ಹೈದರಾಬಾದ್: ಕಭಿ ಖುಷಿ ಕಭಿ ಗಮ್, ಚಿತ್ರ ಬಿಡುಗಡೆಗೊಂಡು 22 ವರ್ಷಗಳನ್ನು ಪೂರೈಸಿದರೂ ಸಿನಿ ಪ್ರಿಯರಲ್ಲಿ ಇದರ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. 2001ರಲ್ಲಿ ಬಿಡುಗಡೆಗೊಂಡ ಈ ಚಿತ್ರ ಇಂದಿಗೂ ಸಾರ್ವಕಾಲಿಕ ಸೂಪರ್ಹಿಟ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರವಾಗಿದೆ. ಕರಣ್ ಜೋಹರ್ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಬಾಲಿವುಡ್ ಬಾದ್ಷಾ ಶಾರುಖ್ ಖಾನ್, ಕಾಜೋಲ್, ಹೃತಿಕ್ ರೋಷನ್, ಕರೀನಾ ಕಪೂರ್ ಸೇರಿದಂತೆ ಮುಂತಾದ ಹಿರಿಯ ನಟರು ನಟಿಸಿದ್ದಾರೆ.
ಚಿತ್ರದಲ್ಲಿ ಕಾಣಸಿಕೊಂಡ ಹಿರಿಯ ನಟರು ಇಂದು ಬಾಲಿವುಡ್ನ ಖ್ಯಾತ ನಟರಾಗಿ ಗುರುತಿಸಿಕೊಂಡಿದ್ದು, ಸಿನಿ ಪಯಾಣದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಇದೀಗ ಇದೇ ಚಿತ್ರದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡು ಎಲ್ಲರ ಮನ ಗೆದ್ದಿದ್ದ ಕಲಾವಿದೆ ತಮ್ಮ ವೈಯಕ್ತಿಕ ಜೀವನದಲ್ಲಿ ಮಹತ್ವದ ಹೆಜ್ಜೆ ಇಡಲು ಮುಂದಾಗಿದ್ದಾರೆ.
ಹೌದು ಕಭಿ ಖುಷಿ ಕಭಿ ಗಮ್ ಚಿತ್ರದಲ್ಲಿ ಪೂಜಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಮಾಳವಿಕಾ ಪ್ರಿಯಕರನೊಂದಿಗೆ ಕೆಲವೇ ದಿನಗಳಲ್ಲಿ ಸಪ್ತಪದಿ ತುಳಿಯಲು ತಯಾರಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತಮ್ಮ ದೀರ್ಘಕಾಲದ ಪ್ರಿಯಕರ ಹಾಗೂ ಉದ್ಯಮಿ ಪ್ರಣವ್ ಬುಗ್ಗಾರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
- " class="align-text-top noRightClick twitterSection" data="">
ಟರ್ಕಿಯಲ್ಲಿ ನಡೆದ ಪ್ರಿಯಕರನೊಂದಿಗಿನ ವಿವಾಹ ಒಪ್ಪಂದದ ಚಿತ್ರಗಳನ್ನು ನಟಿ ಮಾಳವಿಕಾ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ಸುಧೀರ್ಘ ಸಮಯದ ಬಳಿಕ ನಮಗೆ ಈ ಸುಂದರ ಕ್ಷಣ ಬಂದಿದ್ದು, ಈ ಬಾಂಧವ್ಯದಿಂದ ನಾವು ಮತ್ತುಷ್ಟು ಗಟ್ಟಿಯಾಗಿದ್ದು, ಶೀಘ್ರದಲ್ಲೇ ಹೊಸ ಜಗತ್ತಿಗೆ ಪ್ರವೇಶ ಮಾಡಲಿದ್ದೇವೆ" ಎಂದು ಬರೆದುಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಪ್ರಿಯಕರ ಮದುವೆ ಪ್ರಸ್ತಾಪ ಮಾಡುತ್ತಿದ್ದು, ಹಿಂಬದಿ ಏರ್ ಬಲೂನ್ಗಳು ಆಗಸದಲ್ಲಿ ಹಾರಾಡುತ್ತಿದ್ದು, ಇಬ್ಬರ ಪ್ರೀತಿಗೆ ಸಾಕ್ಷಿ ಎಂಬಂತೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="">
ಕಭಿ ಖುಷಿ ಕಭಿ ಗಮ್ ಚಿತ್ರದಲ್ಲೇ ಖ್ಯಾತಿಗಳಿಸಿದ ನಟಿ ಮಾಳವಿಕ ಚಿತ್ರರಂಗದ ಕುಟುಂಬದಿಂದ ಬಂದವರು. ಇವರ ತಂದೆ ಬಾವಿ ರಾಜ್ ಬಾಲಿವುಡ್ ಚಿತ್ರರಂಗದ ಪ್ರಸಿದ್ದ ನಿರ್ಮಾಪಕರಿದ್ದರು. ಹಿರಿಯ ನಟ ಜಗದೀಶ್ ರಾಜ್ ಅವರ ಮೊಮ್ಮಗಳಾದ ಇವರು, ಹಿರಿಯ ನಟಿ ಅನಿತಾ ರಾಜ್ ಅವ ಸೊಸೆ ಕೂಡ ಹೌದು. ನಟಿ ಮಾಳವಿಕಾ ಸ್ಕ್ವಾಡ್, ಕ್ಯಾಪ್ಟನ್ ನವಾಬ್, ಜೈದೇವ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಯುವ ನಟಿಯಾಗಿ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: ಕಮಲ್ ಹಾಸನ್ ಜೊತೆ ನಟಿಸಿದ್ದ ಹಾಸ್ಯ ನಟ ಬೀದಿಯಲ್ಲಿ ಶವವಾಗಿ ಪತ್ತೆ!