ETV Bharat / entertainment

ರಾಮ್​ಚರಣ್​ ಸಿನಿ ಪಯಣಕ್ಕೆ 16ರ ಸಂಭ್ರಮ​; ಪ್ರೀತಿಯ ಪೋಸ್ಟ್​ ಹಂಚಿಕೊಂಡ ಉಪಾಸನಾ - Sweet sixteen

'ಆರ್​ಆರ್​ಆರ್'​ ಖ್ಯಾತಿಯ ನಟ ರಾಮ್​ಚರಣ್​ ಚಿತ್ರರಂಗದಲ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂತಸದ ವಿಚಾರವನ್ನು ಅವರ ಪತ್ನಿ ಉಪಾಸನಾ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Ram Charan marks 16th anniversary in films, wife Upasana Kamineni shares endearing post: 'Sweet sixteen'
ರಾಮ್​ಚರಣ್​ ಸಿನಿ ಪಯಣಕ್ಕೆ 16ರ ಸಂಭ್ರಮ​; ಪ್ರೀತಿಯ ಪೋಸ್ಟ್​ ಹಂಚಿಕೊಂಡ ಉಪಾಸನಾ
author img

By ETV Bharat Karnataka Team

Published : Sep 28, 2023, 8:17 PM IST

ಮೆಗಾಸ್ಟಾರ್​ ಚಿರಂಜೀವಿ ಅವರ ಪುತ್ರ ರಾಮ್​ಚರಣ್​ ತೆಲುಗು ಚಿತ್ರರಂಗದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ನಟರಲ್ಲಿ ಒಬ್ಬರು. ಎಸ್​ಎಸ್​ ರಾಜಮೌಳಿ ನಿರ್ದೇಶನದ 'ಆರ್​ಆರ್​ಆರ್'​ ಸಿನಿಮಾ ಮೂಲಕ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದಾರೆ. ಇವರು ಚಿತ್ರರಂಗದಲ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂತಸದ ವಿಚಾರವನ್ನು ಹಂಚಿಕೊಳ್ಳಲು ಅವರ ಪತ್ನಿ ಉಪಾಸನಾ ಕಾಮಿನೇನಿ ಸೋಷಿಯಲ್​ ಮೀಡಿಯಾವನ್ನು ವೇದಿಕೆಯನ್ನಾಗಿ ಬಳಸಿಕೊಂಡರು.

ರಾಮ್​ಚರಣ್​ ಅವರ ಈವರೆಗಿನ ಸಿನಿಮಾಗಳ ಕೆಲವು ನೋಟಗಳನ್ನು ಕೊಲಾಜ್​ ಮಾಡಿ ಹಂಚಿಕೊಂಡಿದ್ದಾರೆ. ಅದಕ್ಕೆ 'Sweet sixteen' ಎಂದು ಕ್ಯಾಪ್ಶನ್​ ನೀಡಿದ್ದಾರೆ. 2007ರಲ್ಲಿ 'ಚಿರುತಾ' ಚಿತ್ರದ ಮೂಲಕ ತಮ್ಮ ಬಣ್ಣದ ಲೋಕಕ್ಕೆ ಕಾಲಿಟ್ಟ ಸ್ಟಾರ್ ನಟ ರಾಮ್​ಚರಣ್ ನಂತರ ಮಗಧೀರ, ರಂಗಸ್ಥಳಂ, ಆರ್‌ಆರ್‌ಆರ್​ ನಂತಹ ಹಲವಾರು ಬ್ಲಾಕ್​ಬಸ್ಟರ್ ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಆದ್ರೆ, ಈ ಮೂರು ಚಿತ್ರಗಳಲ್ಲಿ ಅವರು ನಟಿಸಿರುವ ಪಾತ್ರಗಳು ಮಾತ್ರ ವೃತ್ತಿಜೀವನದ ಅತ್ಯುತ್ತಮ ಆಯ್ಕೆ ಎಂದೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

Ram Charan marks 16th anniversary in films, wife Upasana Kamineni shares endearing post: 'Sweet sixteen'
ರಾಮ್​ಚರಣ್​ ಸಿನಿ ಪಯಣಕ್ಕೆ 16ರ ಸಂಭ್ರಮ​; ಪ್ರೀತಿಯ ಪೋಸ್ಟ್​ ಹಂಚಿಕೊಂಡ ಉಪಾಸನಾ

2009 ರಲ್ಲಿ ಬಿಡುಗಡೆಯಾದ 'ಮಗಧೀರ' ರಾಮ್​ಚರಣ್​ ನಟನೆಯ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದು. ಎಸ್​ಎಸ್​ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ಚಿತ್ರವು 17ನೇ ಶತಮಾನದ ಯೋಧನ ಕಥೆ ಒಳಗೊಂಡಿದೆ. ಅಷ್ಟೇ ಅಲ್ಲ, ರಾಮ್​ಚರಣ್​ ಕಾಲ ಭೈರವನ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ. ರಾಜ್ಯಕ್ಕಾಗಿ ಹೋರಾಡುವ ತನ್ನ ಪ್ರಾಣವನ್ನೇ ತ್ಯಜಿಸುವ ವೀರ ಯೋಧನ ಕಥೆ ಇದಾಗಿದೆ.

