ETV Bharat / entertainment

'ನಾನು ಮತ್ತು ಗುಂಡ 2' ಸಿನಿಮಾಗೆ ರಾಕೇಶ್​ ಅಡಿಗ ನಾಯಕ - Josh hero Rakesh Adiga

'ನಾನು ಮತ್ತು ಗುಂಡ' ಸಿನಿಮಾದಲ್ಲಿ ಸಾವನ್ನಪ್ಪಿರುವ ನಾಯಕನಿಗೆ ಭಾಗ ಎರಡರಲ್ಲಿ ಪುನರ್ಜನ್ಮ ಸಿಕ್ಕಿದೆ!. ಗೋವಿಂದೇ ಗೌಡ ಹಾಗೂ ನಾಯಿಯ ಪಾತ್ರದ ಮೂಲಕ ಈ ಕಥೆ ಸಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

Nanu matthu Gunda 2
'ನಾನು ಮತ್ತು ಗುಂಡ 2' ಸಿನಿಮಾ
author img

By ETV Bharat Karnataka Team

Published : Jan 12, 2024, 9:53 AM IST

ಸ್ಯಾಂಡಲ್​ವುಡ್​ನಲ್ಲಿ ಸೀಕ್ವೆಲ್​ ಸಿನಿಮಾಗಳ ಅಬ್ಬರ ಜೋರಾಗಿದೆ. ಕೆಲವು ಸಿನಿಮಾಗಳ ಸೀಕ್ವೆಲ್​ಗಳು ಸಿನಿಪ್ರಿಯರ ಮನಸ್ಸು ಕದ್ದಿದ್ದರೆ, ಇನ್ನೂ ಕೆಲವು ಸೀಕ್ವೆಲ್​ಗಳ ಮೊದಲ ಭಾಗದಷ್ಟು ಹಿಟ್​​ ಕಾಣದೆ ನೆಲಕಚ್ಚಿದ್ದೂ ಇದೆ. 2020ರಲ್ಲಿ ತೆರೆಗೆ ಬಂದಿದ್ದ 'ನಾನು ಮತ್ತು ಗುಂಡ' ಸಿನಿಪ್ರಿಯರನ್ನು ಭಾವನಾತ್ಮಕವಾಗಿ ಟಚ್​ ಮಾಡಿತ್ತು. 'ಕಾಮಿಡಿ ಕಿಲಾಡಿಗಳು' ಎಂಬ ರಿಯಾಲಿಟಿ ಶೋದಲ್ಲಿ ವೀಕ್ಷಕರ ಗಮನ ಸೆಳೆದ ಪ್ರತಿಭೆ ಶಿವರಾಜ್​ ಕೆ.ಆರ್​.ಪೇಟೆ ನಾಯಕನಾಗಿ ಅಭಿನಯಿಸಿರುವ ಸಿನಿಮಾ ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ನಿರ್ದೇಶಕ ರಘು ಹಾಸನ್​ 'ನಾನು ಮತ್ತು ಗುಂಡ' ಸಿನಿಮಾ ಸೀಕ್ವೆಲ್​​ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ 'ನಾನು ಮತ್ತು ಗುಂಡ 2' ಚಿತ್ರದ ಟೈಟಲ್​ ಕೂಡ ನಿರ್ದೇಶಕರು ರಿವೀಲ್ ಮಾಡಿದ್ದರು. ಆದರೆ ನಂತರದಲ್ಲಿ ಚಿತ್ರದ ಹೀರೋ ಯಾರು ಅನ್ನೋದು ಗಾಂಧಿನಗರದಲ್ಲಿ ಚರ್ಚೆಯಾಗಿತ್ತು. ಆದರೆ ಆ ಎಲ್ಲಾ ಕುತೂಹಲಕ್ಕೀಗ ತೆರೆ ಬಿದ್ದಿದೆ. 'ಜೋಶ್'​ ಸಿನಿಮಾ ಖ್ಯಾತಿಯ ನಟ ರಾಕೇಶ್​ ಅಡಿಗ 'ನಾನು ಮತ್ತು ಗುಂಡ 2' ಸಿನಿಮಾದ ನಾಯಕ ನಟನಾಗಿ ಆಯ್ಕೆಯಾಗಿದ್ದಾರೆ.

ಈ ಚಿತ್ರದ ಮುಂದುವರೆದ ಭಾಗವಾಗಿ 'ನಾನು ಮತ್ತು ಗುಂಡ 2' ತಯಾರಾಗುತ್ತಿದ್ದು, ಬಹುತೇಕ ಹಳೆಯ ತಂಡವೇ ಕೆಲಸ ಮಾಡುತ್ತಿದೆ. ಮೊದಲ ಭಾಗದಲ್ಲಿ ಮರಣ ಹೊಂದಿದ್ದ ನಾಯಕ ಶಂಕರ​ನಿಗೆ ಎರಡನೇ ಭಾಗದಲ್ಲಿ ಪುನರ್ಜನ್ಮವಾಗಿರುತ್ತದೆ. ಗೋವಿಂದೇ ಗೌಡ ಹಾಗೂ ನಾಯಿಯ ಪಾತ್ರದ ಮೂಲಕ ಚಿತ್ರಕಥೆ ಮುಂದುವರೆಯಲಿದೆ. ಸೋಷಿಯಲ್ ಕನ್ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಚಿತ್ರದಲ್ಲಿದೆ. ಸಂಭಾಷಣೆ ಹಾಗೂ ಸಾಹಿತ್ಯವನ್ನು ರೋಹಿತ್ ರಮನ್ ರಚಿಸಿದ್ದಾರೆ.

ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ರಘು ಹಾಸನ್ ಹೊತ್ತಿದ್ದಾರೆ. ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ 'ನಾನು ಮತ್ತು ಗುಂಡ 2'ಗೆ ಆರ್.ಪಿ.ಪಟ್ನಾಯಕ್ ಸಂಗೀತ, ರುತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ, ತನ್ವಿಕ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗು ರಾಘು ನೃತ್ಯ ನಿರ್ದೇಶನವಿದೆ. ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ.

ಜೋಶ್​ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟ ರಾಕೇಶ್​ ಅಡಿಗ ಹಲವು ಸಿನಿಮಾಗಳನ್ನು ನಾಯಕನಾಗಿ ಮಾತ್ರವಲ್ಲದೆ, ನೆಗೆಟಿವ್​ ಪಾತ್ರಗಳಲ್ಲೂ ಅಭಿನಯಿಸಿದ್ದಾರೆ. ಕೆಲವು ಸಿನಿಮಾಗಳಿಗೆ ಹಿನ್ನೆಲೆ ಗಾಯಕನಾಗಿಯೂ ಕೆಲಸ ಮಾಡಿದ್ದಾರೆ. ಕನ್ನಡ ರಿಯಾಲಿಟಿ ಶೋ ಬಿಗ್​ ಬಾಸ್​ 9ರಲ್ಲಿ ಭಾಗವಹಿಸಿ, ಮನೆಮಾತಾಗಿದ್ದರು.

ಇದನ್ನೂ ಓದಿ: ಮತ್ತೆ ಕಾಂಗರೂ ಸಿನಿಮಾದಲ್ಲಿ ಖಾಕಿ ತೊಟ್ಟು ಅಬ್ಬರಿಸಲಿರುವ ನಟ ಆದಿತ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.