ETV Bharat / entertainment

'ಆರ್​ಆರ್​ಆರ್'​ ತಾರೆ ರಾಮ್‌ಚರಣ್‌ ಅವರ​ ಹೊಸ ಫ್ರೆಂಡ್ ಇವರೇ ನೋಡಿ! - ರಾಮ್ ಚರಣ್ ಮುಂದಿನ ಸಿನಿಮಾ

Ram Charan shares Horse Photo: ಆರ್​ಆರ್​ಆರ್​ ಸ್ಟಾರ್ ರಾಮ್ ಚರಣ್ ತಮ್ಮ ಕುದುರೆ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಶೇರ್ ಮಾಡಿದ್ದಾರೆ.

Ram Charan horse blaze
ನಟ ರಾಮ್ ಚರಣ್ ಕುದುರೆ
author img

By ETV Bharat Karnataka Team

Published : Oct 3, 2023, 5:59 PM IST

ವಿಶ್ವಾದ್ಯಂತ ಧೂಳೆಬ್ಬಿಸಿದ 'ಆರ್​ಆರ್​ಆರ್' ಸಿನಿಮಾ​ ಖ್ಯಾತಿಯ ನಟ ರಾಮ್ ಚರಣ್‌ಗೆ ಪ್ರಾಣಿಗಳಂದ್ರೆ ಅಚ್ಚುಮೆಚ್ಚು. ಇವರ ಪೆಟ್​ ಫ್ಯಾಮಿಲಿಗೆ ಹೊಸ ಸದಸ್ಯ ಬಂದಿದ್ದಾರೆ. ದಕ್ಷಿಣ ಚಿತ್ರರಂಗದ ಈ ಸೂಪರ್​ ಸ್ಟಾರ್ ಇಂದು ತಮ್ಮ 'ಹೊಸ ಸ್ನೇಹಿತ'ನನ್ನು ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದರು.

ರಾಮ್​ ಚರಣ್​​​​ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಅಕೌಂಟ್​ನಲ್ಲಿ ಕುದುರೆಯೊಂದಿಗಿನ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಪ್ಪು ಟಿ ಶರ್ಟ್, ಸನ್​​ಗ್ಲಾಸ್​​ ಧರಿಸಿ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿರುವ ಅವರು ತಮ್ಮ "ಹೊಸ ಸ್ನೇಹಿತ" ನೊಂದಿಗೆ ನಿಂತು ಕ್ಯಾಮರಾಗೆ ಪೋಸ್ ಕೊಡುತ್ತಿರುವುದನ್ನು ಚಿತ್ರದಲ್ಲಿ ನೋಡಬಹುದು. ಒಂದು ಚಿತ್ರದಲ್ಲಿ ಕುದುರೆ ಜೊತೆ ಪೋಸ್ ನೀಡಿದ್ದರೆ, ಇನ್ನೊಂದರಲ್ಲಿ ಕುದುರೆಯ ಕಾಳಜಿ ವಹಿಸುತ್ತಿರುವುದನ್ನು ಗಮನಿಸಹುದು.

ಕುದುರೆ ಸವಾರಿ ಕೌಶಲ್ಯ: ಫೋಟೋ ಪೋಸ್ಟ್‌ ಮಾಡಿರುವ ನಟ, "BLAZE! ನನ್ನ ಹೊಸ ಸ್ನೇಹಿತ!" ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ ಶೇರ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮಗಧೀರ, ಆರ್​ಆರ್​ಆರ್​ನಂತಹ ಚಿತ್ರಗಳಲ್ಲಿ ರಾಮ್‌ ಚರಣ್‌ ಕುದುರೆ ಸವಾರಿ ಕೌಶಲ್ಯವನ್ನು ಅಭಿಮಾನಿಗಳು ಕಂಡಿದ್ದಾರೆ. ಅಭಿಮಾನಿಯೋರ್ವರು, "ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ನಂಬರ್ ಒನ್​​ ಹಾರ್ಸ್ ರೈಡರ್" ಎಂದಿದ್ದಾರೆ. ಮತ್ತೋರ್ವ ಅಭಿಮಾನಿ, "ಮಗಧೀರ 2 ಗಾಗಿ ಕುದುರೆ ರೆಡಿ" ಎಂದು ತಿಳಿಸಿದ್ದಾರೆ.

