ETV Bharat / entertainment

ಖಡಕ್ ಡೈಲಾಗ್​ಗಳಿಂದಲೇ ಸೌಂಡ್ ಮಾಡುತ್ತಿರೋ ಶ್ರೇಯಸ್ ಮಂಜು 'ರಾಣ' - ನಿರ್ಮಾಪಕ ಕೆ ಮಂಜು

ರಾಣ ಚಿತ್ರದ ಟ್ರೈಲರ್ ಪಂಚಿಂಗ್ ಡೈಲಾಗ್ ಜೊತೆಗೆ ಶ್ರೇಯಸ್ ಮಂಜು ಎಂಟ್ರಿ, ಆ್ಯಕ್ಷನ್ ನೋಡಿದವರು ರಾಣ ಚಿತ್ರದ ಈ ವರ್ಷದ ಹಿಟ್ ಸಿನಿಮಾಗಳಲ್ಲಿ ಸಾಲಿನಲ್ಲಿ ಒಂದಾಗಲಿದೆ ಅಂತಾ ಭವಿಷ್ಯ ನುಡಿದಿದ್ದಾರೆ.

ರಾಣ ಸಿನಿಮಾ
ರಾಣ ಸಿನಿಮಾ
author img

By

Published : Nov 7, 2022, 6:30 PM IST

ರಾಣ ಪವರ್ ಟೈಟಲ್​ನೊಂದಿಗೆ ಹಾಗೂ ಟ್ರೈಲರ್​ನಿಂದಲೇ ಕನ್ನಡ ಚಿತ್ರರಂಗದಲ್ಲಿ ಬೇಜಾನ್ ಟಾಕ್ ಆಗುತ್ತಿರುವ ಚಿತ್ರ. ಈಗಾಗಲೇ ವಿಷ್ಣುದಾದ ಹಾಗೂ ಪವರ್ ಸ್ಟಾರ್ ಫ್ಯಾನ್ ಆಗಿರುವ ಪಡ್ಡೆಹುಲಿ ಶ್ರೇಯಸ್ ಮಂಜು ಸದ್ಯ ರಾಣ ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸೋದಕ್ಕೆ ಸಜ್ಜಾಗಿದ್ದಾರೆ. ಖ್ಯಾತ ನಿರ್ಮಾಪಕ ಕೆ ಮಂಜು ಮಗನಾಗಿರೋ ಶ್ರೇಯಸ್ ಮಂಜುಗೆ ವಿಷ್ಣುದಾದ ಹಾಗೂ ಅಪ್ಪು ಅವರ ತರ ಅಭಿಮಾನಿಗಳ ಪ್ರೀತಿ ಗಳಿಸಿ ಸ್ಟಾರ್ ಆಗುವ ಕನಸು ಕಂಡಿದ್ದಾರೆ. ಈ ಕನಸಿನೊಂದಿಗೆ ಶ್ರೇಯಸ್ ಮಂಜು ಇದೇ ನವೆಂಬರ್ 11ಕ್ಕೆ ರಾಣನಾಗಿ ಬೆಳ್ಳಿತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

ಅದಕ್ಕೂ ಮುಂಚೆ ರಾಣ ಸಿನಿಮಾದ ತಾಕತ್ ಏನು ಅನ್ನೋದನ್ನ ಹೇಳುತ್ತೇವೆ. ಈಗಾಗ್ಲೇ ರಾಣ ಚಿತ್ರದ ಟ್ರೈಲರ್ ಪಂಚಿಂಗ್ ಡೈಲಾಗ್ ಜೊತೆಗೆ ಶ್ರೇಯಸ್ ಮಂಜು ಎಂಟ್ರಿ, ಆ್ಯಕ್ಷನ್ ನೋಡಿದವರು ರಾಣ ಚಿತ್ರದ ಈ ವರ್ಷದ ಹಿಟ್ ಸಿನಿಮಾಗಳಲ್ಲಿ ಸಾಲಿನಲ್ಲಿ ಒಂದಾಗಲಿದೆ ಅಂತಾ ಭವಿಷ್ಯ ನುಡಿದಿದ್ದಾರೆ. ಅದರಂತೆ ರಾಣ ಚಿತ್ರದ ಹೀರೋ ಹಾಗೂ ಹೀರೋಯಿನ್ ಇಂಟ್ರುಡಕ್ಷನ್ ಟೀಸರ್ ಅನ್ನು ರಿವೀಲ್ ಮಾಡಿದೆ.

