ETV Bharat / entertainment

ಮೊದಲ ಬಾರಿ ಮಹಿಳಾ ಪ್ರಧಾನ ಸಿನಿಮಾಗೆ ರಶ್ಮಿಕಾ ನಾಯಕಿ: 'ರೈನ್​ಬೋ' ಪೋಸ್ಟರ್​ ಔಟ್​​ - etv bharat kannada

ಮೊದಲ ಬಾರಿಗೆ ನಟಿ ರಶ್ಮಿಕಾ ಮಂದಣ್ಣ ಮಹಿಳಾ ಪ್ರಧಾನ ಸಿನಿಮಾಗೆ ನಾಯಕಿಯಾಗಿದ್ದಾರೆ.

Rainbow
ರೈನ್​ಬೋ
author img

By

Published : Apr 3, 2023, 5:32 PM IST

Updated : Apr 3, 2023, 5:57 PM IST

ಸಿನಿಮಾ ರಂಗದಲ್ಲಿ ಸೂಪರ್​ ಸ್ಟಾರ್​ ಹೀರೋಗಳಂತೆಯೇ ನಾಯಕಿಯರು ಕೂಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಒಂದೆಡೆ ನಾಯಕ ನಟರ ಜೊತೆ ಸಿನಿಮಾಗಳನ್ನು ಮಾಡುತ್ತಾ, ಮತ್ತೊಂದೆಡೆ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸುತ್ತಾ ಫೇಮಸ್​ ಆಗಿದ್ದಾರೆ. ಈ ನಾಯಕಿಯರ ಸಾಲಿನಲ್ಲಿ ಅನುಷ್ಕಾ, ಸಮಂತಾ, ನಯನ ತಾರಾ ಪ್ರಮುಖರು. ಇದೀಗ ಈ ಪಟ್ಟಿಗೆ ರಶ್ಮಿಕಾ ಮಂದಣ್ಣ ಕೂಡ ಸೇರಲಿದ್ದಾರೆ. ಇಷ್ಟು ದಿನ ಹೀರೋಗಳ ಜೊತೆ ನಾಯಕಿಯಾಗಿ ನಟಿಸಲು ಒಪ್ಪಿಕೊಳ್ಳುತ್ತಿದ್ದ ರಶ್ಮಿಕಾ ಮೊದಲ ಬಾರಿಗೆ ಸ್ತ್ರೀ ಪ್ರಧಾನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಿರಿಕ್​ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ ಈ ಬೆಡಗಿ ಸದ್ಯ ಬಹುಭಾಷಾ ತಾರೆಯಾಗಿದ್ದಾರೆ. ನ್ಯಾಷನಲ್​ ಕ್ರಶ್​ ರಶ್ಮಿಕಾ ಕೆಲವೇ ವರ್ಷಗಳಲ್ಲಿ ಟಾಪ್​ ಹೀರೋಯಿನ್​ ಆಗಿ ಮಿಂಚುತ್ತಿದ್ದಾರೆ. ಅಲ್ಲು ಅರ್ಜುನ್​ ಜೊತೆಗೆ ಪುಷ್ಪ ಸಿನಿಮಾದ ಮೂಲಕ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ಸದ್ಯ ಸೌತ್​ ಸಿನಿಮಾ ಮಾಡುತ್ತಲೇ ಬಾಲಿವುಡ್​ನಲ್ಲೂ ಸಾಲು ಸಾಲು ಆಫರ್​ಗಳನ್ನು ಪಡೆಯುತ್ತಿದ್ದಾರೆ. ಇತ್ತೀಚೆಗೆ ಅವರ ಹಿಂದಿ ಚಿತ್ರ 'ಮಿಷನ್​ ಮಜ್ನು' ಮತ್ತು ತೆಲುಗು ಸಿನಿಮಾ 'ವಾರಿಸುಡು' ಅಷ್ಟೊಂದು ಹಿಟ್​ ಆಗಿಲ್ಲ ಅಂದ್ರು, ರಶ್ಮಿಕಾ ಸೌಂದರ್ಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ.

