ETV Bharat / entertainment

ಬೆಂಗಳೂರಿನಲ್ಲಿ ರಾಮ್​ ಚರಣ್ - ಉಪಾಸನಾ: ಸಂಕ್ರಾಂತಿ ಸಂಭ್ರಮದಲ್ಲಿ ತಾರಾ ಕುಟುಂಬ - ಉಪಾಸನಾ

ರಾಮ್ ಚರಣ್ ಅವರು ಪತ್ನಿ ಉಪಾಸನಾ ಮತ್ತು ಪುತ್ರಿ ಕ್ಲಿನ್​ ಕಾರಾ ಜೊತೆ ಬೆಂಗಳೂರಿಗೆ ಆಗಮಿಸಿದ್ದಾರೆ

Ram Charan Upasana Sankranti celebrations
ಸಂಕ್ರಾತಿ ಸಂಭ್ರಮದಲ್ಲಿ ರಾಮ್​ ಚರಣ್ ಉಪಾಸನಾ
author img

By ETV Bharat Karnataka Team

Published : Jan 13, 2024, 6:47 PM IST

ಭಾರತೀಯರಿಗೆ ವಿಶೇಷವಾಗಿ ತೆಲುಗು ಮಂದಿಗೆ 'ಸಂಕ್ರಾಂತಿ' ಮಹತ್ವದ ಹಬ್ಬಗಳಲ್ಲೊಂದು. 'ಸಂಕ್ರಾತಿ' ಸುಗ್ಗಿ, ಗಾಳಿಪಟ, ಸಿಹಿತಿಂಡಿ, ಹೊಸ ವರ್ಷ ಆರಂಭದಂತಹ ವಿಚಾರಗಳನ್ನು ಸಂಕೇತಿಸುತ್ತದೆ. ಇಂದು ಆರ್​ಆರ್​ಆರ್​ ಸ್ಟಾರ್ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ಅವರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಸ್ಟೋರಿನಲ್ಲಿ ಸರಣಿ ಫೋಟೋ - ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಸಂಕ್ರಾತಿ ಸಂಭ್ರಮದ ಕ್ಷಣಗಳು ಇದಾಗಿವೆ.

ಸಂಕ್ರಾಂತಿ ಸಂಭ್ರಮದ ಹಲವು ಗ್ಲಿಂಪ್ಸ್‌ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಉಪಾಸನಾ ಹಂಚಿಕೊಂಡಿದ್ದಾರೆ. ಮೊದಲ ಫೋಟೋ, ಸುಂದರವಾಗಿ ಅಲಂಕೃತಗೊಂಡ ಮನೆಯನ್ನು ತೊರಿಸಿದೆ. ಫೋಟೋ ಶೇರ್ ಮಾಡುತ್ತಾ, "ಎಲ್ಲ ಆಹಾರ ಪ್ರೇಮಿಗಳಿಗಾಗಿ, ಸ್ಟೇ ಟ್ಯೂನ್ಡ್!!" ಎಂದು ಬರೆಕೊಂಡಿದ್ದಾರೆ. ಅಪ್ಪುಗೆ ಮತ್ತು ಹಾರ್ಟ್ ಫೇಸ್ ಎಮೋಜಿಯೊಂದಿಗೆ ಸ್ಟೋರಿ ಶೇರ್ ಮಾಡಿದ್ದಾರೆ. ನಂತರ ಬಂದ ದೃಶ್ಯಗಳು ತಿಂಡಿ - ತಿನಿಸು, ಆಹಾರ ತಯಾರಿಕೆಗೆ ಸಂಬಂಧಿಸಿದ್ದಾಗಿದೆ.

ಇಂದೇ ಶೇರ್ ಆದ ವಿಡಿಯೋವೊಂದರಲ್ಲಿ ಮಗಳು ಕ್ಲಿನ್ ಕಾರಾ ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಬೆಂಗಳೂರಿಗೆ ಹೊರಡುವ ಮೊದಲು ಹೈದರಾಬಾದ್​ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡಿದ್ದು, ಪಾಪರಾಜಿಗಳು ವಿಡಿಯೋ ಶೇರ್ ಮಾಡಿದ್ದಾರೆ. ಪವರ್​ಫುಲ್​ ಕಪಲ್​ ಎಂದಿನಂತೆ ತಮ್ಮ ಮುದ್ದಿನ ಶ್ವಾನ ರಿದಮ್ ಜೊತೆ ಪ್ರಯಾಣ ಬೆಳೆಸಿದರು. ಅಲ್ಲದೇ ಪುತ್ರಿ ಕ್ಲಿನ್​ ಕಾರಾಗಿದು ಮೊದಲ ಸಂಕ್ರಾಂತಿ. ಇನ್ನು ನಟ ಪವನ್ ಕಲ್ಯಾಣ್ ಅವರ ಮಕ್ಕಳಾದ ಅಕಿರಾ ನಂದನ್ ಮತ್ತು ಆದ್ಯ ಕೂಡ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್‌ ಮೇಲೆ ಮೊದಲ ಬಾರಿ ಇಂಥ ಆರೋಪ: ಕಾರ್ತಿಕ್​ಗೂ ಕ್ಲಾಸ್ ಕೊಟ್ಟ ಕಿಚ್ಚ

ಇತ್ತೀಚಿನ ವರದಿಗಳ ಪ್ರಕಾರ ಚಿರಂಜೀವಿ, ವರುಣ್ ತೇಜ್, ಸಾಯಿ ಧರಮ್ ತೇಜ್ ಮತ್ತು ಅಲ್ಲು ಅರ್ಜುನ್ ಅವರು ತಮ್ಮ ಕುಟುಂಬಸ್ಥರ ಜೊತೆ ಸಂಕ್ರಾಂತಿ ಆಚರಿಸಲು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಮತ್ತೊಂದು ವಿಡಿಯೋದಲ್ಲಿ, ಪವನ್ ಕಲ್ಯಾಣ್ ಮತ್ತು ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರ ಮಕ್ಕಳು ಅಕಿರಾ ನಂದನ್, ಆದ್ಯ ಕೂಡ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಇದೀಗ ರಾಮ್​ ಚರಣ್ - ಉಪಾಸನಾ ದಂಪತಿಯ ವಿಡಿಯೋ ಕೂಡ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 'ಸಲಾರ್'​ ಸಕ್ಸಸ್​ ಸೆಲೆಬ್ರೇಶನ್​: ಫೋಟೋ - ವಿಡಿಯೋಗಳಿಲ್ಲಿವೆ

ಆರ್​​ಆರ್​​ಆರ್​ ಮೂಲಕ ವಿಶ್ವಾದ್ಯಂತ ಜನಪ್ರಿಯರಾಗಿರುವ ನಟ ರಾಮ್ ಚರಣ್ ಅವರ ಮುಂದಿನ ಚಿತ್ರ 'ಗೇಮ್ ಚೇಂಜರ್'. ಆ್ಯಕ್ಷನ್ ಥ್ರಿಲ್ಲರ್ ಪ್ರಾಜೆಕ್ಟ್​ನಲ್ಲಿ ರಾಮ್​ ಜೊತೆ ಕಿಯಾರಾ ಅಡ್ವಾಣಿ ಅಭಿನಯಿಸುತ್ತಿದ್ದಾರೆ. ಶಂಕರ್ ಆ್ಯಕ್ಷನ್​ ಕಟ್​​ ಹೇಳುತ್ತಿರುವ ಗೇಮ್​ ಚೇಂಜರ್ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.