'ರಂಗಸ್ಥಳಂ' 2018 ರಲ್ಲಿ ಬಿಡುಗಡೆಯಾದ ಸಿನಿಮಾ. ಇದು ತೆಲುಗು ಚಿತ್ರರಂಗದಲ್ಲಿ ಅಗ್ರ ನಟರ ಸ್ಥಾನದಲ್ಲಿ ರಾಮ್​ಚರಣ್​ ಹೆಸರನ್ನು ಮತ್ತಷ್ಟು ಭದ್ರಪಡಿಸಿತು. ತೆಲುಗಿನ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಇದೂ ಒಂದು. 60 ಕೋಟಿ ರೂಪಾಯಿ ಬಜೆಟ್​ನಲ್ಲಿ ತಯಾರಾದ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ 216 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿತ್ತು.

ಇದನ್ನೂ ಓದಿ: Oscar Members: ರಾಮ್ ಚರಣ್, ಜೂ. ಎನ್​ಟಿಆರ್​ ಸೇರಿ ಹಲವು ಭಾರತೀಯರಿಗೆ ಸಿಕ್ತು ಆಸ್ಕರ್​ ಸದಸ್ಯತ್ವ

ಸುಕುಮಾರನ್​ ನಿರ್ದೇಶನದ ಸಿನಿಮಾವು 1980ರ ದಶಕದಲ್ಲಿ ಹಳ್ಳಿಯೊಂದರಲ್ಲಿ ನಡೆಯುವ ಕಥೆ ಆಧರಿಸಿದೆ. ಗ್ರಾಮದ ಅಧ್ಯಕ್ಷರ ದೌರ್ಜನ್ಯದ ವಿರುದ್ಧ ತುಳಿತಕ್ಕೊಳಗಾದವರ ಧ್ವನಿಯಾಗುವ ಶ್ರವಣದೋಷವುಳ್ಳ ಚಿಟ್ಟಿ ಬಾಬು ಕಥೆ ಇದರಲ್ಲಿದೆ. ಈ ಸಿನಿಮಾದಲ್ಲಿ ರಾಮ್​ಚರಣ್​ಗೆ ಜೋಡಿಯಾಗಿ ಸಮಂತಾ ರುತ್​ ಪ್ರಭು ನಟಿಸಿದ್ದಾರೆ. ಇವರಲ್ಲದೇ ಆದಿ ಪಿನಿಸೆಟ್ಟಿ, ಪ್ರಕಾಶ್​ ರಾಜ್​, ಅನುಸೂಯಾ ಭಾರದ್ವಾಜ್​ ಮತ್ತು ಜಗಪತಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಸಿನಿ ವೃತ್ತಿಯಲ್ಲಿ ರಾಮ್​ಚರಣ್​ 16 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಸೆಪ್ಟೆಂಬರ್​ 27 ರಂದು ಮರು ಬಿಡುಗಡೆ ಮಾಡಲಾಗಿದೆ. ಶ್ರೀಕಾಕುಳಂ, ವಿಜಯನಗರಂ, ವೈಜಾಗ್​, ರಾಜಮಂಡ್ರಿ, ನೆಲ್ಲೂರು ಮತ್ತು ಅನಂತಪುರಂನ ಥಿಯೇಟರ್​ಗಳಲ್ಲಿ 'ರಂಗಸ್ಥಳಂ' ಪ್ರದರ್ಶನ ಕಂಡಿದೆ.

ಇದಲ್ಲದೇ ರಾಮ್​ಚರಣ್​ಗೆ ಮತ್ತೊಂದು ಯಶಸ್ಸು ತಂದುಕೊಟ್ಟ ಚಿತ್ರ ಆರ್​ಆರ್​ಆರ್​. ಎಸ್​ಎಸ್​ ರಾಜಮೌಳಿ ನಿರ್ದೇಶನದ ಈ ಸಿನಿಮಾ ಇಡೀ ಜಗತ್ತಿಗೆ ನಟ ರಾಮ್ ಚರಣ್ ಹೆಸರನ್ನು ಪರಿಚಯಿಸಿತು. ಇಬ್ಬರು ಮಹಾನ್ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಕಾಲ್ಪನಿಕ ಕಥೆಯಲ್ಲಿ ರಾಮ್ ಚರಣ್ ಅವರು 20ನೇ ಶತಮಾನದ ಆರಂಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮತ್ತು ದೇಶಭಕ್ತ ನಾಯಕ ಅಲ್ಲೂರಿ ಸೀತಾರಾಮ ರಾಜು ಪಾತ್ರ ನಿರ್ವಹಿಸಿದ್ದಾರೆ. ಈ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದ ನಟ, ಜೇಮ್ಸ್ ಕ್ಯಾಮರೂನ್ ಅವರಿಂದಲೂ ಪ್ರಶಂಸೆ ಗಳಿಸಿಕೊಂಡರು.

ಇದನ್ನೂ ಓದಿ: ಫ್ರಾನ್ಸ್​ ಪ್ರವಾಸದಲ್ಲಿ ರಾಮ್​ಚರಣ್​ ದಂಪತಿ; ಮುಂದಿನ ವಾರ 'ಗೇಮ್​ ಚೇಂಜರ್'​ ಶೂಟಿಂಗ್​ ಪುನಾರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.