ETV Bharat / entertainment

ಒಂದೇ ತಟ್ಟೆಯಲ್ಲಿ ಊಟ ಮಾಡಿದ ರಿಷಬ್​, ಪ್ರಮೋದ್​ ಮತ್ತು ರಕ್ಷಿತ್​ ಶೆಟ್ಟಿ: ವಿಡಿಯೋ ಹಂಚಿಕೊಂಡ ನಟಿ ಶೀತಲ್​ ಶೆಟ್ಟಿ - ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬ

ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಈ ವಿಡಿಯೋವನ್ನು ರಿವೀಲ್​ ಮಾಡಲಾಗಿದೆ.

ರಿಷಬ್​, ಪ್ರಮೋದ್​ ಮತ್ತು ರಕ್ಷಿತ್​ ಶೆಟ್ಟಿ
ರಿಷಬ್​, ಪ್ರಮೋದ್​ ಮತ್ತು ರಕ್ಷಿತ್​ ಶೆಟ್ಟಿ
author img

By

Published : Jul 7, 2023, 9:09 PM IST

Updated : Jul 7, 2023, 9:44 PM IST

ಒಂದೇ ತಟ್ಟೆಯಲ್ಲಿ ಊಟ ಮಾಡಿದ ರಿಷಬ್​ ಮತ್ತು ರಕ್ಷಿತ್​ ಶೆಟ್ಟಿ

ಕನ್ನಡ ಚಿತ್ರರಂಗದಲ್ಲಿ ಕುಚಿಕೋ ಗೆಳೆಯರು ಅಂದಾಕ್ಷಣ ಎಲ್ಲರ ಕಣ್ಮುಂದೆ ಬರೋದು ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಹಾಗು ರೆಬಲ್​ ಸ್ಟಾರ್​ ಡಾ.ಅಂಬರೀಷ್. ಈ ದಿಗ್ಗಜರು ಬಳಿಕ ಚಿತ್ರರಂಗದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಆತ್ಮೀಯ ಗೆಳೆಯರಾಗಿದ್ದಾರೆ. ಈ ಸಾಲಿನಲ್ಲಿ ಈಗ ನಟ ರಕ್ಷಿತ್ ಶೆಟ್ಟಿ ಹಾಗು ರಿಷಬ್ ಶೆಟ್ಟಿ ಗೆಳತನ ಅಂದ್ರೆ ತಪ್ಪಿಲ್ಲ.

ಸದ್ಯ ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ ಒಂದು ಕಡೆಯಾದರೆ. ಚಾರ್ಲಿ 777 ಸಿನಿಮಾದಿಂದ ಕೋಟಿ ಕೋಟಿ ಹಣ ಮಾಡುವುದರ ಜೊತೆಗೆ ತಾನು ಪ್ಯಾನ್ ಇಂಡಿಯಾ ಸ್ಟಾರ್ ಅದವರಲ್ಲಿ ರಕ್ಷಿತ್ ಶೆಟ್ಟಿ ಕೂಡ ಒಬ್ಬರು. ಈ ಗೆಳತನಕ್ಕೆ ಸಾಕ್ಷಿಯಾಗಿ ರಿಷಬ್ ಮತ್ತು ರಕ್ಷಿತ್ ಶೆಟ್ಟಿ ಒಂದೇ ತಟ್ಟೆಯಲ್ಲಿ ಊಟ ಮಾಡುವ ಹಳೆ ವಿಡಿಯೋ ಇವರು ಆತ್ಮೀಯ ಸ್ನೇಹಿತರು ಅನ್ನೋದು ಗೊತ್ತಾಗುತ್ತದೆ.

ಇಂದು ರಿಷಬ್ ಶೆಟ್ಟಿ ಹುಟ್ಟು ಹಬ್ಬ ಈ ಹಿನ್ನಲೆಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಒಟ್ಟಿಗೆ ಒಂದೇ ತಟ್ಟೆಯಲ್ಲಿ ಹಂಚಿಕೊಂಡು ಊಟ ಮಾಡುವ ವಿಡಿಯೋವೊಂದು ರಿವೀಲ್ ಆಗಿದೆ. ಇವರ ಜೊತೆಗೆ ಪ್ರಮೋದ್ ಶೆಟ್ಟಿ ಕೂಡ ಈ ಗೆಳೆಯರ ಜೊತೆ ಊಟ ಮಾಡುವ ವಿಡಿಯೋವನ್ನು ನಟಿ ಶೀಥಲ್ ಶೆಟ್ಟಿ ಇವರಿಬ್ಬರ ಸ್ನೇಹದ ಬಗ್ಗೆ ವಿಡಿಯೋವನ್ನು ರಿವೀಲ್ ಮಾಡಿದ್ದು, "ಈ ಕ್ಷಣವನ್ನು ತುಂಬಾ ಮುದ್ದಾಗಿದೆ" ಎಂದು ಬರೆದುಕೊಂಡಿದ್ದಾರೆ.

