ETV Bharat / entertainment

ಜನ್ಮದಿನಕ್ಕೆ ಒಂದು ವಾರವಿರುವಾಗಲೇ ರಶ್ಮಿಕಾ ಮಂದಣ್ಣಗೆ ಸರ್​ಪ್ರೈಸ್ ಕೊಟ್ಟ ಫ್ಯಾನ್ಸ್! - ರಶ್ಮಿಕಾ ಮಂದಣ್ಣ ಫೋಟೋ

ಮುಂಬೈ ಏರ್​ಪೋರ್ಟ್​ ಬಳಿ ನಟಿ ರಶ್ಮಿಕಾ ಮಂದಣ್ಣ ಅವರ ಪ್ರೀ ಬರ್ತ್ ಡೇ ಸೆಲೆಬ್ರೇಶನ್​ ಮಾಡಲಾಗಿದೆ.

Rashmika Mandanna pre birthday
ರಶ್ಮಿಕಾ ಮಂದಣ್ಣ ಪ್ರೀ ಬರ್ತ್ ಡೇ ಸೆಲೆಬ್ರೇಶನ್
author img

By

Published : Mar 29, 2023, 1:34 PM IST

ಏಪ್ರಿಲ್​​ 5 ರಂದು ನಟಿ​ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ. ಜನ್ಮದಿನಕ್ಕೂ ಒಂದು ವಾರ ಮೊದಲೇ ಮುಂಬೈನಲ್ಲಿ ಪಾಪರಾಜಿಗಳು ಸರ್​ಪ್ರೈಸ್​​ ಕೊಟ್ಟಿದ್ದಾರೆ. 'ಸಿಹಿ' ಅಚ್ಚರಿಗೆ ಬಹುಭಾಷಾ ನಟಿ ಸಂತಸಗೊಂಡಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಕೇಕ್​ ಕಟ್​ ಮಾಡಿದ್ದಾರೆ. ರಶ್ಮಿಕಾ ಜೊತೆ ತೆಲುಗು ನಟ ಬೆಲ್ಲಂಕೊಂಡ ಶ್ರೀನಿವಾಸ್ ಇದ್ದರು. ತಾರೆಯರು ಫ್ಯಾನ್ಸ್, ಪಾಪರಾಜಿಗಳೊಂದಿಗೆ ಕೆಲ ಕ್ಷಣ ಕಳೆದು ಅಲ್ಲಿಂದ ನಿರ್ಗಮಿಸಿದ್ದಾರೆ. ರಶ್ಮಿಕಾ ಮಂದಣ್ಣ ಕೇಕ್​ ಕತ್ತರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ನಟಿಗೆ ಫ್ಯಾನ್ಸ್ ಶುಭ ಕೋರಲು ಆರಂಭಿಸಿದ್ದಾರೆ.

ರಶ್ಮಿಕಾ ಮಂದಣ್ಣ ಸಮ್ಮರ್​ ಸ್ಟೈಲ್​ ಡ್ರೆಸ್​ ಧರಿಸಿದ್ದರು. ಕಾಸ್ಟ್ಲಿಯೆಸ್ಟ್ ಪರ್ಸ್ ಹಿಡಿದಿದ್ದರು. ಕಡಿಮೆ ಮೇಕಪ್​ನೊಂದಿಗೆ ಕ್ಯಾಶುವಲ್​ ಕೂಲ್​ ಲುಕ್​ನಲ್ಲಿ ಕಾಣಿಸಿಕೊಂಡರು. ಮತ್ತೊಂದೆಡೆ, ನಟ ಬೆಲ್ಲಂಕೊಂಡ ಶ್ರೀನಿವಾಸ್ ಕಂದು ಬಣ್ಣದ ಪ್ಯಾಂಟ್ ಮತ್ತು ಕ್ರೀಮ್​ ಕಲರ್ ಶರ್ಟ್ ಧರಿಸಿ, ಎಂದಿನಂತೆ ಕ್ಯಾಶುವಲ್​ ಆಗಿ ಕಾಣಿಸಿಕೊಂಡರು. ಈ ಇಬ್ಬರೂ ಫ್ಯಾನ್ಸ್​​ಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.