ರಾಣಾ ಸಿನಿಮಾ ಟ್ರೈಲರ್

ಮಾಸ್ ಅಭಿಮಾನಿಗಳಿಗೆ ಕಿಕ್: ಸದ್ಯ ಅನಾವರಣಗೊಂಡಿರುವ ನಾಯಕನ ಟೀಸರ್ ನೋಡಿದ್ರೆ ಚಿತ್ರದಲ್ಲಿ ರಾಣನಾಗಿ ಕಾಣಿಸಿಕೊಂಡಿರುವ ಶ್ರೇಯಸ್ ತಮ್ಮ ಪಾತ್ರಕ್ಕೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡು ಫೀಲ್ಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಕಿಕ್ ಕೊಡುವ ಡೈಲಾಗ್​ಗಳು. ಹಳ್ಳಿಯವರು ಅಂದ್ರೆ ಸಾಮಾನ್ಯ ಅಂದುಕೊಳ್ಳಬೇಡ. ಹಳ್ಳಿ ಗಲ್ಲಿಯಲ್ಲಿ ಬೆಳೆದೋರೇ ದಿಲ್ಲಿಯನ್ನು ಆಳೋರೆ.. ನಮಗೋಸ್ಕರ ಇರುವ ರಕ್ಷಕರೇ ಕಣೋ ಈ ಆರಕ್ಷಕರು. ಅಂಥವರ ಮುಂದೆ ಕೈ ಎತ್ತಬೇಕಿರೋದು ಹೊಡೆಯೋದಿಕ್ಕೆ ಅಲ್ಲ. ಸೆಲ್ಯೂಟ್ ಹೊಡೆಯೋಕೆ ಎಂದು ಪಂಚಿಂಗ್ ಡೈಲಾಗ್ಸ್​ ಮಾಸ್ ಅಭಿಮಾನಿಗಳಿಗೆ ಕಿಕ್ ಕೊಡಲಿವೆ.

ರಾಣಾ ಸಿನಿಮಾ ಟ್ರೈಲರ್

ಇನ್ನು, ಶ್ರೇಯಸ್ ಜೋಡಿಯಾಗಿ ಮಿಂಚಿರುವ ಏಕ್ ಲವ್ ಯಾ ಚಿತ್ರದ ಸುಂದರಿ ರಿಷ್ಮಾ ನಾಣಯ್ಯ ಈ ಚಿತ್ರದಲ್ಲಿ ಕೂಡ ಬಹಳ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಶ್ರೇಯಸ್ ಮಂಜು, ರೀಷ್ಮಾ ನಾಣಯ್ಯ ಅಲ್ಲದೇ ರಜಿನಿ ಭರದ್ವಾಜ್, ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಂಡಿರುವ ಸಂಯುಕ್ತಾ ಹೆಗ್ಡೆ, ಕೋಟೆ ಪ್ರಭಾಕರ್ ಸೇರಿದಂತೆ ದೊಡ್ಡ ತಾರ ಬಳಗ ಈ ಚಿತ್ರದಲ್ಲಿದೆ.

ರನ್ನ, ಪೊಗರು ಅಂತಹ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿರೋ ನಿರ್ದೇಶಕ ನಂದ ಕಿಶೋರ್ ಈ ರಾಣ ಸಿನಿಮಾದ ಸೂತ್ರಧಾರ. ಒಂದು ಕಮರ್ಷಿಯಲ್ ಸಿನಿಮಾಗೆ ಬೇಕಾಗುವ, ಎಲಿಮೆಟ್ಸ್ ರಾಣ ಚಿತ್ರದಲ್ಲಿದೆ. ಈ ಚಿತ್ರದ ಬೆನ್ನೆಲುಬಾಗಿ ನಿಂತಿರುವ ನಿರ್ಮಾಪಕ ಕೆ ಮಂಜು ಅರ್ಪಿಸಿ , ಗುಜಾಲ್ ಟಾಕೀಸ್ ಮೂಲಕ ಗುಜಾಲ್ ಪುರುಷೋತ್ತಮ್ ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಕ್ರೇಜ್ ಹುಟ್ಟಿಸಿರುವ ರಾಣ ಚಿತ್ರ: ಈ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣವಿದ್ದು, ಪ್ರಶಾಂತ್ ರಾಜಪ್ಪ ಈ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ. ಸದ್ಯ ಸ್ಯಾಂಡಲ್​ವುಡ್​ನಲ್ಲಿ ಹಲವಾರು ವಿಶೇಷತೆಗಳಿಗೆ ಕ್ರೇಜ್ ಹುಟ್ಟಿಸಿರುವ ರಾಣ ಚಿತ್ರದ ಮೂಲಕ ಶ್ರೇಯಸ್ ಮಂಜ ಸಿನಿಮಾ ಪ್ರೇಮಿಗಳ ಮನಸ್ಸು ಕದಿಯುವ ಎಲ್ಲಾ ಲಕ್ಷಣಗಳು ಕಾಣ್ತಾ ಇದೆ.

ಓದಿ: ಅರಸಯ್ಯ ಪ್ರೇಮಪ್ರಸಂಗ ಚಿತ್ರದ ಪೋಸ್ಟರ್ ಬಿಡುಗಡೆ.. ಶುಭ ಕೋರಿದ ರಾಘಣ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.