ETV Bharat / entertainment

ಆಪ್ತ ಸ್ನೇಹಿತ ಆದಿತ್ಯ ರಾಯ್ ಕಪೂರ್ ಕೆನ್ನೆಗೆ ಚುಂಬಿಸಿದ ರಣ್​ಬೀರ್ ಕಪೂರ್ - ಯೇ ಜವಾನಿ ಹೈ ದೀವಾನಿ

'ಯೇ ಜವಾನಿ ಹೈ ದೀವಾನಿ' ಸಿನಿಮಾದಲ್ಲಿ ಸಹ ನಟನಾಗಿ ಅಭಿನಯಿಸಿದ ಆದಿತ್ಯ ರಾಯ್ ಕಪೂರ್ ಅವರನ್ನು ರಣಬೀರ್ ಕಪೂರ್ ಚುಂಬಿಸಿ ಸ್ವಾಗತಿಸಿದರು.

Ranbir Kapoor
ನಟ ರಣ್​ಬೀರ್ ಕಪೂರ್, ಆದಿತ್ಯ ರಾಯ್ ಕಪೂರ್
author img

By

Published : Jul 16, 2022, 8:45 AM IST

ಮುಂಬೈ: ಬಾಲಿವುಡ್​ ನಟ ರಣ್​ಬೀರ್ ಕಪೂರ್ ಗುರುವಾರ ರಾತ್ರಿ ಮುಂಬೈನಲ್ಲಿ ನಡೆದ ಸ್ಟಾರ್ - ಸ್ಟಡ್ ಸಮಾರಂಭದಲ್ಲಿ ತಮ್ಮ ಆಪ್ತ ಸ್ನೇಹಿತ ಆದಿತ್ಯ ರಾಯ್ ಕಪೂರ್ ಭೇಟಿ ಮಾಡಿ ಅವರೊಂದಿಗೆ ಆಹ್ಲಾದಕರ ಸಮಯ ಕಳೆದರು.

ಕಾರ್ಯಕ್ರಮದಲ್ಲಿ ಆದಿತ್ಯನನ್ನು ನೋಡಿದ ನಂತರ ರಣ್​ಬೀರ್ ಸಂತೋಷದಿಂದ ಅವರತ್ತ ಹೋಗಿ ತಬ್ಬಿಕೊಂಡರು. ಬಳಿಕ ಇಬ್ಬರು ಫೋಟೋಗಳಿಗೆ ಪೋಸ್ ನೀಡಿದರು. ಇದೇ ವೇಳೆ, ನಟ ರಣ್​ಬೀರ್ ಕಪೂರ್​ ಆದಿತ್ಯ ಕೆನ್ನೆಗೆ ಮುತ್ತು ನೀಡಿದ್ದು ಇವರಿಬ್ಬರ ಭೇಟಿಯ ಹೈಲೈಟ್​ ಆಗಿತ್ತು.

Ranbir Kapoor
ಆದಿತ್ಯ ರಾಯ್ ಕೆನ್ನೆಗೆ ಮುತ್ತಿಟ್ಟ ರಣ್​ಬೀರ್ ಕಪೂರ್

2013ರಲ್ಲಿ ಬಿಡುಗಡೆಯಾದ 'ಯೇ ಜವಾನಿ ಹೈ ದೀವಾನಿ' ಚಿತ್ರದಲ್ಲಿ ರಣಬೀರ್ ಮತ್ತು ಆದಿತ್ಯ ಒಟ್ಟಿಗೆ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಇಬ್ಬರು ನಟರೂ ಬ್ಯೂಸಿಯಿದ್ದು, ರಣ್​ಬೀರ್ ​ನಟಿ ವಾಣಿ ಕಪೂರ್ ಜೊತೆಗಿನ 'ಶಂಶೇರಾ' ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ, ಆದಿತ್ಯ ಕಪಿಲ್ ವರ್ಮಾ ನಿರ್ದೇಶನದ 'ಓಂ: ದಿ ಬ್ಯಾಟಲ್ ವಿಥಿನ್' ನಲ್ಲಿ ಆ್ಯಕ್ಷನ್ ಪ್ಯಾಕ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 'ಶಂಶೇರಾ' ಚಿತ್ರ ಇದೇ ಜುಲೈ 22 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: National Nude Day 2022; ಕ್ಯಾಮರಾ ಮುಂದೆ ನಗ್ನರಾದ ಬಾಲಿವುಡ್​​ನ 'ಬೋಲ್ಡ್' ಸುಂದರಿಯರಿವರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.