್ರಗ್ಸ್ ಬಳಕೆ ಆರೋಪ ಸಂಬಂಧ ತನಿಖೆ ನಡೆಲು ಕಾರಣವಾಯ್ತು. ರಿಯಾ ಅವರ ಮೇಲಿನ ಆರೋಪವು ಅವರಿಗೆ ಮತ್ತು ಅವರ ಕುಟುಂಬಕ್ಕೆ ಅಮಾಮಾನ ತರಿಸಿತು. ವೃತ್ತಿಜೀವನಕ್ಕೂ ಅಡೆತಡೆ ಆಯ್ತು. 2020 ರ ಮೊದಲು ಅವರು ಚೆಹ್ರೆ (Chehre) ಅಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಈವರೆಗೆ ಅವರು ಯಾವುದೇ ಹೊಸ ಪ್ರೊಜೆಕ್ಟ್ ಘೋಷಣೆ ಮಾಡಿಲ್ಲ.

ಇದನ್ನೂ ಓದಿ: ಇಂದು ಸುಶಾಂತ್​ ಸಿಂಗ್​ ಜನ್ಮದಿನ.. ಬಾಲಿವುಡ್​ ಧೋನಿ ನೆನಪು ಜೀವಂತ!

ಸುಶಾಂತ್ ಸಿಂಗ್​ ರಜ್​ಪೂತ್​​ ಸಿನಿಜರ್ನಿ : 1986ರ ಜನವರಿ 21ರಂದು ಬಿಹಾರದ ಪಾಟ್ನಾದಲ್ಲಿ ಜನಸಿದ ಸುಶಾಂತ್ ಸಿಂಗ್​ ರಜ್​ಪೂತ್ ತಮ್ಮ ಅತ್ಯುತ್ತಮ ಅಭಿನಯದ ಮೂಲಕ ಬಾಲಿವುಡ್​ನಲ್ಲಿ ಮಿಂಚಿದರು. ದೆಹಲಿಯಲ್ಲಿ ಇಂಜಿನಿಯರಿಂಗ್​ ವಿದ್ಯಾಭ್ಯಾಸದ ವೇಳೆ ಸುಶಾಂತ್​ ಮುಂಬೈನ ಬದಿರಾ ಬಬ್ಬಾರ್​ ನಾಟಕ ಕ್ಷೇತ್ರಕ್ಕೆ ಸೇರಿಕೊಂಡರು. ಐಶ್ವರ್ಯ ರೈ ಜೊತೆ ಫಿಲ್ಮ್​ಫೇರ್​ ಸಮಾರಂಭದಲ್ಲಿ ಡ್ಯಾನ್ಸ್​ ಮಾಡುವ ಅವಕಾಶವನ್ನು ಸಹ ಪಡೆದುಕೊಂಡರು. ಬಳಿಕ 'ಪವಿತ್ರ ರಿಷ್ತಾ' ಸೀರಿಯಲ್​ ಮೂಲಕ ಉತ್ತಮ ನಟನಾಗಿ ಹೊರಹೊಮ್ಮಿದರು. ಧಾರವಾಹಿ ಅಲ್ಲೇ ದೊಡ್ಡ ಅಭಿಮಾನಿ ಬಳಗ ಸಂಪಾದಿಸಿದ್ದರು. 2013ರಲ್ಲಿ 'ಕೋಯಿ ಪೋ ಚೆ' ಸಿನಿಮಾ ಮೂಲಕ ಬಾಲಿವುಡ್​ ಲೋಕಕ್ಕೆ ಎಂಟ್ರಿ ಪಡೆದ ಅವರು ಸುಮಾರು 15 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: ಆಸ್ಕರ್​ ಅಂಗಳದಲ್ಲಿ ಜೂನಿಯರ್​ ಎನ್​ಟಿಆರ್.. ಅಮೋಘ ಅಭಿನಯಕ್ಕೆ ಸಿಗುತ್ತಾ ಪ್ರಶಸ್ತಿ ಗರಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.