ಕಿರಿಕ್ ಪಾರ್ಟಿ ಜೋಡಿಯಿಂದ ಬ್ಯಾಚುಲರ್ ಪಾರ್ಟಿ: 2016ರಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಆಗುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿತ್ತು. ಈ ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಒಟ್ಟಿಗೆ ಸಿನಿಮಾ ಮಾಡಿರಲಿಲ್ಲ. ಇದೀಗ ಆರು ವರ್ಷಗಳ ಬಳಿಕ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡುತ್ತಿದೆ. ಹೊಸ ಸಿನಿಮಾಗೆ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಟೈಟಲ್ ಇಡಲಾಗಿದೆ. ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ಬದಲಿಗೆ ನಿರ್ಮಾಪಕರಾಗಿ ಹಣ ಹಣ ಹಾಕುತ್ತಿದ್ದು, ರಿಷಬ್ ಶೆಟ್ಟಿ ನಿರ್ದೇಶನದ ಬದಲು ಹೀರೋ ಆಗಿ ಆಕ್ಟ್ ಮಾಡುತ್ತಿದ್ದಾರೆ. ಇಲ್ಲಿ ರಿಷಬ್ ಶೆಟ್ಟಿ ಜೊತೆಗೆ ದೂದ್ ಪೇಡಾ ದಿಗಂತ್ ಹಾಗೂ ಅಚ್ಯುತ್ ಕುಮಾರ್ ಜೊತೆಯಾಗಿದ್ದಾರೆ.
ರಕ್ಷಿತ್ ಶೆಟ್ಟಿ ತಮ್ಮ ಪರಂವಃ ಸ್ಟುಡಿಯೋಸ್ ಅಡಿ ಕಾಮಿಡಿ ಥ್ರಿಲ್ಲರ್ ಕಥೆ ಆಧರಿಸಿರೋ ಬ್ಯಾಚುಲರ್ ಪಾರ್ಟಿ ಸಿನಿಮಾ ರಿವೀಲ್ ಮಾಡಿದ್ದೇವೆ ಅಂತಾ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ರಿವೀಲ್ ಆಗಿರುವ ಪೋಸ್ಟರ್ನಲ್ಲಿ ನಟರಾದ ದಿಗಂತ್, ರಿಷಬ್ ಶೆಟ್ಟಿ, ಅಚ್ಯುತ್ ಕುಮಾರ್ ಜೊತೆಯಾಗಿ ಕಾರಿನ ಒಳಗೆ ಕುಳಿತಿರುವುದನ್ನು ಕಾಣಬಹುದು. ಕಾರಿನ ಹಿಂಭಾಗದ ಸೀಟಿನಲ್ಲಿ ಮೂವರು ಬಹಳ ವಿಭಿನ್ನ ಆಗಿರುವ ಕಾಸ್ಟೂಮ್ ಧರಿಸಿದ್ದಾರೆ. ಜೊತೆಗೆ ರಿಷಬ್ ಕೈಯಲ್ಲಿ ಭೂತ ಕನ್ನಡಿ ಹಿಡಿದು ಏನನ್ನೋ ಡಿಟೆಕ್ಟಿವ್ ಕೆಲಸ ಮಾಡ್ತಾ ಇದ್ರೆ, ಅಚ್ಯುತ್ ಕುಮಾರ್ ಕೈಯಲ್ಲಿ ಎಳನೀರು ಹಿಡಿದು ಚಿಲ್ ಮಾಡಿದ್ದಾರೆ. ಇನ್ನು, ದಿಗಂತ್ ಕೈಯಲ್ಲಿ ರೋಸ್ ಹಿಡಿದು ಮೂಡ್ ಔಟ್ ಆಗಿರೋ ತರ ಕಾಣ್ತಾ ಇದ್ದಾರೆ.
- " class="align-text-top noRightClick twitterSection" data="">
ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಕೂಡ ಒಂದು ಪಾತ್ರ ಮಾಡುತ್ತಿದ್ದಾರೆ. ಅಭಿಜಿತ್ ಮಹೇಶ್ ನಿರ್ದೇಶನ ಮಾಡುತ್ತಿದ್ದು, ಅರ್ಜುನ್ ರಾಮು ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ರಕ್ಷಿತ್ ಶೆಟ್ಟಿ ಅರ್ಪಿಸುವ, ಪರಂವಃ ಸ್ಟುಡಿಯೋಸ್ ಹಾಗೂ ಜಿಎಸ್ ಗುಪ್ತಾ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಿಸುತ್ತಿದ್ದಾರೆ. ಸದ್ಯ ಬ್ಯಾಚುಲರ್ ಪಾರ್ಟಿ ಸಿನಿಮಾದ ಪೋಸ್ಟರ್ ಕುತೂಹಲ ಮೂಡಿಸಿದ್ದು, ಗಾಂಧಿನಗರದಲ್ಲಿ ಟಾಕ್ ಆಗುತ್ತಿದೆ.
(ಇದನ್ನೂ ಓದಿ: ಸಿನಿಮಾ ಗೆದ್ದ ಖುಷಿ: ಚಾರ್ಲಿ ಹೆಸರಲ್ಲಿ 5 ಕೋಟಿ, ಚಿತ್ರ ತಂಡಕ್ಕೆ 10 ಕೋಟಿ ರೂ. ಕೊಟ್ಟ ರಕ್ಷಿತ್ ಶೆಟ್ಟಿ)