ಆರ್ಆರ್ಆರ್ ಮೂಲಕ ವಿಶ್ವದಾದ್ಯಂತ ಭಾರಿ ಮನ್ನಣೆ ಗಳಿಸಿರುವ ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ಸದ್ಯ 'ಗೇಮ್ ಚೇಂಜರ್' ಸಲುವಾಗಿ ಸುದ್ದಿಯಲ್ಲಿದ್ದಾರೆ. ರಾಮ್ ತಮ್ಮ ಅತ್ಯದ್ಭುತ ಅಭಿನಯದ ಮೂಲಕ ಉನ್ನತ ಮಟ್ಟಕ್ಕೆ ಏರಿದ್ದಾರೆ. ಸದ್ಯ ಅವರ ಪ್ರತೀ ಸೇಟ್ಸ್ಮೆಂಟ್ಸ್ ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡುತ್ತಿವೆ. ಇತ್ತೀಚೆಗಷ್ಟೇ ತಂದೆಯಾಗಿ ಬಡ್ತಿ ಪಡೆದಿರುವ ರಾಮ್ ಚರಣ್ ಅವರ ಇತ್ತೀಚಿನ ಹೇಳಿಕೆಗಳು ಸಖತ್ ಸದ್ದು ಮಾಡುತ್ತಿವೆ..
ಸಾಮಾನ್ಯವಾಗಿ ದೇಶಾದ್ಯಂತದ ಸೂಪರ್ ಸ್ಟಾರ್ಗಳ ಪೈಕಿ ಯಾರ ಫ್ಯಾಷನ್ ಸೆನ್ಸ್ ಇಷ್ಟ ಎಂದು ಯಾರಾದರೂ ಕೇಳಿದರೆ ಸಹಜವಾಗಿ ರಣ್ವೀರ್ ಸಿಂಗ್, ಶಾರುಖ್ ಖಾನ್, ಹೃತಿಕ್ ರೋಷನ್ ಕೇಳಿದಂತೆ ಇನ್ನೂ ಕೆಲವರ ಹೆಸರು ಬರುತ್ತವೆ. ಅಭಿಮಾನಿಗಳು ಮಾತ್ರವಲ್ಲದೇ ಸ್ಟಾರ್ ಹೀರೋಗಳು ಸಹ ಈ ನಟರ ಹೆಸರನ್ನು ಪ್ರಸ್ತಾಪಿಸುತ್ತಾರೆ. ಈ ಹಿಂದೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಕೂಡ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಅವರ ನಟನೆ ಮತ್ತು ಡ್ರೆಸ್ಸಿಂಗ್ ಸೆನ್ಸ್ ಅನ್ನು ಇಷ್ಟಪಡುವುದಾಗಿ ತಿಳಿಸಿದ್ದರು.
ಆದ್ರೀಗ ಬಹುಬೇಡಿಕೆ ನಟ ರಾಮ್ ಚರಣ್ ಸಂದರ್ಶನವೊಂದರಲ್ಲಿ ಯಾರೂ ನಿರೀಕ್ಷಿಸದ ಹೆಸರನ್ನು ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಆರ್ಆರ್ಆರ್ ಸ್ಟಾರ್ ಕೊಟ್ಟಿದ್ದು, ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಹೆಸರನ್ನು. ಹೌದು, ಅವರ ಫ್ಯಾಷನ್ ಸೆನ್ಸ್ ಮತ್ತು ಸ್ಟೈಲ್ ನನಗೆ ಇಷ್ಟವಾಗಿದೆ ಎಂದು ರಾಮ್ ಚರಣ್ ತಿಳಿಸಿದ್ದಾರೆ. ಸೈಫ್ ಅವರಲ್ಲಿ ರಾಜಮನೆತನದ ಠೀವಿ ಮತ್ತು ವರ್ಚಸ್ಸು ಇದೆ. ಅವರು ಯಾವುದನ್ನು ಆಡಂಬರ ಮಾಡುವುದಿಲ್ಲ. ಅವರು ಬಹಳ ಸರಳ ಎಂದು ರಾಮ್ ಚರಣ್ ತಿಳಿಸಿದರು.
ಅಲ್ಲದೇ ನಾಯಕಿಯರ ಪೈಕಿ ಹಿಂದಿ ಚಿತ್ರರಂಗದ ಜನಪ್ರಿಯ ನಟಿ ದೀಪಿಕಾ ಪಡುಕೋಣೆ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ದೀಪಿಕಾರ ಫ್ಯಾಷನ್ ಸೆನ್ಸ್ ಎಂದರೆ ನನಗೆ ತುಂಬಾ ಇಷ್ಟ ಎಂದಿದ್ದಾರೆ.
ಇದನ್ನೂ ಓದಿ: Tamannaah Bhatia: ಕೆಂಪಂಗಿ ತೊಟ್ಟು ಕಿಲ್ಲರ್ ಲುಕ್ ಕೊಟ್ಟ ತಮನ್ನಾ ಭಾಟಿಯಾ ನೋಟಕ್ಕೆ ಬೆರಗಾದ ನೆಟ್ಟಿಗ!
ರಾಮ್ ಚರಣ್ ಮುಂದಿನ ಸಿನಿಮಾ ಗಮನಿಸುವುದಾದರೆ, 'ಗೇಮ್ ಚೇಂಜರ್' ನಲ್ಲಿ ಬ್ಯುಸಿಯಾಗಿದ್ದಾರೆ. ಶಂಕರ್ ಆ್ಯಕ್ಷನ್ ಕಟ್ ಹೇಳುತ್ತಿರುವ 'ಗೇಮ್ ಚೇಂಜರ್' ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 2019 ರಲ್ಲಿ ಬಿಡುಗಡೆಯಾದ ವಿನಯ ವಿಧೇಯ ರಾಮ ಸಿನಿಮಾದಲ್ಲಿ ಈ ಜೊಡಿ ಕೆಲಸ ಮಾಡಿದ್ದರು. ಇದೀಗ ಎರಡನೇ ಬಾರಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ನಾಳೆ ನಟಿ ಕಿಯಾರಾ ಅಡ್ವಾಣಿ ಜನ್ಮದಿನ ಹಿನ್ನೆಲೆ, ಚಿತ್ರದಿಂದ ಅಪ್ಡೇಟ್ಸ್ ನಿರೀಕ್ಷಿಸುತ್ತಿದ್ದಾರೆ. ಕಿಯಾರಾ ಅಡ್ವಾಣಿ ಫಸ್ಟ್ ಲುಕ್ ಅನಾವರಣಗೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ: Deepika Padukone: ಗಂಡನ ಸಿನಿಮಾ ವೀಕ್ಷಿಸಿದ ದೀಪಿಕಾ ಪಡುಕೋಣೆ; ಜಾಕೆಟ್ನಲ್ಲಿ ರಣ್ವೀರ್ ಭಾವಚಿತ್ರ