ETV Bharat / entertainment

ಸಮಂತಾ ಅಭಿನಯದ 'ಯಶೋದಾ'ಗೆ ಸಾಥ್ ನೀಡಿದ ಸಿಂಪಲ್ ಸ್ಟಾರ್ - ಸಮಂತಾ ಅಭಿನಯದ ಯಶೋದಾ ಚಿತ್ರ

'ಯಶೋದಾ' ಸಿನೆಮಾ ಪ್ಯಾನ್​ ಇಂಡಿಯಾ ಮಾದರಿಯಲ್ಲಿ ಬರುತ್ತಿದ್ದು, ಐದು ವಿವಿಧ ಭಾಷೆಗಳ ಟ್ರೈಲರ್​ಗಳನ್ನು ಆಯಾ ಚಿತ್ರರಂಗದ ಜನಪ್ರಿಯ ನಟರು ಬಿಡುಗಡೆ ಮಾಡಲಿದ್ದಾರೆ.

rakshit-shetty-to-release-yashoda-movie-trailer
ಸಮಂತಾ ಅಭಿನಯದ 'ಯಶೋದಾ'ಗೆ ಸಾಥ್ ಕೊಟ್ಟ ಸಿಂಪಲ್ ಸ್ಟಾರ್
author img

By

Published : Oct 26, 2022, 9:45 AM IST

ಟಾಲಿವುಡ್ ಬ್ಯೂಟಿ ಸಮಂತಾ ಅಭಿನಯದ 'ಯಶೋದಾ' ಚಿತ್ರವು ನವೆಂಬರ್ 11ರಂದು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಬಿಡುಗಡೆಯಾಗಲಿದೆ. ಇದರಲ್ಲಿ ಕನ್ನಡದ ಟ್ರೈಲರ್​ನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅ. 27ರಂದು ಸಂಜೆ 5:36ಕ್ಕೆ ಬಿಡುಗಡೆ ಮಾಡಲಿದ್ದಾರೆ.

ಬೇರೆ ಭಾಷೆಗಳಲ್ಲಿ ಯಶೋದಾ ಟ್ರೈಲರ್​ಗಳನ್ನು ಆಯಾ ಭಾಷೆಗಳ ಜನಪ್ರಿಯ ನಟರು ಬಿಡುಗಡೆ ಮಾಡಲಿದ್ದಾರೆ. ಯಶೋದಾ ಒಂದು ಹೊಸ ಶೈಲಿಯ ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ಚಿತ್ರವನ್ನು ಶಿವಲೆಂಕ ಕೃಷ್ಣ ಪ್ರಸಾದ್ ತಮ್ಮ ಶ್ರೀದೇವಿ ಮೂವಿ ಪ್ರೊಡಕ್ಷನ್ಸ್ ಬ್ಯಾನರ್​ನಡಿ ನಿರ್ಮಿಸಿದ್ದಾರೆ. ಹರಿ-ಹರೀಶ್ ಈ ಚಿತ್ರವನ್ನು ಜಂಟಿಯಾಗಿ ನಿರ್ದೇಶಿಸಿದ್ದಾರೆ.

rakshit-shetty-to-release-yashoda-movie-trailer
'ಯಶೋದಾ' ಟ್ರೈಲರ್​ ಬಿಡುಗಡೆ ಮಾಡಲಿರುವ ರಕ್ಷಿತ್​ ಶೆಟ್ಟಿ

ಸಮಂತಾ ಜೊತೆಗೆ ಈ ಚಿತ್ರದಲ್ಲಿ ವರಲಕ್ಷ್ಮೀ ಶರತ್ ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮ, ಸಂಪತ್ ರಾಜ್, ಶತ್ರು, ಮಧಿರಿಮಾ, ಕಲ್ಪಿಕಾ ಗಣೇಶ್, ದಿವ್ಯ ಶ್ರೀಪಾದ, ಪ್ರಿಯಾಂಕಾ ಶರ್ಮ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಂ. ಸುಕುಮಾರ್ ಅವರ ಛಾಯಾಗ್ರಹಣವಿದೆ.

ಇದನ್ನೂ ಓದಿ: 'ಕೆಜಿಎಫ್' ಹಿಂದಿಕ್ಕಿ ಎರಡನೇ ಅತಿದೊಡ್ಡ ಕನ್ನಡ ಚಿತ್ರವಾಗಿ ಹೊರಹೊಮ್ಮಿದ 'ಕಾಂತಾರ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.