ETV Bharat / entertainment

ಕಂಚಿನ ಕಂಠದಲ್ಲೇ ಲಕ್ಷಾಂತರ ಜನರನ್ನು ಕುಣಿಸಿದ ಬಾಲು.. ಎಸ್​ಪಿಬಿ ಅಪರೂಪದ ದಾಖಲೆಗಳು ಹೀಗಿವೆ..

ಭಾರತೀಯ ಚಿತ್ರರಂಗ ಕಂಡ ಮಹಾನ್ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ 16 ಭಾಷೆಯ ಸುಮಾರು 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಜೊತೆಗೆ ಅಪರೂಪದ ದಾಖಲೆಗಳನ್ನು ಬರೆದಿದ್ದಾರೆ.

Rare Records of SP Balasubramaniam
ಕಂಠದಲ್ಲೇ ಲಕ್ಷಾಂತರ ಜನರನ್ನು ಕುಣಿಸಿದ ಗಾನ ಗಾರುಡಿಗ; ಎಸ್​ಪಿಬಿ ಅಪರೂಪದ ದಾಖಲೆಗಳು ಹೀಗಿವೆ..
author img

By ETV Bharat Karnataka Team

Published : Sep 25, 2023, 5:34 AM IST

Updated : Sep 25, 2023, 6:21 AM IST

ಎಸ್ ​ಪಿ ಬಾಲಸುಬ್ರಹ್ಮಣ್ಯಂ ಎಲ್ಲರೂ ಇವರನ್ನು ಪ್ರೀತಿಯಿಂದ 'ಬಾಲು' ಎಂದು ಕರೆಯುತ್ತಾರೆ. 'ಶ್ರೀ ಶ್ರೀ ಮರ್ಯಾದಾ ರಾಮಣ್ಣ' ಚಿತ್ರದಲ್ಲಿ ಹಿನ್ನೆಲೆ ಗಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೊದಲು ತೆಲುಗು ಹಾಡು ಹಾಡಿದ 8 ದಿನಗಳಲ್ಲೇ ಕನ್ನಡದಲ್ಲಿ ಇವರಿಗೆ ಅವಕಾಶ ಸಿಕ್ಕಿತು. ಆ ನಂತರ ಕ್ರಮೇಣ ತಮಿಳು, ಮಲಯಾಳಂ ಸೇರಿದಂತೆ 16 ಭಾಷೆಗಳ ಹಾಡುಗಳಿಗೆ ಧ್ವನಿಯಾದರು. ಭಾರತೀಯ ಚಿತ್ರರಂಗಕ್ಕೆ ಕೊಡುಗೆಯ ರೂಪದಲ್ಲಿ ಅನೇಕ ಸೂಪರ್​ ಹಿಟ್​ ಹಾಡುಗಳನ್ನು ನೀಡಿದ್ದಾರೆ. ಲಕ್ಷಾಂತರ ಜನರನ್ನು ರಂಜಿಸಿದ್ದಾರೆ. ಜೊತೆಗೆ ಅನೇಕ ದಾಖಲೆಗಳನ್ನು ಸೃಷ್ಟಿಸಿದ್ದಾರೆ.

