ETV Bharat / entertainment

ಪುತ್ರಿ ರಾಹಾ ಜೊತೆ ಪ್ರವಾಸಕ್ಕೆ ಹೊರಟ ಆಲಿಯಾ ಭಟ್, ರಣ್​​​ಬೀರ್ ಕಪೂರ್ - ರಣ್​​​ಬೀರ್ ಕಪೂರ್ ಹೊಸ ಸ್ಟೈಲ್​​

ಆಲಿಯಾ ಭಟ್ ಮತ್ತು ರಣ್​​ಬೀರ್ ಕಪೂರ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ranbir alia spotted in new look
ಆಲಿಯಾ ಭಟ್ ರಣ್​​​ಬೀರ್ ಕಪೂರ್
author img

By

Published : Jun 22, 2023, 2:23 PM IST

Updated : Jun 22, 2023, 2:51 PM IST

ಬಾಲಿವುಡ್​ನ ತಾರಾ ದಂಪತಿ ಆಲಿಯಾ ಭಟ್ ಮತ್ತು ರಣ್​​ಬೀರ್ ಕಪೂರ್ ಪುತ್ರಿ ರಾಹಾ ಜೊತೆ ಪ್ರವಾಸಕ್ಕೆ ಹೊರಟಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ರಾಲಿಯಾ ದಂಪತಿ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಇಬ್ಬರೂ ನಟರು ತಮ್ಮ ಮಗು ರಾಹಾ ಜೊತೆ ಹೆಚ್ಚಿನ ಸಮಯ ಕಳೆಯಲು ತಮ್ಮ ವೃತ್ತಿಪರ ಜವಾಬ್ದಾರಿಗಳನ್ನು ಪೂರ್ಣಗೊಳಿಸಿರುವಂತೆ ತೋರುತ್ತಿದೆ. ಪ್ರಸ್ತುತ ಆಲಿಯಾ ಭಟ್​​ ತಮ್ಮ ಮಗುವಿನೊಂದಿಗೆ ತಾಯ್ತನದ ಪ್ರತಿ ಕ್ಷಣವನ್ನು ಆನಂದಿಸಲು ಮುಂದಾಗಿದ್ದಾರೆ. ಅವರ ಮುಂದಿನ ಚಿತ್ರ ಪೂರ್ಣಗೊಂಡು ಬಿಡುಗಡೆ ಹೊಸ್ತಿಲಿನಲ್ಲಿದೆ. ಇತ್ತ ರಣ್​ಬೀರ್​ ಕಪೂರ್​ ಅವರ ಅನಿಮಲ್​ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ.

ಸಂಪೂರ್ಣ ಕಪ್ಪು ಟ್ರ್ಯಾಕ್‌ಸೂಟ್​ನಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ. ಕಡಿಮೆ ಮೇಕ್ಅಪ್, ಸನ್​​ಗ್ಲಾಸ್​ ಧರಿಸಿ ತಮ್ಮ ಏರ್​ಪೋರ್ಟ್​ ಲುಕ್​ ಅನ್ನು ಪೂರ್ಣಗೊಳಿಸಿಕೊಂಡಿದ್ದರು. ಮತ್ತೊಂದೆಡೆ, ರಣ್​​ಬೀರ್ ಹೊಸ ಅವತಾರದಲ್ಲಿ ಕಾಣಿಸಿಕೊಂಡರು.

