ETV Bharat / entertainment

ಲೋಹಿತ್ ನಿರ್ದೇಶನದ 'ರಾಕ್ಷಸ'ನ ಫಸ್ಟ್ ಲುಕ್ ಬಿಡುಗಡೆ

ಸ್ಯಾಂಡಲ್​ವುಡ್​ನ ಬ್ಯುಸಿ ನಿರ್ದೇಶಕರಲ್ಲಿ ಒಬ್ಬರಾಗಿರುವ ಲೋಹಿತ್ ಅವರ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

author img

By ETV Bharat Karnataka Team

Published : Jan 15, 2024, 12:39 PM IST

'ರಾಕ್ಷಸ' ಚಿತ್ರದ ಫಸ್ಟ್ ಲುಕ್ ಬಿಡುಗಡೆ
'ರಾಕ್ಷಸ' ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ 'ಮಮ್ಮಿ', 'ದೇವಕಿ' ಸಿನಿಮಾ ಖ್ಯಾತಿಯ ನಿರ್ದೇಶಕ ಲೋಹಿತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 'ಕ್ಯಾಪ್ಚರ್' ಮತ್ತು 'ಮಾಫಿಯಾ' ಮೂಲಕ ಸದ್ದು ಮಾಡುತ್ತಿರುವ ಇವರು, ಈ ಎರಡು ಸಿನಿಮಾಗಳ ಬಿಡುಗಡೆಗೂ ಮೊದಲೇ ಇದೀಗ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಹೊಸ ಸಿನಿಮಾಗೆ 'ರಾಕ್ಷಸ' ಎಂದು ಹೆಸರಿಡಲಾಗಿದ್ದು, ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಕನ್ನಡ ಸಿನಿಮಾಪ್ರೇಮಿಗಳ ಕುತೂಹಲ ಹೆಚ್ಚಿಸಿದ್ದಾರೆ.

ಚಿತ್ರದ ಫಸ್ಟ್ ಲುಕ್
ಚಿತ್ರದ ಫಸ್ಟ್ ಲುಕ್

'ರಾಕ್ಷಸ'ನಾಗಿ ಸ್ಯಾಂಡಲ್​ವುಡ್​ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿದ್ದಾರೆ. ರಿಲೀಸ್ ಆಗಿರುವ ಪೋಸ್ಟರ್​​ನಲ್ಲಿ ಪ್ರಜ್ವಲ್ ದೇವರಾಜ್ ಗನ್ ಹಿಡಿದಿದ್ದಾರೆ. ಪುಟ್ಟ ಮಗುವೊಂದು ಪ್ರಜ್ವಲ್ ಕೈ ಬೆರಳು ಹಿಡಿದಿದೆ. ನಟನ ಕೈಯಲ್ಲಿರುವ ಟ್ಯಾಟೂ ಗಮನ ಸೆಳೆಯುತ್ತಿದೆ.

ಈಗಾಗಲೇ ಪ್ರಜ್ವಲ್ ಜೊತೆ 'ಮಾಫಿಯಾ' ಸಿನಿಮಾ ಮಾಡಿರುವ ಲೋಹಿತ್, ಆ ಸಿನಿಮಾ ರಿಲೀಸ್​ಗೂ ಮೊದಲೇ ಇದೀಗ 'ರಾಕ್ಷಸ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದ ಫಸ್ಟ್ ಲುಕ್ ಅನ್ನು ವಿಭಿನ್ನವಾಗಿ ರಿಲೀಸ್ ಮಾಡಲಾಗಿದ್ದು ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕರು ಚಿತ್ರಕ್ಕೆ ಶುಭ ಹಾರೈಸಿದರು. 40 ಜನ ನಿರ್ದೇಶಕರು 'ರಾಕ್ಷಸ' ಸಿನಿಮಾದ ಮೊದಲ ನೋಟ ಬಿಡುಗಡೆ ಮಾಡಿರುವುದು ವಿಶೇಷ. ಈ ಮೂಲಕ ಲೋಹಿತ್ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಚಿತ್ರ ತಂಡ
ಚಿತ್ರ ತಂಡ

ರಾಕ್ಷಸನ ಬಗ್ಗೆ ಹೆಚ್ಚು ಮಾಹಿತಿ ಬಿಟ್ಟುಕೊಡದ ಲೋಹಿತ್, ಕೇವಲ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕವೇ ಕುತೂಹಲ ಹೆಚ್ಚಿಸಿದ್ದಾರೆ. ಸಿನಿಮಾದಲ್ಲಿ ಪ್ರಜ್ವಲ್ ಜೊತೆ ಯಾರೆಲ್ಲಾ ಅಭಿನಯಿಸಿದ್ದಾರೆ, ಇದು ಯಾವ ರೀತಿಯ ಸಿನಿಮಾ ಎನ್ನುವ ಮಾಹಿತಿಯನ್ನು ನಿರ್ದೇಶಕರು ತಿಳಿಸಿಲ್ಲ. ನಬೀನ್ ಪೋಲ್ ಸಂಗೀತ ಚಿತ್ರಕ್ಕಿದೆ.

ಇದನ್ನೂ ಓದಿ: ಥಾಯ್ಲೆಂಡ್‌ನಲ್ಲಿ ಬಾಕ್ಸಿಂಗ್​ ಚಾಂಪಿಯನ್‌ ಆದ 'ಕನ್ನಡತಿ' ಧಾರಾವಾಹಿ ನಟ ಕಿರಣ್ ರಾಜ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.