ಬೆಲ್ಲಂಕೊಂಡ ಶ್ರೀನಿವಾಸ್ ಜೊತೆ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ನಟ ಬೆಲ್ಲಂಕೊಂಡ ಶ್ರೀನಿವಾಸ್ ಅವರು ತೆಲುಗು ಚಿತ್ರಗಳಾದ ಸೀತಾ ಮತ್ತು ಅಲ್ಲುಡು ಅಧುರ್ಸ್‌ ಸಿನಿಮಾಗಳಲ್ಲಿನ ಪಾತ್ರಗಳಿಗೆ ಹೆಚ್ಚು ಹೆಸರುವಾಸಿ ಆಗಿದ್ದಾರೆ. ಪ್ರಭಾಸ್ ಅವರ 2005ರ ಬ್ಲಾಕ್‌ಬಸ್ಟರ್ ಛತ್ರಪತಿ ಚಿತ್ರದ ರಿಮೇಕ್‌ ಮೂಲಕ ಶೀಘ್ರದಲ್ಲೇ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ. ಛತ್ರಪತಿ ಎಂದೇ ಹಿಂದಿ ಆವೃತ್ತಿಗೂ ಶೀರ್ಷಿಕೆ ಇಡಲಾಗಿದೆ. ಮೇ 12ರಂದು ಈ ಚಿತ್ರ ತೆರೆಕಾಣಲಿದೆ.

ರಶ್ಮಿಕಾ ಮಂದಣ್ಣ ಅವರು ಅಲ್ಲು ಅರ್ಜುನ್ ಜೊತೆ 'ಪುಷ್ಪ: ದಿ ರೂಲ್' (ಪುಷ್ಪ ಸೀಕ್ವೆಲ್)ನಲ್ಲಿ ಶ್ರೀವಲ್ಲಿ ಪಾತ್ರವನ್ನು ಮುಂದುವರಿಸಲು ಸಿದ್ಧರಾಗಿದ್ದಾರೆ. 2021ರ ಕೊನೆಯಲ್ಲಿ ತೆರೆಕಂಡ ಈ ಚಿತ್ರ ಸೂಪರ್​ ಹಿಟ್​ ಆಗಿದ್ದು, ಅದರ ಮುಂದುವರಿದ ಭಾಗಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ. ಭಾಗ 1ರ ಊ ಅಂಟಾವ ಹಾಡು ನಟಿ ಸಮಂತಾ ರುತ್ ಪ್ರಭು ಅವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮುಂದಿನ ಚಿತ್ರಕ್ಕೆ ಚಾಲನೆ: ಮುಹೂರ್ತ ಸಮಾರಂಭಕ್ಕೆ ಸಾಕ್ಷಿಯಾದ ಚಿರಂಜೀವಿ

'VNRTrio' ರಶ್ಮಿಕಾ ಮಂದಣ್ಣ ಅವರ ಮುಂದಿನ ಚಿತ್ರ. ಟಾಲಿವುಡ್​ ನಟ ನಿತಿನ್​ ಜೊತೆ ತೆರೆ ಹಂಚಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. 'VNRTrio' ತಾತ್ಕಾಲಿಕ ಟೈಟಲ್. ನಿತಿನ್ ಮತ್ತು ನಿರ್ದೇಶಕ ವೆಂಕಿ ಕುಡುಮುಲ ಅವರೊಂದಿಗೆ ರಶ್ಮಿಕಾ ಕೆಲಸ ಮಾಡುತ್ತಿರುವ ಎರಡನೇ ಸಿನಿಮಾ ಇದು. 2020ರ ಭೀಷ್ಮಾ ಚಿತ್ರದಲ್ಲಿ ನಿತಿನ್​ ಮತ್ತು ರಶ್ಮಿಕಾ ಸ್ಕ್ರೀನ್ ಶೇರ್ ಮಾಡಿದ್ದರು. ಮೆಗಾಸ್ಟಾರ್ ಚಿರಂಜೀವಿ ಅವರು ಮೊದಲ ಕ್ಲ್ಯಾಪ್​ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಮೈತ್ರಿ ಮೂವಿ ಮೇಕರ್ಸ್‌ ನಿರ್ಮಾಣದಲ್ಲಿ ಬರಲಿರುವ ಈ ಚಿತ್ರ ಪೂರ್ಣ ಪ್ರಮಾಣದ ಮನೋರಂಜನಾ ಚಿತ್ರ ಎಂದು ಹೇಳಲಾಗಿದೆ. ಆದ್ರೆ ಚಿತ್ರ ಬಗ್ಗೆ ಹೆಚ್ಚೇನೂ ಬಹಿರಂಗಪಡಿಸಿಲ್ಲ ಚಿತ್ರತಂಡ.

ಇದನ್ನೂ ಓದಿ: 'ಆಮ್ ಆದ್ಮಿ' ರಾಘವ್​ ಜೊತೆ ಮದುವೆ ಪ್ರಶ್ನೆಗೆ ನಾಚಿ ನೀರಾದ ಪರಿಣಿತಿ ಚೋಪ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.