ಅನಿಮಲ್ ಸಿನಿಮಾ ಪೂರ್ಣಗೊಂಡ ಹಿನ್ನೆಲೆ ನಟ ರಣ್​​​ಬೀರ್​ ಕಪೂರ್​​ ರಗಡ್​ ಲುಕ್​ನಿಂದ ತಮ್ಮ ಚಾಕ್ಲೇಟ್​ ಬಾಯ್​​ ಲುಕ್​​ಗೆ ಮರಳಿದ್ದಾರೆ. ಇತ್ತೀಚೆಗಷ್ಟೇ ಸದ್ದು ಮಾಡಿದ ಅನಿಮಲ್ ಸಿನಿಮಾ ಸೆಟ್​ ಫೋಟೋಗಳಲ್ಲಿ ರಣ್​ಬೀರ್​​ ದಾಡಿ ಬಿಟ್ಟು ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಏರ್​ಪೋರ್ಟ್​ ವಿಡಿಯೋದಲ್ಲಿ ನಟ ಕಂಪ್ಲೀಟ್​ ಕ್ಲೀನ್​ ಶೇವ್​ ಲುಕ್​ನಲ್ಲಿ ಕಂಡುಬಂದರು. ವೈಟ್​ ಶರ್ಟ್​, ವೈಟ್ ಪ್ಯಾಂಟ್​, ಸನ್​ಗ್ಲಾಸ್​​, ಸೈಡ್​​ ಬ್ಯಾಗ್​ ಧರಿಸಿ ರಣ್​​​ಬೀರ್​ ಕಪೂರ್ ಕಾಣಿಸಿಕೊಂಡಿದ್ದಾರೆ. ಮುಂಬೈ ಏರ್​ಪೋರ್ಟ್​ನಲ್ಲಿ ಸಖತ್​ ಕ್ಯೂಟ್ ಆಗಿ ಕಾಣಿಸಿಕೊಂಡಿರುವ ರಾಲಿಯಾ ದಂಪತಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: Satyaprem Ki Katha: ಮನಮೋಹಕ ನೋಟ ಬೀರಿದ ಕಿಯಾರಾ ಅಡ್ವಾಣಿ

ದಂಪತಿಯ ಮುದ್ದು ಮಗಳು ರಾಹಾ ಕೂಡ ಇದ್ದಳು. ಆದರೆ ಫೋಟೋಗಳನ್ನು ಕ್ಲಿಕ್ಕಿಸದಂತೆ ಪಾಪರಾಜಿಗಳಿಗೆ ರಾಲಿಯಾ ದಂಪತಿ ವಿನಂತಿಸಿದರು. ಪಾಪರಾಜಿಗಳು ಈ ಜೋಡಿಯ ಫೋಟೋ, ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, ''ಮುಂಜಾನೆ ಹೀಗಿರಬೇಕು, ಅಂತಿಮವಾಗಿ ಬಹಳ ಸಮಯದ ನಂತರ ರಾಲಿಯಾ ಜೋಡಿಯನ್ನು ಒಟ್ಟಿಗೆ ನೋಡಿದೆ" ಎಂದು ತಿಳಿಸಿದ್ದಾರೆ. ಮತ್ತೋರ್ವ ಅಭಿಮಾನಿ ಪ್ರತಿಕ್ರಿಯಿಸಿ, "ಪ್ರೀತಿಪಾತ್ರರು ಬಹಳ ಸಮಯದ ನಂತರ ಒಟ್ಟಿಗೆ ಕಾಣಿಸಿಕೊಂಡರು" ಎಂದು ಬರೆದಿದ್ದಾರೆ. ಇನ್ನೋರ್ವ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಕ್ರಿಯಿಸಿ, "ಆಲಿಯಾ ಮಗುವಿನಂತೆ ತುಂಬಾ ಮುದ್ದಾಗಿ ಕಾಣುತ್ತಾರೆ ಮತ್ತು ಆರ್‌ಕೆ ಎಂದಿನಂತೆ ಹ್ಯಾಂಡ್​ಸಂ, ಅತ್ಯಂತ ಸುಂದರ ಜೋಡಿ" ಎಂದು ಬರೆದಿದ್ದಾರೆ.

ಇದನ್ನೂ ಓದಿ: 'ಆದಿಪುರುಷ್​​ ನಿರಾಶೆ ಮೂಡಿಸಿದೆ': ರಾಮಾಯಣದ ಲಕ್ಷ್ಮಣ ಪಾತ್ರಧಾರಿ ಸುನಿಲ್ ಲಹರಿ!

ರಣ್​​ಬೀರ್ ಕಪೂರ್​​ ಅವರು ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಇತ್ತೀಚೆಗಷ್ಟೇ ಪ್ರೀ ಟೀಸರ್ ಬಿಡುಗಡೆಯಾಗಿದೆ. ಮೊದಲ ಬಾರಿಗೆ ನ್ಯಾಶನಲ್​ ಕ್ರಶ್​ ಖ್ಯಾತಿಯ ರಶ್ಮಿಕಾ ಮಂದಣ್ಣ ರಣ್​​ಬೀರ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇನ್ನು ಆಲಿಯಾ ಭಟ್​ ರಣ್​ಬೀರ್​ ಸಿಂಗ್​ ಜೊತೆ ನಟಿಸಿರುವ ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

Last Updated : Jun 22, 2023, 2:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.