ETV Bharat / entertainment

ರಂಗಸಮುದ್ರ ಚಿತ್ರದ 'ಹೋಗತ್ಲಾಗ' ಎಂಬ ಪ್ರೇಮಗೀತೆ ಬಿಡುಗಡೆ

ಹಿರಿಯ ನಟ ರಂಗಾಯಣ ರಘು, ಸಂಪತ್ ರಾಜ್ ಹಾಗೂ ಗುರುರಾಜ್ ಹೊಸಕೋಟೆ ಮುಖ್ಯಭೂಮಿಕೆಯಲ್ಲಿರೋ ರಂಗಸಮುದ್ರ ಸಿನಿಮಾ ಹಲವು ವಿಚಾರಗಳು ಗಮನ ಸೆಳೆಯುತ್ತಿದೆ.

Rangasamudra film
ರಂಗಸಮುದ್ರ ಚಿತ್ರದ 'ಹೋಗತ್ಲಾಗ' ಎಂಬ ಪ್ರೇಮಗೀತೆ ಬಿಡುಗಡೆ
author img

By

Published : Feb 15, 2023, 11:03 PM IST

ರಂಗಸಮುದ್ರ ಚಿತ್ರದ 'ಹೋಗತ್ಲಾಗ' ಎಂಬ ಪ್ರೇಮಗೀತೆ ಬಿಡುಗಡೆ

ಬೆಂಗಳೂರು: ಹಿರಿಯ ನಟ ರಂಗಾಯಣ ರಘು, ಸಂಪತ್ ರಾಜ್ ಹಾಗೂ ಗುರುರಾಜ್ ಹೊಸಕೋಟೆ ಮುಖ್ಯಭೂಮಿಕೆಯಲ್ಲಿರೋ ರಂಗಸಮುದ್ರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಗಮನ ಸೆಳೆಯುತ್ತಿದೆ.

'ಕೈಲಾಸ ಭೂಮಿಗಿಳಿದು' ಹಾಡು ಸದ್ದು: ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಿದ್ದ ಕೈಲಾಶ್ ಖೇರ್ ಹಾಡಿರುವ 'ಕೈಲಾಸ ಭೂಮಿಗಿಳಿದು' ಲಿರಿಕಲ್ ಸಾಂಗ್ ಇಂದಿಗೂ ಸದ್ದು ಮಾಡುತ್ತಲೇ ಇದೆ. ಇದರ ಬೆನ್ನಲ್ಲೇ ಗಾಂಧಿನಗರ ತುಂಬೆಲ್ಲಾ ಟಾಕ್ ಆಗಿರುವ ಈ ರೆಟ್ರೋ ಕಥೆಯಾಧರಿತ 'ರಂಗಸಮುದ್ರ' ಚಿತ್ರದ ಎರಡನೇ ಲಿರಿಕಲ್ ವಿಡಿಯೋ ಸಾಂಗ್ ಅನಾವರಣಗೊಂಡಿದೆ.

ಕನ್ನಡದ ಪ್ರೇಮಕವಿ ಎಂದೇ ಮನೆ ಮನದಲ್ಲಿ ಇಂದಿಗೂ ಅಚ್ಚಳಿದಿರುವ ನಾದಬ್ರಹ್ಮ "ಹಂಸಲೇಖ" ಅವರು ಈ ಚಿತ್ರದ 'ಹೋಗತ್ಲಾಗ' ಎಂಬಾ ಕಾಮಿಡಿ ಪ್ರೇಮಗೀತೆಯನ್ನು ಬಿಡುಗಡೆ ಮಾಡಿದ್ದಾರೆ. ದೇಸಿ ಮ್ಯೂಸಿಕ್ ಕಾಲೇಜ್ ಹಂಸಲೇಖರ ಕನಸಿನ ಕೂಸು. ಅದು ಈಗ ಹೆಮ್ಮರವಾಗಿ ಬೆಳೆದಿರುವುದು ಸತ್ಯ ಸಂಗತಿ. ಈ ಶಾಲೆಯ ವಿದ್ಯಾರ್ಥಿಗಳು ಇನ್ನು ಮುಂದೆ ಹಂಸಲೇಖರ ಹೆಸರನ್ನು ಗಗನದೆತ್ತರಕ್ಕೆ ಬೆಳೆಸಬಲ್ಲ ಉತ್ತರಾಧಿಕಾರಿಗಳು ಎಂಬುದು ಹಂಸಲೇಖರ ನಂಬಿಕೆ.

ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ ಈ ಚಿತ್ರ: ಇದೇ 'ದೇಸಿ' ಕಾಲೇಜಿನ ವಿದ್ಯಾರ್ಥಿಗಳು ಈ ಚಿತ್ರಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರದ ನಿರ್ದೇಶಕ ರಾಜ್ ಕುಮಾರ್ ಅಸ್ಕಿ, ಸಂಗೀತ ನಿರ್ದೇಶಕ ದೇಸಿ ಮೋಹನ್ ಮತ್ತು ಈ ಚಿತ್ರದ ಎಲ್ಲಾ ಹಾಡುಗಳ ಸಾಹಿತಿ ವಾಗೀಶ್ ಚನ್ನಗಿರಿ ಇದೇ ಹಂಸಲೇಖರ ಪ್ರಿಯ ಶಿಷ್ಯರು ಎಂಬುದು ಮತ್ತೊಂದು ವಿಶೇಷ. ಹಾಸನ ಹಾಗೂ ಕರ್ನಾಟಕದ ಹಲವು ಭಾಗಗಳಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ ತನ್ನದೇ ಆದ ಪ್ರತಿಷ್ಠೆ ಮತ್ತು ಅಭಿಮಾನಿ ಬಳಗ ಹೊಂದಿರುವ ಹೊಯ್ಸಳ ಕೊಣನೂರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಥೆ ಮನಸ್ಸಿಗೆ ಹತ್ತಿರವಾಗಿರುವ ಕಾರಣಕ್ಕೆ ಈ ಸಿನಿಮಾ ನಿರ್ಮಾಣ ಮಾಡಲು ಒಪ್ಪಿದೆ. ಚಿತ್ರ ತೆರೆ ಮೇಲೆ ಬಂದಾಗ ನನ್ನೊಬ್ಬನಿಗಲ್ಲ ಪ್ರತಿಯೊಬ್ಬ ವೀಕ್ಷಕರಿಗೂ ಇಷ್ಟವಾಗುತ್ತದೆ ಎನ್ನುತ್ತಾರೆ ನಿರ್ಮಾಪಕ ಹೊಯ್ಸಳ ಕೊಣನೂರು.

ಹವಾ ಸೃಷ್ಟಿಸಲು ಹೊರಟಿರುವ ರಂಗಸಮುದ್ರ ಚಿತ್ರ: ಇದೀಗ ಬಿಡುಗಡೆಗೊಂಡಿರುವ ಈ ಉತ್ತರ ಕರ್ನಾಟಕ ಭಾಷೆಯ ಶೈಲಿಯ 'ಹೋಗತ್ಲಾಗ' ಲಿರಿಕಲ್ ಸಾಂಗ್ ಅನ್ನು ಚಿತ್ರದ ಸಂಗೀತ ನಿರ್ದೇಶಕ ದೇಸಿ ಮೋಹನ್ ಅವರೇ ಹಾಡಿದ್ದಾರೆ. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ರಂಗಾಯಣ ರಘು, ಸಂಪತ್ ರಾಜ್, ಗುರುರಾಜ್ ಹೊಸಕೋಟೆ, ಮೋಹನ್ ಜುನೇಜಾ, ಉಗ್ರಂ ಮಂಜು, ಕಾರ್ತಿಕ್ ರಾವ್, ಮೂಗು ಸುರೇಶ್, ದಿವ್ಯ ಗೌಡ, ಸ್ಕಂದ, ಮಹೇಂದ್ರ ಅಭಿನಯಿಸಿದ್ದಾರೆ.

ದಿವಂಗತ ನಟ ಪುನೀತ್ ರಾಜ್​ಕುಮಾರ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಒಪ್ಪಿದ್ದರು. ಆದರೆ, ಅದು ಈಡೇರಲಿಲ್ಲ. ಅದೇ ಪಾತ್ರವನ್ನು ರಾಘವೇಂದ್ರ ರಾಜ್​ಕುಮಾರ್ ಅವರು ನಿರ್ವಹಿಸಿರುವುದು ಖುಷಿಯ ಸಂಗತಿ ಎನ್ನುತ್ತದೆ ಇಡೀ ಚಿತ್ರತಂಡ. ಹೊಸಬರಾದರೂ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹವಾ ಸೃಷ್ಟಿಸಲು ಹೊರಟಿರುವ ರಂಗಸಮುದ್ರ ಚಿತ್ರ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ: ರಿಷಬ್​ ಶೆಟ್ಟಿಗೆ ದಾದಾ ಸಾಹೇಬ್​ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.