ಮುಂಬೈ: ಬಾಲಿವುಡ್ ನಟಿ ರವೀನಾ ಟಂಡನ್ ಕನ್ನಡದ ಬ್ಲಾಕ್ಬಸ್ಟರ್ ಸಿನಿಮಾ ಕೆಜಿಎಫ್-2 ನಲ್ಲಿ ಡೈನಾಮಿಕ್ ಪಾತ್ರವಾದ ರಮಿಕಾ ಸೇನ್ ಆಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಾನು ಸಿನಿಮಾ ಇಂಡಸ್ಟ್ರಿಯಲ್ಲಿ ಆಕಸ್ಮಿಕವಾಗಿ ಬಂದು ಈ ಪ್ರಮಾಣದಲ್ಲಿ ಬೆಳೆದೆ. ತಾನು ಹೀರೋಯಿನ್ ಆಗುವ ಮೊದಲು ಸ್ಟುಡಿಯೋವೊಂದರಲ್ಲಿ ಕ್ಲೀನಿಂಗ್ ಮಾಡುತ್ತಿದ್ದೆ ಎಂದಿದ್ದಾರೆ ರವೀನಾ.
ಆಂಗ್ಲ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ಜೀವನದ ಬಗ್ಗೆ ಮಾತನಾಡಿರುವ ರವೀನಾ ಟಂಡನ್, ನಾನು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ತೀರಾ ಆಕಸ್ಮಿಕ. ಇದು ಸತ್ಯ ಕೂಡ ಹೌದು. ಜೀವನಕ್ಕಾಗಿ ನಾನು ಈ ಮೊದಲು ಸ್ಟುಡಿಯೋದಲ್ಲಿ ನೆಲಗುಡಿಸುವ, ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದೆ. ಅಲ್ಲಿರುವ ಜನರು ನನ್ನನ್ನು ನೋಡಿ 'ನೀನು ತೆರೆಯ ಹಿಂದಲ್ಲ, ತೆರೆಯ ಮೇಲೆ ನಟಿಸಬೇಕು. ನೀನು ಹೀರೋಯಿನ್ ಆಗಲು ಫಿಟ್ ಇದ್ದೀಯಾ ಎಂದು ಹೇಳುತ್ತಿದ್ದರು.
ಇದನ್ನು ಕೇಳಿಸಿಕೊಂಡು ನಾನು ನನ್ನಲ್ಲೇ ನಕ್ಕು, ಸಿನಿಮಾದಲ್ಲಿ ನಟನೆ ಮಾಡೋದು ಎಂದು ಕೇಳಿಕೊಳ್ಳುತ್ತಿದ್ದೆ. ಬಳಿಕ ಪ್ರಹ್ಲಾದ್ ಎಂಬುವವರ ಬಳಿ ಮಾಡೆಲಿಂಗ್ ಶುರು ಮಾಡಿದೆ. ಈ ವೇಳೆ ನನಗೆ ಸಿಕ್ಕ ಖ್ಯಾತಿಯಿಂದಾಗಿ ಕೆಲ ಸಿನಿಮಾಗಳು ನನ್ನನ್ನು ಹುಡುಕಿಕೊಂಡು ಬಂದವು. ಬಳಿಕ ನಾನು ಸಿನಿಮಾದಲ್ಲಿಯೇ ಮುಂದುವರಿಯಬೇಕಾಗಿ ಬಂತು ಎಂದು ರವೀನಾ ತಾವು ಹೀರೋಯಿನ್ ಆಗಿ ಬೆಳೆದ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಭಾಷೆಯ ಗಡಿ ಮೀರಿ ಫೇಮಸ್ ಆದ ದಕ್ಷಿಣ ಭಾರತದ ಟಾಪ್ ನಟರಿವರು!!