ಸದ್ಯ ಪುಷ್ಪ- 2 ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ನಟಿ ಹಲವು ಸಿನಿಮಾಗಳಿಗೆ ಓಕೆ ಎನ್ನುತ್ತಿದ್ದಾರೆ. ಇದೀಗ ಲೇಡಿ ಓರಿಯೆಂಟೆಡ್​ ಚಿತ್ರ ಕೂಡ ಮಾಡಲು ಒಪ್ಪಿಕೊಂಡಿದ್ದಾರೆ. ಶಂತರುಬನ್ ಚಿತ್ರಕಥೆ ಬರೆದು​ ನಿರ್ದೇಶಿಸಿದ 'ರೈನ್​ಬೋ' ಎಂಬ ಸ್ತ್ರೀ ಪ್ರಧಾನ ಸಿನಿಮಾಗೆ ನಾಯಕಿಯಾಗಿದ್ದಾರೆ. ಚಿತ್ರದ ಮೊದಲ ಪೋಸ್ಟರ್​ ಅನ್ನು ಚಿತ್ರತಂಡ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ರಶ್ಮಿಕಾ ಎದುರು ನಟ ದೇವ್​ ಮೋಹನ್​ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ.

  • #Rainbow ..🌈
    The different colours of life.

    This is extremely special to me.. 🥹
    I hope I have all of your blessings and love.. ❤️❤️
    And I really hope and pray that this becomes your next favourite characters of mine.. ❤️❤️😙🌻 https://t.co/2Om3ZSAxvv

    — Rashmika Mandanna (@iamRashmika) April 3, 2023 " class="align-text-top noRightClick twitterSection" data=" ">

ಇದುವರೆಗೂ ನೋಡದ ರಶ್ಮಿಕಾ ಅವರ ಅದ್ಭುತ ನಟನೆಯನ್ನು ಈ ಸಿನಿಮಾದಲ್ಲಿ ನೋಡಬಹುದಾಗಿದೆ. ​ಇನ್ನು ಚಿತ್ರದ ಮುಹೂರ್ತ ಕಾರ್ಯಕ್ರಮವು ಹೈದರಾಬಾದ್​ನಲ್ಲಿ ಇಂದು ನೆರವೇರಿದೆ. ಈ ವೇಳೆ ಅಲ್ಲು ಅರವಿಂದ್​, ಸುರೇಶ್​ ಬಾಬು, ಅಮಲಾ ಅಕ್ಕಿನೇನಿ, ಸುಪ್ರಿಯಾ, ವೆಂಕಿ ಕುಡುಮುಲು, ರಶ್ಮಿಕಾ ಮಂದಣ್ಣ, ದೇವ್​ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ದಳಪತಿ ವಿಜಯ್: ಒಂದೇ ದಿನ 4 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್‌!

ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಗುಲಾಬಿ ಬಣ್ಣದ ಡ್ರೆಸ್​ನಲ್ಲಿ ಮುದ್ದಾಗಿ ಕಂಡರು. ನಟ ದೇವ ಮೋಹನ್​ ಹಳದಿ ಬಣ್ಣದ ಕುರ್ತಾವನ್ನು ಧರಿಸಿದ್ದರು. ರೈನ್​ಬೋ ಸಿನಿಮಾದ ಶೂಟಿಂಗ್​ ಏಪ್ರಿಲ್​ 7 ರಿಂದ ಆರಂಭವಾಗಲಿದೆ. ಕೆಎಂ ಭಾಸ್ಕರನ್​ ಛಾಯಾಗ್ರಹಣ ಮಾಡಲಿದ್ದು, ಜಸ್ಟೀನ್​ ಪ್ರಭಾಕರನ್​ ಸಂಗೀತ ನಿರ್ದೇಶನ ನೀಡಲಿದ್ದಾರೆ. ಡ್ರೀಮ್​ ವಾರಿಯರ್​ ಪಿಕ್ಚರ್ಸ್​ ಬ್ಯಾನರ್​ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ರೈನ್​ಬೋ ಒಂದು ರೀತಿಯ ರೊಮ್ಯಾಂಟಿಕ್​ ಫ್ಯಾಂಟಸಿ ಚಿತ್ರವಾಗಿದೆ. ಈ ಸಿನಿಮಾವು ತೆಲುಗು ಮತ್ತು ತಮಿಳು ಭಾಷೆಯಲ್ಲಿ ಮೂಡಿಬರಲಿದೆ.

ಇದನ್ನೂ ಓದಿ: ಮೂಲ ಮೈಸೂರು, 100ಕ್ಕೂ ಹೆಚ್ಚು ಸಿನಿಮಾಗಳಿಗೆ ನೃತ್ಯ ಸಂಯೋಜನೆ: ಪ್ರಭು ದೇವಗಿಂದು 50ನೇ ಜನ್ಮದಿನ ಸಂಭ್ರಮ

Last Updated : Apr 3, 2023, 5:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.