ಮಂಬೈ: ಮಿಸ್ಟರ್ ಆ್ಯಂಡ್ ಮಿಸಸ್ ಮಹಿ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. 2021ರಲ್ಲಿ ತೆರೆಕಂಡಿದ್ದ ರೂಹಿ ಸಿನಿಮಾದ ಸಹ ನಟರಾದ ರಾಜ್‌ಕುಮಾರ್ ರಾವ್ ಮತ್ತು ಜಾಹ್ನವಿ ಕಪೂರ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ತನ್ನ ಟ್ವಿಟರ್ನಲ್ಲಿ ಚಿತ್ರೀಕರಣ ಆರಂಭವಾಗಿರುವುದರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.
'ಫೀಲ್ಡ್ ಸಿದ್ಧವಾಗಿದೆ ಮತ್ತು ಮಿಸ್ಟರ್ ಆ್ಯಂಡ್ ಮಿಸಸ್ ಮಹಿ ತಂಡವು ಸಜ್ಜಾಗಿದೆ! ಮೊದಲನೇ ದಿನದ ಶೂಟಿಂಗ್ ಪ್ರಾರಂಭವಾಗುತ್ತದೆ!' ಎಂದು ಪ್ರೊಡಕ್ಷನ್ ಬ್ಯಾನರ್ ಟ್ವೀಟ್ನಲ್ಲಿ ಮಾಹಿತಿ ಹಂಚಿಕೊಂಡಿದೆ. ಸಿನಿಮಾದಲ್ಲಿ ರಾವ್ ಮತ್ತು ಕಪೂರ್ ಮಹೇಂದ್ರ ಮತ್ತು ಮಹಿಮಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
-
The field is set and team #MrAndMrsMahi is all geared up! Day 1 of shoot begins!🏏 pic.twitter.com/2sknHwG4oA
— Dharma Productions (@DharmaMovies) May 9, 2022 " class="align-text-top noRightClick twitterSection" data="
">The field is set and team #MrAndMrsMahi is all geared up! Day 1 of shoot begins!🏏 pic.twitter.com/2sknHwG4oA
— Dharma Productions (@DharmaMovies) May 9, 2022The field is set and team #MrAndMrsMahi is all geared up! Day 1 of shoot begins!🏏 pic.twitter.com/2sknHwG4oA
— Dharma Productions (@DharmaMovies) May 9, 2022
ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ಸಿನಿಮಾದ ನಿರ್ದೇಶಕರಾದ ಶರಣ್ ಶರ್ಮಾ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಕಳೆದ ವರ್ಷದ ನವೆಂಬರ್ನಲ್ಲೇ ಈ ಚಿತ್ರದ ಬಗ್ಗೆ ಘೋಷಿಸಿತ್ತು. ಅಕ್ಟೋಬರ್ 7 ಕ್ಕೆ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ.
ಇದನ್ನೂ ಓದಿ: ದಕ್ಷಿಣ ಕೊರಿಯಾದಲ್ಲಿ ಕೆಜಿಎಫ್ 2 ಪ್ರದರ್ಶನ.. ಈ ದಾಖಲೆ ಬರೆದ ಮೊದಲ ಕನ್ನಡ ಚಿತ್ರ!