ಸೌತ್ ಸಿನಿಮಾ ಇಂಡಸ್ಟ್ರಿಯ ಸುಂದರಿ ರಶ್ಮಿಕಾ ಮಂದಣ್ಣ ಅವರು ಸಿನಿಮಾ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಸಕ್ರಿಯರಾಗಿರುತ್ತಾರೆ. ಈ ಆನ್ಲೈನ್ ವೇದಿಕೆ ಮೂಲಕ ಚಲನಚಿತ್ರ ಮತ್ತು ವೈಯಕ್ತಿಕವಾಗಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ತಮ್ಮ ಕೆಲಸ ಮತ್ತು ವೈಯಕ್ತಿಕ ಜೀವನ ಸಂಬಂಧ ಹೆಚ್ಚಿನ ಕ್ಷಣಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇದೀಗ ನ್ಯಾಶನಲ್ ಕ್ರಶ್ ರಶ್ಮಿಕಾ ತಮ್ಮ ಮೇಕಪ್ ರೂಮ್‌ನಿಂದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಆನ್‌ಲೈನ್‌ನಲ್ಲಿ ಬರ್ಗರ್ ಆರ್ಡರ್ ಮಾಡಿದ್ದರು. ಆದರೆ ತಮ್ಮ ಪಾರ್ಸೆಲ್ ತೆರೆದು ನೋಡಿದಾಗ, ನಟಿಗೆ ತಾನು ಆರ್ಡರ್ ಮಾಡಿದ ಸಾಮಗ್ರಿ ಸಿಕ್ಕಿಲ್ಲ. ಈ ಹಿನ್ನೆಲೆ ನ್ಯಾಶನಲ್ ಕ್ರಶ್ ನಿರಾಶೆಗೊಂಡರು. ನಟಿಯ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಶ್ಮಿಕಾ ಮಂದಣ್ಣ ಹಂಚಿಕೊಂಡಿರುವ ವಿಡಿಯೋದಲ್ಲಿ, ಅವರು ಆರ್ಡರ್ ಮಾಡಿದ್ದ ಪಾರ್ಸೆಲ್ ತೆರೆಯುತ್ತಿದ್ದಾರೆ. ಡೆಲಿವರಿ ಬ್ಯಾಗ್‌ಗೆ ಕೈ ಹಾಕಿದ ತಕ್ಷಣ, ಅವರು ಗ್ಲಾಸ್ ಅವರ್ (glasshour) ಪಡೆದಿದ್ದಾರೆ. ಇದನ್ನು ನೋಡಿ ನಟಿ ಏನು ಎಂದು ಪ್ರಶ್ನಿಸುತ್ತಾರೆ. ಈ ವಿಡಿಯೋ ಹಂಚಿಕೊಂಡಿರುವ ನಟಿ, ಆರ್ಡರ್ ಮಾಡಿದ್ದು ಒಂದು, ಬಂದಿದ್ದು ಮತ್ತೊಂದು ವಸ್ತು ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ವಿಡಿಯೋದಲ್ಲಿ ರಶ್ಮಿಕಾ ಅವರು ಹಳದಿ ಶರ್ಟ್ ಮತ್ತು ಬಿಳಿ ಪ್ಯಾಂಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ವಿಡಿಯೋ ಬಗ್ಗೆ ಅಭಿಮಾನಿಗಳು ಬಗೆ ಬಗೆಯಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
- " class="align-text-top noRightClick twitterSection" data="
">
ರಶ್ಮಿಕಾ ಮಂದಣ್ಣ ಕೊನೆಯದಾಗಿ ಸೂಪರ್ ಸ್ಟಾರ್ ವಿಜಯ್ ಅಭಿನಯದ 'ವಾರಿಸು' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೊಂದು ಕೌಟುಂಬಿಕ ಚಿತ್ರವಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದೆ. ಇತ್ತೀಚೆಗೆ ಅವರ ಹೊಸ ಚಿತ್ರ - VNRTrio ಘೋಷಿಸಲಾಗಿದೆ. ಇದರಲ್ಲಿ ತೆಲುಗು ಸ್ಟಾರ್ ನಟ ನಿತಿನ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಹಿಂದೆ 'ಭೀಷ್ಮ' ಚಿತ್ರದಲ್ಲಿ ನಿತಿನ್ ಜೊತೆ ರಶ್ಮಿಕಾ ಕಾಣಿಸಿಕೊಂಡಿದ್ದರು. ಈ ಇಬ್ಬರೂ ಒಟ್ಟಾಗಿ ನಟಿಸುತ್ತಿರುವ ಎರಡನೇ ಚಿತ್ರ ಇದು. ಇಂದು ನಟ ನಿತಿನ್ ಹುಟ್ಟುಹಬ್ಬ ಹಿನ್ನೆಲೆ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ರಶ್ಮಿಕಾ ಮಂದಣ್ಣ ಸಹ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಈ ಪೋಸ್ಟರ್ ಶೇರ್ ಮಾಡಿದ್ದು, ನಿತಿನ್ ಅವರೊಂದಿಗೆ ನಟಿಸಲು ಎದುರು ನೋಡುತ್ತಿದ್ದೇನೆಂದು ಬರೆದಿದ್ದಾರೆ.