'ಗೇಮ್ ಚೇಂಜರ್': ಬ್ಲಾಕ್​ಬಸ್ಟರ್ ಆರ್​ಆರ್​ಆರ್ ಮೂಲಕ ವಿಶ್ವಾದ್ಯಂತ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ನಟನ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಗೇಮ್ ಚೇಂಜರ್'. ಶಂಕರ್ ಅವರು ಆ್ಯಕ್ಷನ್​ ಕಟ್​ ಹೇಳುತ್ತಿರುವ ಮೋಸ್ಟ್ ಎಕ್ಸ್​​ಪೆಕ್ಟೆಡ್​​ ಆ್ಯಕ್ಷನ್​ ಮೂವಿಯಲ್ಲಿ ರಾಮ್ ಚರಣ್ ಜೊತೆಗೆ ಬಾಲಿವುಡ್​ ಬ್ಯೂಟಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಸೇರಿ ಮೂರು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ವೆಂಕಟೇಶ್ವರ ಕ್ರಿಯೇಷನ್ಸ್‌ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ. ಎಸ್‌ಜೆ ಸೂರ್ಯ, ಜಯರಾಮ್, ಅಂಜಲಿ ಮತ್ತು ಶ್ರೀಕಾಂತ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Thalaivar 170: ರಜನಿಕಾಂತ್​ ಜೊತೆ ರಾಣಾ ದಗ್ಗುಬಾಟಿ ಸ್ಕ್ರೀನ್​ ಶೇರ್ - 'ತಲೈವರ್ 170' ಮೇಲೆ ಹೆಚ್ಚಿದ ಕುತೂಹಲ

ಮುಂದಿನ ಸಿನಿಮಾ ಕುತೂಹಲ: ರಾಮ್​ಚರಣ್​ ಕೊನೆಯದಾಗಿ ಆರ್​ಆರ್​ಆರ್‌ನಲ್ಲಿ ಕಾಣಿಸಿಕೊಂಡಿದ್ದರು. ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ಜೂನಿಯರ್​ ಎನ್​ಟಿಆರ್​ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಆಲಿಯಾ ಭಟ್​, ಅಜಯ್​ ದೇವ್​ಗನ್​​ ಪ್ರಮುಖ ಪಾತ್ರದಲ್ಲಿದ್ದ ಸಿನಿಮಾ 2023ರ ಮಾರ್ಚ್ 24ರಂದು ತೆರೆಕಂಡು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತ್ತು. ಪ್ರತಿಷ್ಠಿತ ಆಸ್ಕರ್​ ಗೌರವಕ್ಕೂ ಪಾತ್ರವಾಗಿತ್ತು​. ಈ ಮೂಲಕ ಜಗತ್ತಿನಾದ್ಯಂತ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ರಾಮ್​ ಚರಣ್​ ಮುಖ್ಯಭೂಮಿಕೆಯ ಮುಂದಿನ ಸಿನಿಮಾ ಗೇಮ್​ ಚೇಂಜರ್​ ಮೇಲೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆಗಳಿವೆ.

ಇದನ್ನೂ ಓದಿ: ಯೋಧ ಸಿನಿಮಾಗೂ ಮುನ್ನ ತೆರೆಗಪ್ಪಳಿಸಲಿದೆ ಮೆರಿ ಕ್ರಿಸ್ಮಸ್: ಡಿಸೆಂಬರ್​ನಲ್ಲಿ ಬಾಕ್ಸ್ ಆಫೀಸ್​ ಪೈಪೋಟಿ ಜೋರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.