ETV Bharat / entertainment

ಬಹುಕಾಲದ ಗೆಳತಿಯೊಂದಿಗೆ ಕಾಣಿಸಿಕೊಂಡ 'ಸ್ವತಂತ್ರ ವೀರ್ ಸಾವರ್ಕರ್' ಚಿತ್ರದ ನಟ : ಮತ್ತೆ ಮದುವೆ ವಿಚಾರ ಮುನ್ನೆಲೆಗೆ - ಈಟಿವಿ ಭಾರತ ಕನ್ನಡ

ಬಾಲಿವುಡ್​ ನಟ ರಣದೀಪ್​ ಹೂಡಾ ಇಂದು ಮುಂಬೈನ್​ ರೆಸ್ಟೋರೆಂಟ್​​​ವೊಂದರ ಬಳಿ ತಮ್ಮ ಬಹುಕಾಲದ ಗೆಳತಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

Randeep Hooda, girlfriend Lin Laishram
Randeep Hooda, girlfriend Lin Laishram
author img

By ETV Bharat Karnataka Team

Published : Nov 20, 2023, 10:06 PM IST

ಹೈದರಾಬಾದ್: ಅದ್ಬುತ ನಟನೆಯಿಂದಲೇ ಅಭಿಮಾನಿಗಳ ಮನ ಗೆದ್ದಿರುವ ನಟ ರಣದೀಪ್ ಹೂಡಾ ಅತಿ ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ತಮ್ಮ ಬಹುಕಾಲದ ಗೆಳತಿ ಲಿನ್ ಲೈಶ್ರಾಮ್ ಅವರೊಂದಿಗೆ ನಟ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದರ ನಡುವೆಯೇ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಕೆರಳಿಸಿದೆ.

ಇಂದು ಮುಂಬೈನ ಬಾಂದ್ರಾದಲ್ಲಿರುವ ವಾಕಿ ಎಂಬ ಜಪಾನೀಸ್ ರೆಸ್ಟೋರೆಂಟ್​ಗೆ ಊಟಕ್ಕೆ ತೆರಳುವಾಗ ಇಬ್ಬರೂ ಒಟ್ಟಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ. ಮೊದಲು ಕಾರಿನಿಂದ ಹೊರ ಬಂದ ರಣದೀಪ್​​ ನಂತರ ತಮ್ಮ ಗೆಳತಿಯೊಂದಿಗೆ ರೆಸ್ಟೋರೆಂಟ್​ ಒಳ ಹೋಗುವ ಮುನ್ನ ಕ್ಯಾಮೆರಾದ ಮುಂದೆ ಒಟ್ಟಿಗೆ ನಿಂತು ಪೋಸ್​ ಕೊಟ್ಟಿದ್ದಾರೆ. ಇದರಿಂದ ಈ ಇಬ್ಬರ ಮದುವೆ ವಿಚಾರ ಮತ್ತೇ ಬಾಲಿವುಡ್​ ಅಂಗಳದಲ್ಲಿ ಹರಿದಾಡಲಾರಂಭಿಸಿದೆ.

ರಣದೀಪ್ ಹೂಡಾ ಮತ್ತು ಲಿನ್ ಲೈಶ್ರಾಮ್ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲವಾದರೂ, ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರು ಜತೆಗಿರುವ ವಿವಿಧ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸೂಕ್ಷ್ಮವಾಗಿ ಸುಳಿವು ನೀಡಿದ್ದಾರೆ. ಮೂಲಗಳ ಪ್ರಕಾರ ರಂದೀಪ್ ಮತ್ತು ಲಿನ್ ಮದುವೆ ಮುಂಬೈನಲ್ಲಿ ನಡೆಯುವುದಿಲ್ಲ ಎಂದು ಹೇಳಲಾಗುತ್ತದೆ. ಅಲ್ಲಿದೇ ತಮ್ಮ ಮದುವೆ ಸಮಾರಂಭಕ್ಕೆ ಆಪ್ತರು ಮತ್ತು ಕುಟುಂಬದವರು ಮಾತ್ರ ಪಾಲ್ಗೊಳ್ಳಲಿದ್ದಾರೆ ಎಂಬ ಬಗ್ಗೆ ಮಾತು ಕೇಳಿ ಬಂದಿವೆ.

ರಣದೀಪ್​ ಹೂಡ ಮುಂಬರುವ ಚಿತ್ರಗಳು: ರಣದೀಪ್​ ಹೂಡಾ ನಟನೆಯೆ ಚಿತ್ರಗಳು ಸದ್ಯದಲ್ಲೇ ಚಿತ್ರಮಂದಿರಗಳಿಗೆ ಅಪ್ಪಳಿಸಲಿವೆ. ಅದರಲ್ಲಿ ಈ ವರ್ಷ ಎರಡು ಚಿತ್ರಗಳು ಬಿಡುಗಡೆಗೊಳ್ಳಿಲಿವೆ. ರಣದೀಪ್​ ನಿರ್ದೇಶಿಸಿ ನಟನೆ ಮಾಡಿರುವ 'ಸ್ವತಂತ್ರ ವೀರ್ ಸಾವರ್ಕರ್' ಎಂಬ ಚಿತ್ರ ಡಿಸೆಂಬರ್​ ಕೊನೆಗೆ ಬಿಡುಗಡೆಕೊಳ್ಳಲಿದೆ. ಈ ಚಿತ್ರವು ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್ ದಾಮೋದರ್ ಸಾವರ್ಕರ್ ಅವರನ್ನು ಆಧರಿಸಿದೆ. ಇವುಗಳ ಹೊರತಾಗಿ, ಅವರು 'ಲಾಲ್ ರಂಗ್ 2: ಖೂನ್ ಚುಸ್ವಾ' ಎಂಬ ಇನ್ನೊಂದು ಚಿತ್ರದಲ್ಲೂ ನಟಿಸುತ್ತಿದ್ದಾರೆ.

ಉಳಿದಂತೆ ಲಿನ್ ಲೈಶ್ರಾಮ್ ಅವರು ಕೂಡ ಉದ್ಯಮಿ, ಮಾಡೆಲ್​ ಮತ್ತು ನಟಿಯಾಗಿದ್ದಾರೆ. ಇವರ ಇತ್ತೀಚೆಗ ಒಟಿಟಿಯಲ್ಲಿ ಬಿಡುಗಡೆಯಾದ 'ಜಾನೆ ಜಾನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಕರೀನಾ ಕಪೂರ್ ಜತೆ ಜೈದೀಪ್ ಅಹ್ಲಾವತ್ ಮತ್ತು ವಿಜಯ್ ವರ್ಮಾ ಅವರೊಂದಿಗೆ ನಟಿಸಿದ್ದಾರೆ. ಉಳಿದಂತೆ ಲಿನ್ ಅವರು 'ಓಂ ಶಾಂತಿ ಓಂ', 'ಮೇರಿ ಕೋಮ್', 'ಮಾತೃ ಕಿ ಬಿಜ್ಲಿ ಕಾ ಮಂಡೋಲಾ', 'ರಂಗೂನ್' ಮತ್ತು 'ಆಕ್ಸನ್' ನಂತಹ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​ನಲ್ಲಿ ಸೋತ ಟೀಂ ಇಂಡಿಯಾದ ಪ್ರಯತ್ನ ಶ್ಲಾಘಿಸಿದ ಆಥಿಯಾ ಶೆಟ್ಟಿ, ಕತ್ರಿನಾ ಕೈಫ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.