ETV Bharat / entertainment

ನಟಿ ರಂಭಾ ಕಾರು ಅಪಘಾತ: ಮಗಳ ಚೇತರಿಕೆಗೆ ಪ್ರಾರ್ಥಿಸುವಂತೆ ಅಭಿಮಾನಿಗಳನ್ನು ಕೇಳಿಕೊಂಡ ತಾರೆ - ರಂಭಾ ನಟನೆಯ ಕನ್ನಡ ಚಿತ್ರಗಳು

ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿರುವ ಬಹುಭಾಷಾ ತಾರೆ ರಂಭಾ ಕಾರು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಕಿರಿಯ ಪುತ್ರಿ ತೀವ್ರವಾಗಿ ಗಾಯಗೊಂಡಿದ್ದು, ಮಗಳ ಚೇತರಿಕೆಗೆ ಪ್ರಾರ್ಥಿಸುವಂತೆ ಅಭಿಮಾನಿಗಳನ್ನು ಅವರು ಕೇಳಿಕೊಂಡಿದ್ದಾರೆ.

90s diva Rambha and her kids meet with car accident in Canada, asks fans to pray for her daughter

author img

By

Published : Nov 1, 2022, 2:03 PM IST

Updated : Nov 1, 2022, 3:12 PM IST

ಹೈದರಾಬಾದ್: ನಟಿ ರಂಭಾ ಕಾರು ಅಪಘಾತಕ್ಕೀಡಾಗಿದೆ. ಈ ಘಟನೆ ಕೆನಡಾದಲ್ಲಿ ಸಂಭವಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅವರು ಬಹಿರಂಗಪಡಿಸಿದ್ದಾರೆ. ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹಿಂತಿರುಗುತ್ತಿದ್ದಾಗ ನಮ್ಮ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸಣ್ಣಪುಟ್ಟ ಗಾಯಗಳೊಂದಿಗೆ ತಾವು ಪಾರಾಗಿರುವುದಾಗಿ ಅವರು ತಿಳಿಸಿದ್ದಾರೆ.

'ಎಂದಿನಂತೆ ಇಂದು ಸಹ (ಮಂಗಳವಾರ) ನಾನು ನನ್ನ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಹಿಂದಿರುಗುತ್ತಿದ್ದೆ. ಈ ವೇಳೆ ನಮ್ಮ ಕಾರಿಗೆ ಮಗದೊಂದು ಕಾರು ಸಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಿರಿಯ ಮಗಳು ಸಾಶಾ ಹೊರತುಪಡಿಸಿ ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಅಪಘಾತದಿಂದ ಪಾರಾಗಿದ್ದೇವೆ' ಎಂದು ನಟಿ ಹೇಳಿದ್ದಾರೆ.

ಅಲ್ಲದೆ, ಕಿರಿಯ ಪುತ್ರಿ ಸಾಶಾ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಪುತ್ರಿಯ ಫೋಟೋ ಸೇರಿದಂತೆ ಅಪಘಾತಕದಿಂದ ಜಖಂಗೊಂಡ ತಮ್ಮ ಕಾರಿನ ಫೋಟೊಗಳನ್ನು ರಂಭಾ ಪೋಸ್ಟ್ ಮಾಡಿದ್ದಾರೆ.

90ರ ದಶಕದಲ್ಲಿ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿರುವ ಬಹುಭಾಷಾ ತಾರೆ ರಂಭಾ ಸೌತ್​ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರು. ಕ್ರೇಜಿಸ್ಟಾರ್​ ರವಿಚಂದ್ರನ್​, ಸೂಪರ್​ ಸ್ಟಾರ್​ ರಜನಿಕಾಂತ್, ಮೆಘಾಸ್ಟಾರ್​ ಚಿರಂಜೀವಿ, ಮಮ್ಮುಟ್ಟಿ, ಸಲ್ಮಾನ್ ಖಾನ್, ಅಜಿತ್ ಮತ್ತು ವಿಜಯ್ ಮುಂತಾದವರ ಜೊತೆ ಅವರು ಪರದೆಯನ್ನು ಹಂಚಿಕೊಂಡಿದ್ದಾರೆ.

‘ಸರ್ವರ್ ಸೋಮಣ್ಣ’ ಚಿತ್ರದ ಮೂಲಕ ಕನ್ನಡ ಸಿನಿರಸಿಕರಿಗೆ ಪರಿಚಯವಾದ ರಂಭಾ, 'ಕೆಂಪಯ್ಯ ಐಪಿಎಸ್', 'ಓ ಪ್ರೇಮವೇ', 'ಬಾವ ಬಾಮೈದ', 'ಸಾಹುಕಾರ', 'ಪಾಂಡು ರಂಗ ವಿಠಲ', 'ಗಂಡುಗಲಿ ಕುಮಾರ ರಾಮ', 'ಅನಾಥರು' ಮುಂತಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: 49ನೇ ವಸಂತಕ್ಕೆ ಕಾಲಿಟ್ಟ ಐಶ್ವರ್ಯಾ ರೈ: ಇವರು ಈಗಲೂ ದಂತದ ಗೊಂಬೆಯಂತೆ ಕಾಣುವ ಸೌಂದರ್ಯದ ಗಣಿ

Last Updated : Nov 1, 2022, 3:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.