  • ಎಸ್​ಪಿಬಿ ಅವರು ಒಂದೇ ದಿನದಲ್ಲಿ ಅತೀ ಹೆಚ್ಚು ಹಾಡುಗಳನ್ನು ಹಾಡಿ ದಾಖಲೆ ಬರೆದಿದ್ದಾರೆ. 1981ರಲ್ಲಿ ಕನ್ನಡ ಸಂಗೀತ ನಿರ್ದೇಶಕ ಉಪೇಂದ್ರ ಅವರ ಹಾಡುಗಳಿಗಾಗಿ ಬಾಲು ಅವರು ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ ಹಾಡುಗಳನ್ನು ರೆಕಾರ್ಡ್ ಮಾಡುತ್ತಿದ್ದರು. ಆ ಹನ್ನೆರಡು ಗಂಟೆಗಳ ಅವಧಿಯಲ್ಲಿ ಏಕಕಾಲಕ್ಕೆ 21 ಹಾಡುಗಳನ್ನು ರೆಕಾರ್ಡ್ ಮಾಡಿ ಇತಿಹಾಸ ರಚಿಸಿದ್ದಾರೆ.
  • ಎಸ್​ಪಿಬಿ ತಮಿಳಿನಲ್ಲಿ 19 ಮತ್ತು ಹಿಂದಿಯಲ್ಲಿ 16 ಹಾಡುಗಳನ್ನು ಒಂದೇ ದಿನದಲ್ಲಿ ಪೂರ್ಣಗೊಳಿಸಿದ್ದಾರೆ. ಪಿ.ಸುಶೀಲಾ, ಎಸ್.ಜಾನಕಿ, ವಾಣಿ ಜಯರಾಂ, ಎಲ್.ಆರ್. ಈಶ್ವರಿ ಮುಂತಾದವರ ಜೊತೆಗೆ ಹಲವು ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಎಂಜಿ ರಾಮಚಂದ್ರನ್, ಶಿವಾಜಿ ಗಣೇಶನ್ ಮತ್ತು ಜೆಮಿನಿ ಗಣೇಶನ್ ಅವರಂತಹ ಮಹಾನ್ ನಾಯಕರ ಹಾಡುಗಳನ್ನು ಹಾಡಿದ್ದಾರೆ.
  • ಇಳಯರಾಜ ಮತ್ತು ಎಸ್‌ಪಿಬಿ ಅನೇಕ ಹಿಟ್ ಹಾಡುಗಳನ್ನು ನೀಡಿದ್ದಾರೆ. ಎಸ್‌ಪಿಬಿ ಹಾಡುಗಳ ಬಗ್ಗೆ ಹೇಳಬೇಕಾದರೆ ಇಳಯರಾಜ ಅವರ ಬಗ್ಗೆ ಒಂದು ಉಲ್ಲೇಖ ಅತ್ಯಗತ್ಯ. ಇಳಯರಾಜ ಅವರ ಸಂಗೀತದ ಬಗ್ಗೆ ಮಾತನಾಡುವಾಗಲೂ ಬಾಲು ಅವರನ್ನು ಬಿಡುವಂತಿಲ್ಲ. ಇವರಿಬ್ಬರ ಅದ್ಭುತ ಕಾಂಬಿನೇಷನ್​ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.
  • ಸಂಗೀತ ನಿರ್ದೇಶಕರ ವಿಚಾರಕ್ಕೆ ಬಂದರೆ, ಆರಂಭದಲ್ಲಿ ಗುರು ಎಸ್.ಪಿ.ಕೋದಂಡಪಾಣಿ, ಕೆ.ವಿ.ಮಹದೇವನ್, ಸಾಲೂರಿ ರಾಜೇಶ್ವರ ರಾವ್, ಸತ್ಯಂ ಮುಂತಾದವರ ಜೊತೆ ಎಸ್​ಪಿಬಿ ಕೆಲಸ ಮಾಡಿದ್ದಾರೆ. ಬಳಿಕ ಅಲಿಬಾಬಾ 40 ಥೀವ್ಸ್​ ಸಿನಿಮಾದಿಂದ ಘಂಟಸಾಲ ಅವರೊಂದಿಗಿನ ಒಡನಾಟ ಪ್ರಾರಂಭವಾಯಿತು. ಆ ನಂತರ ಟಿ.ವಿ ರಾಜು, ದಿ ನಾರಾಯಣ ರಾವ್, ಚಕ್ರವರ್ತಿ ಮತ್ತು ಜೆ.ವಿ. ರಾಘವುಲು ಅವರ ಜೊತೆಯೂ ಎಸ್​ಪಿಬಿ ಕೆಲಸ ಮಾಡಿದ್ದಾರೆ. ಸಂಗೀತ ನಿರ್ದೇಶಕ ಸತ್ಯಂ ಅವರಿಗಾಗಿ ಅನೇಕ ಹಿಟ್​ ಹಾಡುಗಳನ್ನು ಹಾಡಿದ್ದಾರೆ.
  • ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರು ಎಂ.ಎಂ. ಕೀರವಾಣಿ, ಬಪ್ಪಿಲಹರಿ, ಆರ್.ಡಿ.ಬರ್ಮನ್, ಎ.ಆರ್.ರೆಹಮಾನ್, ವಿದ್ಯಾಸಾಗರ್, ವಸುರಾವ್, ಎಸ್.ವಿ.ಕೃಷ್ಣಾರೆಡ್ಡಿ ಸೇರಿದಂತೆ ಅನೇಕರ ಸಿನಿಮಾದ ಹಾಡುಗಳಿಗೆ ಜೀವ ತುಂಬಿದ್ದಾರೆ. ಅಲ್ಲದೇ ಯುವ ಸಂಗೀತ ನಿರ್ದೇಶಕರ ಜೊತೆಯೂ ಕೆಲಸ ಮಾಡಿದ್ದಾರೆ. ಎಂಎಂ ಶ್ರೀಲೇಖಾ, ಸಂದೀಪ್ ಚೌಟ, ಮಣಿಶರ್ಮ, ವಂದೇಮಾತರಂ ಶ್ರೀನಿವಾಸ್, ರಮಣ ಗೋಗುಲ, ದೇವಾ, ಎಸ್.ಎ. ರಾಜ್‌ಕುಮಾರ್, ದೇವಿಶ್ರೀ ಪ್ರಸಾದ್ ಮುಂತಾದವರ ಟ್ಯೂನ್‌ಗಳಿಗೆ ಹಾಡುಗಳನ್ನು ನೀಡಿದ್ದಾರೆ.
  • ಬಾಲು ಅವರು ಸಂಗೀತ ಸಂಯೋಜಕರಾದ ಆರ್‌ಪಿ ಪಟ್ನಾಯಕ್, ಯುವನ್ ಶಂಕರ್ ರಾಜಾ, ಹರೀಶ್ ಜಯರಾಜ್, ಚಕ್ರಿ, ಆಕಾಶ್, ಕಮಲಾಕರ್, ವಿದ್ಯಾಸಾಗರ್, ಆರ್ ನಾರಾಯಣಮೂರ್ತಿ ಸೇರಿದಂತೆ ಅನೇಕರೊಂದಿಗೆ ಕೆಲಸ ಮಾಡಿದ್ದಾರೆ. ಕಲ್ಯಾಣ್ ಮಲಿಕ್, ಜಿವಿ ಪ್ರಕಾಶ್, ತಮನ್, ಮಿಕ್ಕಿ ಜೇ ಮೇಯರ್, ಚಿರಂತನ್ ಭಟ್, ಅನಿರುದ್ಧ್ ರವಿಚಂದ್ರನ್, ಗೋಪಿ ಸುಂದರ್, ರಘು ಕುಂಚೆ ಮತ್ತು ಇತರರ ಸಂಯೋಜನೆಯಲ್ಲಿ ಬಾಲು ಅವರು ತೆಲುಗು ಉದ್ಯಮಕ್ಕೆ ಅದ್ಭುತವಾದ ಹಾಡುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: ಗಾನ ಗಂಧರ್ವನ ಮೂರನೇ ವರ್ಷದ ಪುಣ್ಯಸ್ಮರಣೆ: ಕರ್ನಾಟಕದ ಜೊತೆ ಎಸ್​ಪಿಬಿ ನಂಟು ಹೀಗಿತ್ತು..

Last Updated : Sep 25, 2023, 6:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.