-
The team of #VNRTrio wishes @actor_nithiin a very Happy Birthday ❤️
— Mythri Movie Makers (@MythriOfficial) March 30, 2023 " class="align-text-top noRightClick twitterSection" data="
May this year be super entertaining on our sets with your stylish and slick presence 💥#HappyBirthdayNithiin @iamRashmika @VenkyKudumula @gvprakash pic.twitter.com/uswPQFUWZJ
">The team of #VNRTrio wishes @actor_nithiin a very Happy Birthday ❤️
— Mythri Movie Makers (@MythriOfficial) March 30, 2023
May this year be super entertaining on our sets with your stylish and slick presence 💥#HappyBirthdayNithiin @iamRashmika @VenkyKudumula @gvprakash pic.twitter.com/uswPQFUWZJThe team of #VNRTrio wishes @actor_nithiin a very Happy Birthday ❤️
— Mythri Movie Makers (@MythriOfficial) March 30, 2023
May this year be super entertaining on our sets with your stylish and slick presence 💥#HappyBirthdayNithiin @iamRashmika @VenkyKudumula @gvprakash pic.twitter.com/uswPQFUWZJ
ಇದನ್ನೂ ಓದಿ: 'ನಿಮ್ಮ ಅಭಿನಯ, ವ್ಯಕ್ತಿತ್ವ ಎರಡೂ ಅದ್ಭುತ': ಅನುಪಮ್ ಖೇರ್ ಬಗ್ಗೆ ಶಿವಣ್ಣ ಗುಣಗಾನ
ಇನ್ನೂ ನಾಳೆ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ - 2023 ಸಲುವಾಗಿ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ದು ಮಾಡಲಿದ್ದಾರೆ. IPL ಉದ್ಘಾಟನಾ ಸಮಾರಂಭದಲ್ಲಿ ಬಹುಭಾಷಾ ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ತಮನ್ನಾ ಭಾಟಿಯಾ ನೃತ್ಯ ಮಾಡಲಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ IPL 2023 ಪೋಸ್ಟರ್ ಹಾಕಿಕೊಂಡು, ಈ ಬಗ್ಗೆ ಖಚಿತ ಪಡಿಸಿದ್ದಾರೆ.
ಇದನ್ನೂ ಓದಿ: IPL 2023: ನಾಳೆಯಿಂದ ಐಪಿಎಲ್ ಹಬ್ಬ; ಉದ್ಘಾಟನಾ ಸಮಾರಂಭದಲ್ಲಿ ರಶ್ಮಿಕಾ, ತಮನ್ನಾ ನೃತ್ಯ ಝಲಕ್!
IPL 2023 ನಾಳೆ ಸಂಜೆ 6 ಗಂಟೆಗೆ ಅದ್ಧೂರಿಯಾಗಿ ಆರಂಭ ಆಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉದ್ಘಾಟನಾ ಸಮಾರಂಭ ಮತ್ತು ಮೊದಲ ಪಂದ್ಯ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಮೊದಲ ಪಂದ್ಯ ನಡೆಯಲಿದ್ದು, ಅರ್ಧ ಗಂಟೆ ಮೊದಲು ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಕ್ರಿಕೆಟ್ ಸಮಾರಂಭಕ್ಕೆ ರಶ್ಮಿಕಾ ಮತ್ತು ತಮನ್ನಾ ಮೆರುಗು ನೀಡಲಿದ್ದಾರೆ.