ಇನ್ನು ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಒಟ್ಟಿಗೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದು, ಇವರ ಮಧ್ಯೆ ಒಳ್ಳೆಯ ಫ್ರೆಂಡ್​ ಶಿಪ್ ಇದೆ. ಈ ಸ್ನೇಹದ ಬಗ್ಗೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಗೆಳತನದ ಬಗ್ಗೆ ಹೇಳಿಕೊಂಡಿದ್ದಾರೆ. ರಿಷಬ್ ಹೇಳುವ ಹಾಗೇ ರಕ್ಷಿತ್ ಶೆಟ್ಟಿ ಅವರನ್ನು ರಿಷಬ್ ಮೊದಲು ನೋಡಿದಾಗ ಬೇರೆಯದೇ ಅಭಿಪ್ರಾಯ ಹೊಂದಿದ್ದರಂತೆ. ಶ್ರೀಮಂತರ ಮನೆಯ ಮಕ್ಕಳು ಇವರಿಗೆಲ್ಲ ಸಿನಿಮಾ ಮೇಲೆ ಪ್ರೀತಿ ಇರುವುದಿಲ್ಲ ಎಂದು ಭಾವಿಸಿದರಂತೆ. ತುಗ್ಲಕ್ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಒಟ್ಟಾಗಿ ನಟಿಸಿದ್ದರು. ರಕ್ಷಿತ್ ಶೆಟ್ಟಿ ಅವರಿಗೆ ಸಿನಿಮಾ ಮೇಲೆ ನಿಜವಾದ ಪ್ರೀತಿ ಇದೆ ಎಂಬುದು ಆ ಸಿನಿಮಾ ಸೋತಾಗ ರಿಷಬ್​​ಗೆ ಗೊತ್ತಾಗಿತ್ತು.

ಗಾಂಧಿನಗರದ ತ್ರಿಭುವನ್ ಥಿಯೇಟರ್​ ಮೆಟ್ಟಿಲ ಮೇಲೆ ರಕ್ಷಿತ್ ಕೂತಿದ್ದ. ಆತನಿಗೆ ಸಿನಿಮಾ ಸೋತ ನೋವಿತ್ತು. ಆಗ ನನಗೆ ಅನಿಸಿದ್ದು ಈತ ಏನೋ ಮಾಡುತ್ತಾನೆ ಎಂದು. ರಿಕ್ಕಿ ಸಿನಿಮಾಗೆ ಈತ ಸೂಕ್ತ ಎಂದು ಅನಿಸಿತು. ಇಬ್ಬರೂ ರಿಕ್ಕಿ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೆವು ಎಂದು ಈ ಹಿಂದೆ ಕೂಡ ಹೇಳಿಕೊಂಡಿದ್ದಾರೆ. ರಿಕ್ಕಿ ರಿಷಬ್ ಶೆಟ್ಟಿ ನಿರ್ದೇಶನದ ಮೊದಲ ಸಿನಿಮಾ. ಇದಾದ ಬಳಿಕ ರಿಷಬ್ ನಿರ್ದೇಶನದ, ರಕ್ಷಿತ್ ನಟನೆಯ ಕಿರಿಕ್ ಪಾರ್ಟಿ ಸಿನಿಮಾ ಸೂಪರ್ ಹಿಟ್ ಆಯಿತು. ಹೀಗಾಗಿ ಇವರ ಮಧ್ಯೆ ಆತ್ಮೀಯ ಗೆಳತನ ಇದೆ ಅನ್ನೋದಿಕ್ಕೆ ರಿಷಬ್ ಶೆಟ್ಟಿ ಸಿನಿಮಾಗೆ ರಕ್ಷಿತ್ ಶೆಟ್ಟಿ ಸಹಾಯ ಮಾಡೋದು. ಮತ್ತೆ ರಕ್ಷಿತ್ ಚಿತ್ರಕ್ಕೆ ರಿಷಬ್ ಶೆಟ್ಟಿ ಸಪೋರ್ಟ್ ಮಾಡುವ ಗುಣ ಹೊಂದಿರುವ ಸ್ಟಾರ್ ನಟರಾಗಿ ಗುರುತಿಸಿಕೊಂಡಿರೋದು ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಿಸಿದೆ.

ಇದನ್ನೂ ಓದಿ : Rishab Shetty Birthday: ಅಭಿಮಾನಿಗಳೊಂದಿಗೆ ಇಂದು 'ಕಾಡುಬೆಟ್ಟು ಶಿವ'ನ ಜನ್ಮದಿನ - ಡಿವೈನ್​ ಸ್ಟಾರ್ ರಿಷಬ್‌ ಶೆಟ್ಟಿ ಮುಂದಿನ ಸಿನಿಮಾಗಳಿವು..

Last Updated : Jul 7, 2023, 9:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.