ETV Bharat / entertainment

'ರಾಲಿಯಾ' ಪುತ್ರಿಗೆ ನಾಮಕರಣ: 'ರಾಹಾ' ಅರ್ಥವೇನು ಗೊತ್ತೇ? - ranbir baby name raha

ರಣಬೀರ್​ ಕಪೂರ್ ಮತ್ತು ಆಲಿಯಾ ಭಟ್​ ತಮ್ಮ ಮಗಳಿಗೆ 'ರಾಹಾ' (Raha) ಎಂದು ಹೆಸರಿಟ್ಟಿದ್ದಾರೆ.

raliya couple name newborn baby as Raha
ರಾಲಿಯಾ ಪುತ್ರಿಗೆ ನಾಮಕರಣ
author img

By

Published : Nov 25, 2022, 12:38 PM IST

Updated : Nov 25, 2022, 2:45 PM IST

ಬಾಲಿವುಡ್​​ ಚಿತ್ರರಂಗದ ಸ್ಟಾರ್​ ಕಪಲ್​​ ರಣಬೀರ್​ ಕಪೂರ್ ಮತ್ತು ಆಲಿಯಾ ಭಟ್​ ತಮ್ಮ ಮುದ್ದು ಮಗುವಿಗೆ 'ರಾಹಾ' ಎಂದು ನಾಮಕರಣ ಮಾಡಿದ್ದಾರೆ. ಬಹು ಅರ್ಥವುಳ್ಳ ಈ ಹೆಸರಿಗೆ ಅಭಿಮಾನಿಗಳ ಮೆಚ್ಚುಗೆಯೂ ಸಿಕ್ಕಿದೆ.

raliya couple name newborn baby as Raha
'ರಾಹಾ' ಅರ್ಥ

ಬಹುದಿನಗಳ ಕಾಲ ಬಾಲಿವುಡ್ ಪ್ರೇಮಪಕ್ಷಿಗಳಾಗಿ ಗುರುತಿಸಿಕೊಂಡ ಆಲಿಯಾ ಭಟ್ ಮತ್ತು ರಣಬೀರ್​ ಕಪೂರ್ ಏಪ್ರಿಲ್​ 14ರಂದು ತಮ್ಮ ಮುಂಬೈನ ಬಾಂದ್ರಾ ನಿವಾಸದಲ್ಲಿ ಹಸೆಮಣೆ ಏರಿದ್ದರು. ನವೆಂಬರ್​ 6ರಂದು ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಇದೀಗ ಮಗುವಿನ ಹೆಸರು ಬಹಿರಂಗಪಡಿಸಿದ್ದು, ಈ ಕುರಿತಾಗಿ ಆಲಿಯಾ ಭಟ್​ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

raliya couple name newborn baby as Raha
ತಾಯಿಯಾದ ಬಳಿಕ ನಟಿ ಆಲಿಯಾ ಹಂಚಿಕೊಂಡ ಫೋಟೋಗಳು

ಆಲಿಯಾ ಇನ್​ಸ್ಟಾಗ್ರಾಮ್​ನಲ್ಲಿ ಮಗುವನ್ನು ಹಿಡಿದು ನಿಂತಿರುವ ಫೋಟೋ ಶೇರ್​ ಮಾಡಿದ್ದಾರೆ. ಜೊತೆಗೆ ರಣ್​​ಬೀರ್​ ಕಪೂರ್​ ಸಹ ಇದ್ದಾರೆ. ಇವರ ಹಿಂಬದಿ ಉಡುಗೆಯ ಡಿಸೈನ್​ ಇರುವ ಒಂದು ಫೋಟೋವನ್ನು ನೀವು ಕಾಣಬಹುದು. ಅದರಲ್ಲಿ Raha ಎಂದಿದೆ.

ಜೊತೆಗೆ 'ರಾಹಾ' ಹೆಸರಿನ ಅರ್ಥವನ್ನು ಅವರು ತಿಳಿಸಿದ್ದಾರೆ. ರಾಹಾ ಎಂದರೆ ಪರಿಶುದ್ಧವಾದ ದೈವಿಕ ಮಾರ್ಗ. ಸಂಸ್ಕೃತದಲ್ಲಿ ರಾಹಾ ಎಂದರೆ ಕುಲ ಎಂದರ್ಥ. ಬಾಂಗ್ಲಾ ಭಾಷೆಯಲ್ಲಿ ವಿಶ್ರಾಂತಿ, ಸೌಕರ್ಯ, ಶಾಂತ. ಅರೇಬಿಕ್​​ನಲ್ಲಿ ಸಂತೋಷ, ಸ್ವಾತಂತ್ರ್ಯ ಮತ್ತು ಆನಂದ ಎಂದರ್ಥ. ನಾವು ಆಕೆಯನ್ನು ಗಮನಿಸಿದಂತೆ ಇವೆಲ್ಲ ಗುಣಗಳು ಆಕೆಯಲ್ಲಿವೆ. ನಮ್ಮ ಕುಟುಂಬದ ಭಾಗವಾಗಿದ್ದಕ್ಕೆ ಧನ್ಯವಾದಗಳು ರಾಹಾ. ನಮ್ಮ ಬದುಕು ಈಗಷ್ಟೇ ಆರಂಭವಾದಂತಿದೆ ಎಂದು ಆಲಿಯಾ ಭಟ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ತಾಯಿಯಾದ ಬಳಿಕ ಮೊದಲ ಫೋಟೋ ಹಂಚಿಕೊಂಡ ಆಲಿಯಾ ಭಟ್

ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ "ಗಾಡ್ ಬ್ಲೆಸ್ ರಾಹಾ" ಎಂದು ಆಲಿಯಾರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್ ಖಾನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮಗುವನ್ನು ಆಶೀರ್ವದಿಸಿದ್ದಾರೆ. ಅಭಿಮಾನಿಗಳು ಮೆಚ್ಚುಗೆಯ ಮಳೆ ಸುರಿಸಿದ್ದಾರೆ.

Last Updated : Nov 25, 2022, 2:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.